ನಿತ್ಯ ನೀತಿ : ಕೆಟ್ಟವರಾಗಲು ಕೆಟ್ಟ ಕೆಲಸಗಳನ್ನೇ ಮಾಡಬೇಕೆಂದಿಲ್ಲಾ, ಸತ್ಯವನ್ನು ಇದ್ದುದನ್ನು ಇದ್ದ ಹಾಗೇ ಹೇಳಿದರೆ ಸಾಕು… ಕೆಟ್ಟವರಾಗುತ್ತೇವೆ.
ಪಂಚಾಂಗ : ಸೋಮವಾರ, 14-09-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಶರದ / ಮಾಸ: ಭಾದ್ರಪದ / ಪಕ್ಷ: ಶುಕ್ಲ / ತಿಥಿ: ತೃತೀಯಾ / ನಕ್ಷತ್ರ: ಚಿತ್ತಾ / ಯೋಗ: ಬ್ರಹಾ / ಕರಣ: ವಣಿಜ
ಸೂರ್ಯೋದಯ – ಬೆ.6.10
ಸೂರ್ಯಾಸ್ತ -06.24
ರಾಹುಕಾಲ – 7.30-9.00
ಯಮಗಂಡ ಕಾಲ – 10.30- 12.00
ಗುಳಿಕ ಕಾಲ – 1.30-3.00
ರಾಶಿಭವಿಷ್ಯ :
ಮೇಷ: ವೃತ್ತಿ ಬದುಕಿನಲ್ಲಿ ಜವಾಬ್ದಾರಿ ಕಡಿಮೆಯಾದ ಕಾರಣ ನಿಂದನೆಗೆ ಒಳಗಾಗುವಿರಿ.
ವೃಷಭ: ಕೆಲವು ವ್ಯಾಪಾರ ಯೋಜನೆಗಳನ್ನು ತಡೆ ಹಿಡಿಯಬೇಕಾದ ಸಂದರ್ಭಗಳು ಬರಬಹುದು.
ಮಿಥುನ: ಮಕ್ಕಳು ಅವಿಧೇಯತೆಯಿಂದ ನಡೆದು ಕೊಳ್ಳುವುದರಿಂದ ಮನಸ್ಸಿಗೆ ನೋವುಂಟಾಗಲಿದೆ.
ಕಟಕ: ಮೇಲಾ ಕಾರಿಗಳಿಂದ ಯಾವುದೇ ವಿಷಯವನ್ನು ಮುಚ್ಚಿಡುವ ಪ್ರಯತ್ನ ಮಾಡದಿರಿ.
ಸಿಂಹ: ಕೃಷಿಕರಿಗೆ ಆಗಾಗ ಎದುರಾಗುವ ಅಡೆತಡೆಗಳು ನಿವಾರಣೆಯಾಗಲಿವೆ.
ಕನ್ಯಾ: ಕುಟುಂಬದಲ್ಲಿ ಕಾಣಿಸಿ ಕೊಳ್ಳುವ ಸಮಸ್ಯೆ ಗಳಿಗೆ ಅಂತ್ಯ ಸಿಗಲಿದೆ.
ತುಲಾ: ಮಡದಿಯೊಂದಿಗೆ ಸಂಸಾರಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಸುವಿರಿ.
ವೃಶ್ಚಿಕ: ಕಚೇರಿಯಲ್ಲಿ ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ದುಡಿಯುವ ನಿಮ್ಮ ಮೇಲೆ ಮೇಲ ಕಾರಿಗಳಿಗೆ ಭರವಸೆ ಮೂಡಲಿದೆ.
ಧನುಸ್ಸು: ನಿಮ್ಮ ಅತಿಯಾದ ಮಾತಿನಿಂದ ಮನೆ ಯಲ್ಲಿ ಮುಜುಗರದ ವಾತಾವರಣ ಉಂಟಾಗಲಿದೆ.
ಮಕರ: ಕಾನೂನಿಗೆ ಸಂಬಂ ಸಿದ ಕೆಲಸದಲ್ಲಿ ಜಯ ಸಿಗಲಿದೆ. ಕಲಾವಿದರಿಗೆ ಒಳ್ಳೆಯ ದಿನ.
ಕುಂಭ: ಸಂಗಾತಿಗೆ ನಿಮ್ಮೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ.
ಮೀನ: ಮಗನ ಆರೋಗ್ಯದಲ್ಲಿ ಉಂಟಾಗುವ ವ್ಯತ್ಯಾಸದಿಂದಾಗಿ ಜವಾಬ್ದಾರಿ ಹೆಚ್ಚಾಗಲಿದೆ.
