ಕ್ಯಾರಕಾಸ್,ಮಾ.15-ರಾಜಕೀಯ ಬಿಕ್ಕಟ್ಟಿನ ನಂತರ ಮೊದಲ ಬಾರಿಗೆ ವೆನೆಜುವೆಲಾದ ಅಮೆರಿಕ ರಾಯಭಾರ ಕಚೇರಿಯ ಮೇಲೆ ಅಮೆರಿಕದ ಧ್ವಜವನ್ನು ಹಾರಿಸಲಾಗಿದೆ. ನಿಕೋಲಸ್ ಮಡುರೊ ಅವರನ್ನು ಅಮೆರಿಕದ ಪಡೆಗಳು ಹೈಜಾಕ್ ಮಾಡಿದ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿನ ಇತ್ತೀಚಿನ ಬದಲಾವಣೆಯನ್ನು ಗಮನಸೆಳೆದಿದೆ.
2019ರಲ್ಲಿ ಇಳಿಸಲಾಗಿದ್ದ ಧ್ವಜವು ಈಗ ಮತ್ತೆ ಬೀಸುತ್ತಿದ್ದರೂ, ಕಟ್ಟಡದಲ್ಲೂ ಕೂಡ ನವೀಕರಣ ಕಾಮಗಾರಿ ನಡೆಯುತ್ತಿದೆ ಮತ್ತು ರಾಯಭಾರ ಕಚೇರಿ ಯಾವಾಗ ಸಂಪೂರ್ಣವಾಗಿ ತೆರೆಯುತ್ತದೆ ಎಂಬುದು ಸ್ಪಷ್ಟವಾಗಿಲ್ಲ.
ಮಡುರೊ ಅವರ ಉತ್ತರಾಧಿಕಾರಿ,ಹಂಗಾಮಿ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಹಲವಾರು ಹೇಳಿಕೆ ನಂತರ ಹಲವು ಬೆಳವಣಿಗೆ ನಡೆದಿದೆ. ಏಳು ವರ್ಷಗಳ ನಂತರ ಧ್ವಜವನ್ನು ಹಾರಿಸಲಾಯಿತು ಎಂದು ಯುಎಸ್ ರಾಯಭಾರ ಕಚೇರಿ ತಂಡವು ತನ್ನ ಸಾಮಾಜಿಕ ಮಾಧ್ಯವದಲ್ಲಿ ಪೋಸ್ಟ್ ಮಾಡಲಾಗಿದೆ.
ಇಲ್ಲಿನ ಜನರು ಕೂಡ ರಾಯಭಾರ ಕಚೇರಿಯಲ್ಲಿ ಅಮೆರಿಕದ ಧ್ವಜವನ್ನು ಹಾರಿಸಿದ್ದರಿಂದ ಆಶ್ಚರ್ಯ ಮತ್ತು ಸಂತೋಷಗೊಂಡಿದ್ದಾರೆ.ಬೇಗನೆ ದೇಶದ ಪರಿಸ್ಥಿತಿ ಸರಿ ಹೋಗಲಿ ಎಂದರು. ಅಮೆರಿಕ ಅಧ್ಯಕ್ಷ ಟ್ರಂಪ್, ಮಡುರೊ ಅವರನ್ನು ಅಧಿಕಾರದಿಂದ ಬಲವಂತವಾಗಿ ತೆಗೆದುಹಾಕುವ ಮತ್ತು ನ್ಯೂಯಾರ್ಕ್‌ನಲ್ಲಿ ಅವರ ಪತ್ನಿಯೊಂದಿಗೆ ಜೈಲಿಗೆ ಹಾಕುವ ಅವರ ನಿರ್ಧಾರ ಮತ್ತು ದಕ್ಷಿಣ ಅಮೆರಿಕಾದ ದೇಶದ ತೈಲ ಉದ್ಯಮದಲ್ಲಿ ಬೆಳೆಯುತ್ತಿರುವ ಅಮೆರಿಕದ ದಾಳಿಯನ್ನು ಹಲವಾರು ದೇಶಗಳು ಟೀಕಿಸಿವೆ.
