Saturday, April 11, 2026
Homeಅಂತಾರಾಷ್ಟ್ರೀಯಭಾರತದತ್ತ ಬರುತ್ತಿವೆ ಎಲ್‌ಪಿಜಿ ಹೊತ್ತ ಮತ್ತೆರಡು ಹಡಗುಗಳು

ಭಾರತದತ್ತ ಬರುತ್ತಿವೆ ಎಲ್‌ಪಿಜಿ ಹೊತ್ತ ಮತ್ತೆರಡು ಹಡಗುಗಳು

India's oil, LPG lifeline: Two more tankers set to cross Strait of Hormuz

ಟೆಹ್ರಾನ್‌, ಮಾ.21- ಭಾರತದ ಎರಡು ದ್ರವೀಕೃತ ಪೆಟ್ರೋಲಿಯಂ ಅನಿಲ ಟ್ಯಾಂಕರ್‌ಗಳು ಹಾರ್ಮುಜ್‌ ಜಲಸಂಧಿ ದಾಟಲು ಇರಾನ್‌ ಸಮ್ಮತಿಸಿದೆ.ಹೀಗಾಗಿ ಟ್ಯಾಂಕರ್‌ಗಳು ಹಾರ್ಮುಜ್‌ ಮೂಲಕ ಸಾಗಲು ತಯಾರಿ ನಡೆಸುತ್ತಿವೆ ಎಂದು ವರದಿಯಾಗಿದೆ.

ಫೆಬ್ರವರಿ 28 ರಂದು ಯುದ್ಧ ಪ್ರಾರಂಭವಾದಾಗಿನಿಂದ ಇರಾನ್‌ ಮತ್ತು ಓಮನ್‌ ನಡುವಿನ ಕಿರಿದಾದ ಸಮುದ್ರ ಮಾರ್ಗದಲ್ಲಿ ನೂರಾರು ಹಡಗುಗಳು ಸಿಲುಕಿಕೊಂಡಿದ್ದವು. ಆದಾಗ್ಯೂ, ಭಾರತದ ರಾಜತಾಂತ್ರಿಕ ಸಂಪರ್ಕದ ನಂತರ, ಎರಡು ಭಾರತೀಯ ಹಡಗುಗಳಾದ ಶಿವಾಲಿಕ್‌ ಮತ್ತು ನಂದಾ ದೇವಿ ಸುರಕ್ಷಿತವಾಗಿ ಜಲಸಂಧಿಯನ್ನು ದಾಟಿ ಗುಜರಾತ್‌ ತಲುಪಿವೆ.

ಗಲ್ಫ್ ಸಮುದ್ರದಲ್ಲಿ ಲಂಗರು ಹಾಕಲಾಗಿರುವ ಇನ್ನೂ ಎರಡು ಭಾರತೀಯ ಟ್ಯಾಂಕರ್‌ಗಳು ಶೀಘ್ರದಲ್ಲೇ ಹಾರ್ಮುಜ್‌ ಜಲಸಂಧಿಯನ್ನು ದಾಟುವ ಸಾಧ್ಯತೆಯಿದೆ. ಗಲ್‌್ಫನೊಳಗೆ ಯುನೈಟೆಡ್‌ ಅರಬ್‌ ಎಮಿರೇಟ್ಸ್ ಕೇಂದ್ರವಾದ ಶಾರ್ಜಾ ಬಳಿ ಲಂಗರು ಹಾಕಲಾಗಿರುವ ಭಾರತೀಯ ಧ್ವಜ ಹೊತ್ತ ಎಲ್‌ಪಿಜಿ ಟ್ಯಾಂಕರ್‌ಗಳಾದ ಪೈನ್‌ ಗ್ಯಾಸ್‌‍ ಮತ್ತು ಜಗ್‌ ವಸಂತ್‌ ಪ್ರಯಾಣಕ್ಕೆ ಸಿದ್ಧತೆ ನಡೆಸುತ್ತಿವೆ.

ಎರಡು ಎಲ್‌ಪಿಜಿ ಟ್ಯಾಂಕರ್‌ಗಳು ಇಂದು ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಜಗ್‌ ವಸಂತ್‌ ಅನ್ನು ಬಿಪಿಸಿಎಲ್‌ ಮತ್ತು ಪೈನ್‌ ಗ್ಯಾಸ್‌‍ ಅನ್ನು ಐಒಸಿ ಚಾರ್ಟರ್ಡ್‌ ಮಾಡಿವೆ ಎಂದು ತಿಳಿದುಬಂದಿದೆ. ನಿನ್ನೆ ಹಡಗುಗಳು ನೌಕಾಯಾನಕ್ಕೆ ಸಿದ್ಧವಾಗುತ್ತಿವೆಯೇ ಎಂದು ಕೇಳಿದಾಗ, ಭಾರತದ ಫೆಡರಲ್‌ ಶಿಪ್ಪಿಂಗ್‌ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್‌ ಕುಮಾರ್‌ ಸಿನ್ಹಾ, ತಕ್ಷಣದ ವಿವರಗಳು ಲಭ್ಯವಿಲ್ಲ ಎಂದು ಹೇಳಿದ್ದರು.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಮಾತನಾಡಿ, ಗಲ್‌್ಫ ಒಳಗಿರುವ ಭಾರತದ 22 ಹಡಗುಗಳ ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಸಂಚಾರಕ್ಕೆ ದೇಶದ ಪ್ರಯತ್ನ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಇತರ ನಾಯಕರೊಂದಿಗೆ ಅವುಗಳ ಸುರಕ್ಷಿತ ಸಾಗಣೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES

Latest News