ಬ್ರಾಟಿಸ್ಲಾವಾ, ಜೂ.15 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡು ರಾಷ್ಟ್ರಗಳ ಭೇಟಿಯ ಎರಡನೇ ಹಂತಕ್ಕಾಗಿ ಸ್ಲೋವಾಕಿಯಾಕ್ಕೆ ಆಗಮಿಸಿದ್ದಾರೆ.ಅಲ್ಲಿ ಅವರು ಅಧ್ಯಕ್ಷ ಪೀಟರ್ ಪೆಲ್ಲೆಗ್ರಿನಿ ಮತ್ತು ಪ್ರಧಾನಿ ರಾಬರ್ಟ್ ಫಿಕೊ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಮತ್ತು ವ್ಯಾಪಾರ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ. 1993ರಲ್ಲಿ ಸ್ಲೋವಾಕಿಯಾ ಸ್ವಾತಂತ್ರ್ಯ ಪಡೆದ ನಂತರ ಭೇಟಿ ನೀಡುತ್ತಿರುವ ಮೊದಲ ಭಾರತೀಯ ಪ್ರಧಾನಿ ಮೋದಿ ಅವರಾಗಿದ್ದಾರೆ.
ಸ್ಲೋವಾಕಿಯಾ ರಾಜಧಾನಿಯನ್ನು ತಲುಪಿದ ನಂತರ ಎಕ್ಸ್ ಮಾಡಿರುವ ಮೋದಿ, ಈ ಭೇಟಿ ಭಾರತ-ಸ್ಲೋವಾಕಿಯಾ ಸಂಬಂಧಗಳನ್ನು ಗಾಢವಾಗಿಸಲು ಮತ್ತು ಸಹಕಾರದ ಹೊಸ ಮಾರ್ಗಗಳನ್ನು ಅನ್ವೇಷಿಸಲು ಅವಕಾಶವನ್ನು ಒದಗಿಸುತ್ತದೆ. ಅಧ್ಯಕ್ಷ ಪೆಲ್ಲೆಗ್ರಿನಿ ಮತ್ತು ಪ್ರಧಾನಿ ಫಿಕೊ ಅವರೊಂದಿಗೆ ಉತ್ಪಾದಕ ಸಭೆಗಳನ್ನು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಫ್ರಾನ್‌್ಸನಿಂದ ಎರಡು ದಿನಗಳ ಭೇಟಿಗಾಗಿ ಪ್ರಧಾನಿ ಬ್ರಾಟಿಸ್ಲಾವಾಕ್ಕೆ ಆಗಮಿಸಿದರು, ಅಲ್ಲಿ ಅವರು ನೈಸ್‌ನಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
