Tuesday, April 21, 2026
Homeಅಂತಾರಾಷ್ಟ್ರೀಯಇರಾನ್‌ ವಿರುದ್ಧ 4 ವಾರಗಳವರೆಗೆ ಮಿಲಿಟರಿ ಕಾರ್ಯಾಚರಣೆ : ಟ್ರಂಪ್

ಇರಾನ್‌ ವಿರುದ್ಧ 4 ವಾರಗಳವರೆಗೆ ಮಿಲಿಟರಿ ಕಾರ್ಯಾಚರಣೆ : ಟ್ರಂಪ್

Trump suggests US war on Iran could last 4 weeks

ವಾಷಿಂಗ್ಟನ್‌,ಮಾ.2- ಒಂದೇ ಹೊಡೆತಕ್ಕೆ ಇರಾನ್‌ನ 48 ನಾಯಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ. ಇರಾನ್‌ ಮೇಲೆ ನಡೆಯುತ್ತಿರುವ ಅಮೆರಿಕ ಇಸ್ರೇಲ್‌ ಜಂಟಿ ದಾಳಿ ಕುರಿತು ಮಾತನಾಡಿದ ಅವರು, ಈ ಕಾರ್ಯಾಚರಣೆ
ಅತ್ಯಂತ ಯಶಸ್ವಿಯಾಗಿ ಮತ್ತು ನಿರೀಕ್ಷೆಗಿಂತ ವೇಗವಾಗಿ ಮುಂದುವರಿದಿದೆ ಎಂದು ಹೇಳಿದ್ದಾರೆ.

ನಿಜಕ್ಕೂ ನಾವು ಪಡೆಯುತ್ತಿರುವ ಯಶಸ್ಸುನಂಬೋದಕ್ಕೆ ಸಾಧ್ಯವಾಗುತ್ತಿಲ್ಲ. ಒಂದೇ ಹೊಡೆತದಲ್ಲಿ 48 ಇರಾನ್‌ನ ನಾಯಕರು ಸಾವನ್ನಪ್ಪಿದ್ದಾರೆ ಎಂದು ಬಣ್ಣಿಸಿದ್ದಾರೆ. ಕಾರ್ಯಾಚರಣೆ ಮತ್ತಷ್ಟು ವೇಗವಾಗಿ ಸಾಗುತ್ತಿದೆ. ಇನ್ನೆಷ್ಟು ಗುರಿಗಳು ಬಾಕಿ ಉಳಿದಿವೆ ಅನ್ನೋದು ಕೂಡ ಅಮೆರಿಕಕ್ಕೆ ಸ್ಪಷ್ಟವಾಗಿ ಗೊತ್ತಿದೆ ಎಂದು ವಿವರಿಸಿದ್ದಾರೆ.

ಇರಾನ್‌ ವಿರುದ್ಧ ಅಮೆರಿಕ ಆರಂಭಿಸಿರುವ ಮಿಲಿಟರಿ ಕಾರ್ಯಾಚರಣೆ 4 ವಾರಗಳವರೆಗೆ ಮುಂದುವರಿಬಹುದು. ಇರಾನ್‌ ದೊಡ್ಡ ದೇಶವಾಗಿರುವುದರಿಂದ ಕಾರ್ಯಾಚರಣೆ ನಾಲ್ಕು ವಾರಗಳು ಅಥವಾ ಅದಕ್ಕಿಂತ ಕಡಿಮೆ ಅವಧಿ ತೆಗೆದುಕೊಳ್ಳಬಹುದು.

ನಮ ಉದ್ದೇಶಗಳು ಸಂಪೂರ್ಣವಾಗಿ ಸಾಧಿಸುವವರೆಗೆ ಯುದ್ಧ ಕಾರ್ಯಾಚರಣೆಗಳು ಪೂರ್ಣ ಬಲದಿಂದ ಮುಂದುವರಿಯುತ್ತವೆ ಎಂದು ಎಚ್ಚರಿಸಿದ್ದಾರೆ.ಇರಾನಿಯರೊಂದಿಗೆ ಮುಂದಿನ ಹಂತದ ಮಾತುಕತೆಗಳಿಗೆ ತಾವು ಮುಕ್ತರಾಗಿರಿದ್ದೇವೆ ಎಂದು ಟ್ರಂಪ್‌ ಹೇಳಿದ್ದಾರೆ ಆದರೆ ಇರಾನ್‌ ಸೇನಾ ನಾಯಕರು ಯಾವುದೇ ಮಾತುಕತೆ ಇಲ್ಲ ಎಂದು ಹೇಳಿದೆ.ಇದರಿಂದ ಯುದ್ದ ಮತ್ತಷ್ಟು ಹೆಚ್ಚಾಗಲಿದೆ ದಳಿ ಪ್ರತಿ ದಾಳಿ ತೀವ್ರ ಗೊಂಡಿದೆ.

RELATED ARTICLES

Latest News