Saturday, April 11, 2026
Homeಅಂತಾರಾಷ್ಟ್ರೀಯಯುದ್ಧ ನಿಲ್ಲಿಸೋ ನಿರ್ಧಾರ ಮಾಡಬೇಕಿರುವುದು ನಾವು : ಟ್ರಂಪ್‌ಗೆ ಇರಾನ್‌ ಎಚ್ಚರಿಕೆ

ಯುದ್ಧ ನಿಲ್ಲಿಸೋ ನಿರ್ಧಾರ ಮಾಡಬೇಕಿರುವುದು ನಾವು : ಟ್ರಂಪ್‌ಗೆ ಇರಾನ್‌ ಎಚ್ಚರಿಕೆ

Iran says to 'determine the end of war', vows to ⁠not ⁠allow 'one litre ​of oil' to be exported if US, Isr

ಟೆಹ್ರಾನ್‌, ಮಾ.10- ಯುದ್ಧ ನಿಲ್ಲಿಸೋ ನಿರ್ಧಾರ ಮಾಡಬೇಕಿರುವುದು ಅಮೆರಿಕವಲ್ಲ, ಅದು ಏನಿದ್ದರೂ ನಮ್ಮ ನಿರ್ಧಾರ ಎಂದು ಇರಾನ್‌ನ ಐಆರ್‌ಜಿಸಿ (ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್‌್ಸ ) ಪಡೆ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಎಚ್ಚರಿಕೆ ನೀಡಿದೆ.

ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂಬ ಟ್ರಂಪ್‌ ಹೇಳಿಕೆಗೆ ಐಆರ್‌ಜಿಸಿ ಪಡೆ ಈ ಪ್ರತಿಕ್ರಿಯೆ ನೀಡಿದೆ. ಅಮೆರಿಕ ಮತ್ತು ಇಸ್ರೇಲ್‌ ದಾಳಿಗಳು ಮುಂದುವರಿದರೆ, ಈ ಪ್ರದೇಶದಿಂದ ಒಂದು ಲೀಟರ್‌ ತೈಲವನ್ನೂ ರಫ್ತು ಮಾಡಲು ಇರಾನ್‌ ಅನುಮತಿಸುವುದಿಲ್ಲ ಎಂದು ಐಆರ್‌ಜಿಸಿ ಎಚ್ಚರಿಕೆ ನೀಡಿದೆ.

ಇದು ಜಾಗತಿಕ ಇಂಧನ ಮಾರುಕಟ್ಟೆಗಳಿಗೆ ಭಾರೀ ಹೊಡೆತಕೊಡಲಿದೆ. ನಾವು ಈಗಾಗಲೇ ಗೆದ್ದಿದ್ದೇವೆ, ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂಬ ಟ್ರಂಪ್‌ ಹೇಳಿಕೆಯನ್ನು ಇರಾನ್‌ ಖಂಡಿಸಿದೆ.

ಇದಾದ ಕೆಲವೇ ಕ್ಷಣದಲ್ಲಿ ನಾವು ಸಂಪೂರ್ಣ ಗೆದ್ದಿಲ್ಲ. ಇರಾನ್‌ ಸಂಪೂರ್ಣವಾಗಿ ಮತ್ತು ನಿರ್ಣಾಯಕವಾಗಿ ಸೋಲುವವರೆಗೂ ಯುದ್ಧ ಮುಂದುವರಿಯುತ್ತದೆ ಎಂದಿದ್ದರು. ಟ್ರಂಪ್‌ ಹೇಳಿಕೆಗಳಿಗೆ ನೇರ ಪ್ರತಿಕ್ರಿಯೆ ನೀಡಿದೆ. ಸಂಘರ್ಷ ಹೇಗೆ ಮತ್ತು ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ವಾಷಿಂಗ್ಟನ್‌ ಅಲ್ಲ, ಟೆಹ್ರಾನ್‌ ನಿರ್ಧರಿಸುತ್ತದೆ ಎಂದು ಇರಾನ್‌ ತಿರುಗೇಟು ನೀಡಿದೆ.

RELATED ARTICLES

Latest News