ನ್ಯೂಯಾರ್ಕ್,ಫೆ.25- ನ್ಯೂಯಾರ್ಕ್-ಮ್ಯಾನ್‍ಹ್ಯಾಟನ್‍ನ ಅಪಾರ್ಟ್‍ಮೆಂಟ್‍ನ ಕಟ್ಟಡದಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಯಿಂದ ಉಂಟಾದ ವಿನಾಶಕಾರಿ ಬೆಂಕಿ ಅವಘಡದಲ್ಲಿ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ. ಮೃತ ಫಾಜಿಲ್ ಖಾನ್(27) ನ್ಯೂಯಾರ್ಕ್ ಮೂಲದ ಮಾಧ್ಯಮ ಕಂಪನಿ ದಿ ಹೆಚಿಂಗರ್ ವರದಿಯಲ್ಲಿ ಪತ್ರಕರ್ತರಾಗಿದ್ದರು. ಮತ್ತು ಎಕ್ಸ್ ನಲ್ಲಿನ ಅವರ ಪ್ರೊಫೈಲ್ ಪ್ರಕಾರ, ಅವರು ಕೊಲಂಬಿಯಾ ಜರ್ನಲಿಸಂ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದರು ಎಂಬುದು ಗೊತ್ತಾಗಿದೆ.
ವಿನಾಶಕಾರಿ ಬೆಂಕಿ ಅವಘಡದಲ್ಲಿ ಭಾರತೀಯ ಪ್ರಜೆ ಫಾಜಿಲ್ ಖಾನ್ ಸಾವಿನ ಸುದ್ದಿ ದುಃಖ ತಂದಿದೆ. ಖಾನ್ ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಾನ್ಸುಲೇಟ್ ಸಂಪರ್ಕದಲ್ಲಿದ್ದು, ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಹಿಂದಿರುಗಿಸಲು ನಾವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದನ್ನು ಮುಂದುವರಿಸುತ್ತೇವೆ.
ಅವರ ಪಾರ್ಥಿವ ಶರೀರವನ್ನು ಭಾರತದಲ್ಲಿರುವ ಅವರ ಕುಟುಂಬಕ್ಕೆ ತಲುಪಿಸಲು ಸಾಧ್ಯವಿರುವ ಎಲ್ಲ ನೆರವನ್ನು ನೀಡಲಾಗುತ್ತಿದೆ ಎಂದು ನ್ಯೂಯಾರ್ಕ್‍ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ತಿಳಿಸಿದ್ದಾರೆ.
ಅಂತಹ ಮಹಾನ್ ಸಹೋದ್ಯೋಗಿ ಮತ್ತು ಅದ್ಭುತ ವ್ಯಕ್ತಿಯನ್ನು ಕಳೆದುಕೊಂಡು ನಾವು ಜರ್ಜರಿತಾಗಿದ್ದೇವೆ. ಅವನು ತುಂಬಾ ಮಿಸ್ ಆಗುತ್ತಾನೆ ಎಂದು ಸ್ನೇಹಿತರು ಕಂಬನಿ ಮಿಡಿದಿದ್ದಾರೆ.
ನಡು ರಸ್ತೆಯಲ್ಲೇ ಯುವಕನ ಭೀಕರ ಕೊಲೆ
ಘಟನೆ ವಿವರ: ಮ್ಯಾನ್‍ಹ್ಯಾಟನ್‍ನ ಹಾರ್ಲೆಮ್‍ನಲ್ಲಿರುವ 2 ಸೇಂಟ್ ನಿಕೋಲಸ್ ಪ್ಲೇಸ್‍ನಲ್ಲಿರುವ ಆರು ಅಂತಸ್ತಿನ ವಸತಿ ಕಟ್ಟಡ ಹೊಂದಿದ್ದು, 3ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಸುಮಾರು 17 ಜನರು ಗಾಯಗೊಂಡಿದ್ದಾರೆ. ವಿನಾಶಕಾರಿ ಬೆಂಕಿಯು ಲಿಥಿಯಂ-ಐಯಾನ್ ಬ್ಯಾಟರಿಯಿಂದ ಬೆಂಕಿ ಎದ್ದಿದೆ. ಸಂತ್ರಸ್ತರು ಕಟ್ಟಡದ 5ನೇ ಮಹಡಿಯಲ್ಲಿ ಸಿಲುಕಿಕೊಂಡಿದ್ದರು. ಒಟ್ಟು 18 ರೋಗಿಗಳಿದ್ದು, ಈ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.