Homeರಾಷ್ಟ್ರೀಯಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಂದ ಪಾಪಿ ಪುತ್ರ

ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಂದ ಪಾಪಿ ಪುತ್ರ

ಹಮೀರ್‌ಪುರ, ಸೆ. 13 (ಪಿಟಿಐ): ಆಸ್ತಿ ವಿಚಾರದ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನಗೆ ಜನ ಕೊಟ್ಟ 74 ವರ್ಷದ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಹಮೀರ್‌ಪುರದಲ್ಲಿ ನಡೆದಿದೆ.
ಹೆತ್ತ ಮಗನೆ ತನ್ನ ತಾಯಿ ತಲೆಗೆ ಇಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಚಾಂದ್‌ಪುರ್ವಾ ಗ್ರಾಮದ ನಿವಾಸಿಯಾಗಿರುವ ಆನಂದಿ ಯಾದವ್‌ (52) ಹೆತ್ತ ತಾಯಿಯನ್ನೆ ಕೊಂದ ಪಾಪಿ ಮಗನಾಗಿದ್ದಾನೆ.

2013ರಲ್ಲಿ ಆಸ್ತಿ ವಿವಾದದ ಕಾರಣಕ್ಕೆ ತನ್ನ ಸ್ವಂತ ತಮ್ಮನನ್ನೂ ಹತ್ಯೆ ಮಾಡಿದ್ದನೆಂದು ಆರೋಪಿಸಲಾಗಿದೆ. ಗ್ರಾಮಸ್ಥರು ಪೊಲೀಸರಿಗೆ ಈ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಪೊಲೀಸರು ಬಾಗಿಲು ಒಡೆದು ಒಳನುಗ್ಗಿ ಯಾದವ್‌ನನ್ನು ಬಂಧಿಸಿದರು.

ಸುಮರ್‌ಪುರ ಪೊಲೀಸ್‌‍ ಠಾಣೆಯ ಎಸ್‌‍ಎಚ್‌ಒ (ಠಾಣಾಧಿಕಾರಿ) ಪವನ್‌ ಪಟೇಲ್‌ ಮಾತನಾಡಿ, ಯಾದವ್‌ನ ತಾಯಿ ರಾಮ್‌ಶ್ರೀ ಅವರು ಎಂಟು ಬಿಘಾ ಕೃಷಿ ಭೂಮಿಯನ್ನು ಹೊಂದಿದ್ದರು ಮತ್ತು ಅದನ್ನು ಮಾರಾಟ ಮಾಡುವಂತೆ ಆತ ಆಗಾಗ್ಗೆ ಅವರ ಮೇಲೆ ಒತ್ತಡ ಹೇರುತ್ತಿದ್ದನು ಎಂದು ಹೇಳಿದರು. ತಮ್ಮನ ಹತ್ಯೆ ಪ್ರಕರಣದಲ್ಲಿ ಯಾದವ್‌ಗೆ 2014ರಲ್ಲಿ ಜಾಮೀನು ಸಿಕ್ಕಿತ್ತು ಮತ್ತು ಅಂದಿನಿಂದ ಆತ ತನ್ನ ತಾಯಿಯೊಂದಿಗೆ ಮನೆಯಲ್ಲೇ ವಾಸಿಸುತ್ತಿದ್ದನು ಎಂದು ಅಧಿಕಾರಿ ತಿಳಿಸಿದರು.

RELATED ARTICLES
spot_img

Latest News