Homeರಾಷ್ಟ್ರೀಯಪ್ರಧಾನಿ ಮೋದಿ ಭಾರತದ ಗೌರವವನ್ನು ಕಾಪಾಡುತ್ತಿದ್ದಾರೆ : ಶರದ್‌ ಪವಾರ್‌

ಪ್ರಧಾನಿ ಮೋದಿ ಭಾರತದ ಗೌರವವನ್ನು ಕಾಪಾಡುತ್ತಿದ್ದಾರೆ : ಶರದ್‌ ಪವಾರ್‌

PM Modi working to protect India's prestige on global stage: Sharad Pawar

ಮುಂಬೈ,ಮೇ 20- ರಾಜಕೀಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಿನ್ನಾಭಿಪ್ರಾಯ ಗಳಿದ್ದರೂ, ಪ್ರಧಾನಿಯಾಗಿ ಅವರು ಜಾಗತಿಕ ಮಟ್ಟದಲ್ಲಿ ಭಾರತದ ಗೌರವವನ್ನು ಕಾಪಾಡಲು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಮರೆಯ ಬಾರದು ಎಂದು ಎನ್‌ಸಿಪಿ (ಎಸ್‌‍ಪಿ) ಅಧ್ಯಕ್ಷ ಶರದ್‌ ಪವಾರ್‌ ಹೇಳಿದ್ದಾರೆ.

ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವರಾದ ಪವಾರ್‌ ರಾಷ್ಟ್ರ ಹಿತಾಸಕ್ತಿಗಾಗಿ ಒಟ್ಟಾಗಿ ಕೆಲಸ ಮಾಡುವ ಅವಕಾಶ ಬಂದಾಗ ಎಲ್ಲರೂ ಒಂದೇ ಉದ್ದೇಶದೊಂದಿಗೆ ಕೈಜೋಡಿಸಿ ದೇಶದ ಗೌರವ ಹೆಚ್ಚಿಸಲು ಸಹಕರಿಸಬೇಕು ಎಂದು ಹೇಳಿದರು.
ಇಂದಿರಾ ಗಾಂಧಿ, ಪಿ.ವಿ. ನರಸಿಂಹ ರಾವ್‌ ಮತ್ತು ಮನಮೋಹನ್‌ ಸಿಂಗ್‌ ಅವರಂತಹ ನಾಯಕರು ದೇಶದ ಭವಿಷ್ಯ ಮತ್ತು ಪ್ರತಿಷ್ಠೆಯನ್ನು ತಮ ನಾಯಕತ್ವದ ಕೇಂದ್ರಬಿಂದುವಾಗಿಸಿಕೊಂಡಿದ್ದರು ಎಂದು ಅವರು ಹೇಳಿದರು.

ಭಾರತದ ಗೌರವವನ್ನು ಕಾಪಾಡುವ ವಿಚಾರದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಅಡ್ಡಿಯಾಗಬಾರದು.ಮಧ್ಯೆ ತರಬಾರದು, ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಲ್ಲಿ ದೇಶದ ಗೌರವವನ್ನು ಉಳಿಸಲು ಕೆಲಸ ಮಾಡುತ್ತಿದ್ದಾರೆಎಂದು ಪವಾರ್‌ ತಿಳಿಸಿದ್ದಾರೆ.
ಪುಣೆಯ ಲಕ್ಷ್ಮಣರಾವ್‌ ಗುಟ್ಟೆ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಆಯೋಜಿಸಿದ್ದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮಾಜಿ ಪದಾಧಿಕಾರಿಗಳ ಕೃತಜ್ಞತೆ ಮತ್ತು ಸೌಹಾರ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ನೀವು ಬೇರೆ ಪಕ್ಷಗಳಲ್ಲಿ ಇರಬಹುದು. ಆದರೆ ಜನರೊಂದಿಗೆ ನಿಮ್ಮ ನಂಟು ಮುಂದುವರಿದಿದೆ ಮತ್ತು ಸಮಾಜದ ಬಗ್ಗೆ ಇರುವ ಬದ್ಧತೆಯನ್ನು ಉಳಿಸಿಕೊಂಡಿದ್ದೀರಿ ಎಂದು ಅವರು ಹೇಳಿದ್ದಾರೆ.

ತಮ್ಮ ಆರಂಭಿಕ ರಾಜಕೀಯ ಜೀವನವನ್ನು ನೆನಪಿಸಿಕೊಂಡ ಪವಾರ್‌ 1958ರಲ್ಲಿ ಬರಾಮತಿಯಿಂದ ಪುಣೆಗೆ ಬಂದಿದ್ದಾಗಿ ಮತ್ತು ನಂತರ ಯುವ ಕಾಂಗ್ರೆಸ್‌‍ನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ರಾಷ್ಟ್ರೀಯ ಮಟ್ಟದಲ್ಲೂ ಕೆಲಸ ಮಾಡಿದುದಾಗಿ ಹೇಳಿದರು. ಈ ವೇಳೆ ಅವರು ಭಾರತದ ಮೊದಲ ಪ್ರಧಾನಿ ನೆಹರು ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗಿನ ನೆನಪುಗಳನ್ನೂ ಹಂಚಿಕೊಂಡರು.

RELATED ARTICLES

Latest News