ವಾಷಿಂಗ್ಟನ್ ಮೇ 20- ಇರಾನ್ ವಿರುದ್ಧ ಕಳೆದ ಫೆ.28 ರಿಂದ ಯುದ್ಧದಲ್ಲಿ ಅಮೆರಿಕದ ಪೈಟರ್ ಜೆಟ್‌ಗಳೂ ಸೇರಿ ಸೇನೆಯ 42 ವಿಮಾನಗಳು ಹಾಗೂ ಹಲವಾರು ಡ್ರೋನ್‌ಗಳು ನಾಶವಾಗಿವೆ ಅಥವಾ ಹಾನಿಗೊಳಗಾಗಿವೆ ಎಂದು ಅಧಿಕೃತ ವರದಿಯೊಂದು ತಿಳಿಸಿದೆ.
ವಿಮಾನಗಳ ಹಾನಿ ಅಥವಾ ನಷ್ಟದ ಸಂಖ್ಯೆ ಇನ್ನೂ ಪರಿಷ್ಕರಣೆಗೆ ಒಳಪಡುವ ಸಾಧ್ಯತೆಯಿದೆ. ರಹಸ್ಯ ಮಾಹಿತಿ ಯ ವರ್ಗೀಕರಣ, ಯುದ್ಧ ಚಟುವಟಿಕೆಗಳ ಮುಂದುವರಿಕೆ ಹಾಗೂ ಹಾನಿಗೆ ಸಂಬಂಧಿಸಿದ ಕಾರಣಗಳ ಪರಿಶೀಲನೆ ಸೇರಿದಂತೆ ಹಲವು ಮಾಹಿತಿಯ ಅಂಕಿ-ಅಂಶಗಳಲ್ಲಿ ಬದಲಾವಣೆ ಸಾಧ್ಯವಿದೆ ಎಂದು ಅಮೆರಿಕ ಕಾಂಗ್ರೆಸ್ ಸಂಶೋಧನಾ ಸೇವೆ (ಸಿಆರ್‌ಎಸ್) ವರದಿಯಲ್ಲಿ ತಿಳಿಸಿದೆ.
ದರಲ್ಲಿ ನಾಲ್ಕು ಎಫ್-15ಇ ಸ್ಟ್ರೈಕ್ ಈಗಲ್ ಯುದ್ಧ ವಿಮಾನಗಳು, ಒಂದು ಎಫ್-35ಎ ಲೈಟಿಂಗ್ ಯುದ್ಧ ವಿಮಾನ, ಒಂದು ಎ-10 ಥಂಡರ್‌ಬೋಲ್ಟ್ ನೆಲದ ದಾಳಿ ವಿಮಾನ, ಏಳು ಕೆ ಸಿ-135 ಸ್ಟ್ರಾಟೋಟ್ಯಾಂಕರ್ ವೈಮಾನಿಕ ಇಂಧನ ತುಂಬುವ ವಿಮಾನಗಳು, ಒಂದು ಇ-3 ಸೆಂಟ್ರಿ ಎಡಬ್ಲ್ಯುಎಸಿಎಸ್ ವಿಮಾನ, ಎರಡು ಎಂಸಿ-130ಜೆ ಕಮಾಂಡೋ ವಿಶೇಷ ಕಾರ್ಯಾಚರಣೆ ವಿಮಾನಗಳು, ಒಂದು ಎಚ್‌ಎಚ್-60ಡಬ್ಲ್ಯು ಜಾಲಿ ಗ್ರೀನ್ ಹೆಲಿಕಾಪ್ಟರ್ 24 ಎಂಕ್ವಿ-9 ರೀಪರ್ ಡ್ರೋನ್‌ಗಳು ಹಾಗೂ ಒಂದು ಎಂಕ್ವಿ-4ಸಿ ಟ್ರೈಟನ್ ಡ್ರೋನ್ ಸೇರಿವೆ ಎಂದು ವರದಿ ತಿಳಿಸಿದೆ.
ಅಮೆರಿಕ ಕಾಂಗ್ರೆಸ್ ಹಾಗೂ ಅದರ ಸಮಿತಿಗಳಿಗೆ ನೀತಿ ಮತ್ತು ಕಾನೂನು ವಿಶ್ಲೇಷಣೆ ಒದಗಿಸುವ ಸಿಆರ್‌ಎಸ್, ಸುದ್ದಿವಾಹಿನಿಗಳ ವರದಿಗಳು ಹಾಗೂ ಅಮೆರಿಕ ರಕ್ಷಣಾ ಇಲಾಖೆ ಮತ್ತು ಅಮೆರಿಕ ಕೇಂದ್ರ ಕಮಾಂಡ್‌ನ ಹೇಳಿಕೆಗಳ ಆಧಾರದ ಮೇಲೆ ಈ ಮಾಹಿತಿಯನ್ನು ಸಂಗ್ರಹಿಸಿದೆ.
ಮೇ 12ರಂದು ನಡೆದ ಪ್ರತಿನಿಧಿಗಳ ಸಭೆಯ ಅನುದಾನ ಉಪಸಮಿತಿಯ ವಿಚಾರಣೆಯಲ್ಲಿ ಪೆಂಟಗನ್‌ನ ಕಾರ್ಯನಿರ್ವಹಣಾ ನಿಯಂತ್ರಕ ಜೂಲ್ಸ್ ಡಬ್ಲ್ಯೂ. ಹರ್ಸ್ಟ್ ಮಾತನಾಡಿ, ಇರಾನ್ ಸಂಬಂಧಿತ ಸೇನಾ ಕಾರ್ಯಾಚರಣೆಗಳ ವೆಚ್ಚದ ಅಂದಾಜು ಈಗ 29 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಈ ಹೆಚ್ಚಳದ ಪ್ರಮುಖ ಕಾರಣಗಳಲ್ಲಿ ಉಪಕರಣಗಳ ದುರಸ್ತಿ ಅಥವಾ ಬದಲಾವಣೆಗೆ ಸಂಬಂಧಿಸಿದ್ದಾಗಿದೆ ಮತ್ತು ಹೆಚ್ಚು ನಿಖರವಾದ ಅಂದಾಜು ಸದ್ಯದಲ್ಲೇ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
