Homeರಾಜಕೀಯಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾದ ಸಚಿವ ಆಕಾಂಕ್ಷಿಗಳು

ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾದ ಸಚಿವ ಆಕಾಂಕ್ಷಿಗಳು

Ministerial aspirants meet former CM Siddaramaiah

ಬೆಂಗಳೂರು, ಜು.30- ದೆಹಲಿಯಲ್ಲಿ ಬೀಡುಬಿಟ್ಟಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಸ್ಥಾನದ ಆಕಾಂಕ್ಷಿಗಳು ಭೇಟಿ ಮಾಡಿ ಅವಕಾಶಕ್ಕಾಗಿ ಮನವಿ ಮಾಡಿದ್ದಾರೆ.
ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲು ಕಳೆದ ಮಂಗಳವಾರದಿಂದಲೂ ಸಿದ್ದರಾಮಯ್ಯ ದೆಹಲಿಯಲ್ಲಿ ತಂಗಿದ್ದಾರೆ.

ಕಾಂಗ್ರೆಸ್‌ ಹೈಕಮಾಂಡ್‌ನ ನಾಯಕರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯದ ನಾಯಕರ ಜೊತೆ ಚರ್ಚೆಗೆ ಸಮಯವನ್ನೇ ನೀಡುತ್ತಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ ಈವರೆಗೂ ಅತಂತ್ರವಾಗಿಯೇ ಇದೆ.

ಈ ನಡುವೆ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಶಾಸಕರಾದ ಅಜಯ್‌ ಸಿಂಗ್‌, ವಿಜಯಾನಂದ ಕಾಶಪ್ಪನವರ್‌, ಪಿ.ಎಂ.ಅಶೋಕ್‌, ಮಧು ಬಂಗಾರಪ್ಪ, ಕೆ.ಎಂ. ಶಿವಲಿಂಗೇಗೌಡ, ಪುಟ್ಟರಂಗ ಶೆಟ್ಟಿ, ಆರ್‌.ಬಿ.ತಿಮ್ಮಾಪುರ್‌, ರಿಜ್ವಾನ್‌ ಅರ್ಷದ್‌, ವಿಧಾನ ಪರಿಷತ್‌ ಸದಸ್ಯ ಎಂ.ಆರ್‌.ಸೀತರಾಮ್‌ ಸೇರಿದಂತೆ ಹಲವರು ಭೇಟಿ ಮಾಡಿದ್ದಾರೆ. ಸಚಿವ ಸಂಪುಟದಲ್ಲಿ ಅವಕಾಶ ಕೊಡಿಸಲು ಎಲ್ಲಾ ಶಾಸಕರು ಮನವಿ ಮಾಡಿದ್ದಾರೆ.

ನವದೆಹಲಿಯಲ್ಲೇ ಬೀಡುಬಿಟ್ಟಿರುವ ಶಾಸಕರು, ಹೈಕಮಾಂಡ್‌ ನಾಯಕರ ಭೇಟಿ, ರಾಜ್ಯ ನಾಯಕರ ಮನವೊಲಿಕೆ ಪ್ರಯತ್ನ ಸೇರಿದಂತೆ ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಅವರ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ.

RELATED ARTICLES

Latest News