Homeರಾಷ್ಟ್ರೀಯಬ್ರಿಕ್ಸ್‌ ಶೃಂಗಸಭೆಯನ್ನು ಶ್ಲಾಘಿಸಿದ ಎಐ ತಜ್ಞ ಅಹ್ಮದ್ ಎಲ್‌ಶಾರ್ಕವಿ

ಬ್ರಿಕ್ಸ್‌ ಶೃಂಗಸಭೆಯನ್ನು ಶ್ಲಾಘಿಸಿದ ಎಐ ತಜ್ಞ ಅಹ್ಮದ್ ಎಲ್‌ಶಾರ್ಕವಿ

ನವದೆಹಲಿ, ಸೆ. 13: ಅತ್ಯುತ್ತಮ ನಿರ್ವಹಣೆ ಮತ್ತು ದೂರದೃಷ್ಟಿಯ ಕಾರ್ಯಸೂಚಿಗಾಗಿ 18ನೇ ಬ್ರಿಕ್ಸ್‌ ಶೃಂಗಸಭೆಯು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ಈ ಬಹುಪಕ್ಷೀಯ ಒಕ್ಕೂಟವನ್ನು ಅತ್ಯಾಧುನಿಕ ತಾಂತ್ರಿಕ ಸಹಕಾರದತ್ತ ಮುನ್ನಡೆಸುವಲ್ಲಿ ಭಾರತದ ನಾಯಕತ್ವವನ್ನು ಅಂತಾರಾಷ್ಟ್ರೀಯ ತಜ್ಞರೊಬ್ಬರು ಶ್ಲಾಘಿಸಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಈಜಿಪ್ಟ್‌ನ ಕೃತಕ ಬುದ್ಧಿಮತ್ತೆ ತಜ್ಞ ಅಹದ್‌ ಎಲ್‌ಶಾರ್ಕಾವಿ ಅವರು ಈ ಬೃಹತ್‌ ಕಾರ್ಯಕ್ರಮವನ್ನು ಪ್ರಶಂಸಿಸಿದರು. ‘ಶೃಂಗಸಭೆಯನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು. ಇಂತಹ ಅದ್ಭುತ ಮತ್ತು ಸುಸಂಘಟಿತ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಭಾರತವು ಶ್ರೇಷ್ಠ ನಾಯಕತ್ವವನ್ನು ಪ್ರದರ್ಶಿಸಿದೆ’ ಎಂದು ಹೇಳಿದರು.

‘ಬ್ರಿಕ್ಸ್‌ನ ಈ ಆವೃತ್ತಿಯು ಕೃತಕ ಬುದ್ಧಿಮತ್ತೆ, ಅದರಲ್ಲೂ ವಿಶೇಷವಾಗಿ ಸಾರ್ವಭೌಮ ಎಐ ಯೋಜನೆಗಳ ಕುರಿತು ಸಹಕಾರ ಮತ್ತು ಸಹಯೋಗವನ್ನು ವೃದ್ಧಿಸುವತ್ತ ಹೆಚ್ಚಿನ ಗಮನ ಹರಿಸಲಿದೆ’ ಎಂದು ಅವರು ತಿಳಿಸಿದರು.

ಈ ಅಂತಾರಾಷ್ಟ್ರೀಯ ಅಭಿಪ್ರಾಯಗಳಿಗೆ ಪೂರಕವಾಗಿ, ರಾಷ್ಟ್ರ ರಾಜಧಾನಿಯಲ್ಲಿ ‘ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ’ ಎಂಬ ಪ್ರಮುಖ ಧ್ಯೇಯದಡಿ ನಡೆದ ಎರಡು ದಿನಗಳ ಶೃಂಗಸಭೆಯು ಸುಸ್ಥಿರ ಅಭಿವೃದ್ಧಿಯನ್ನು ಮುನ್ನಡೆಸುವ ನಿರ್ಣಾಯಕ ವೇದಿಕೆಯಾಗಿ ಕಾರ್ಯನಿರ್ವಹಿಸಿದೆ.

ಚರ್ಚೆಗಳ ಬಳಿಕ ಬ್ರಿಕ್ಸ್‌ ನಾಯಕರು ಸರ್ವಾನುಮತದಿಂದ ಸಮಗ್ರ ‘ನವದೆಹಲಿ ಘೋಷಣೆ–2026’ ಅನ್ನು ಅಂಗೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ಫಲಿತಾಂಶವನ್ನು ವಿಶಾಲ ವ್ಯಾಪ್ತಿ ಮತ್ತು ಬಲವಾದ ಉದ್ದೇಶವನ್ನು ಹೊಂದಿರುವ ಒಕ್ಕೂಟದ ಪ್ರತಿಬಿಂಬ ಎಂದು ಬಣ್ಣಿಸಿದರು.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಸಹಕಾರವನ್ನು ಹೆಚ್ಚು ಪ್ರಾಯೋಗಿಕವಾಗಿಸಲು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಆಕಾಂಕ್ಷೆಗಳಿಗೆ ಸ್ಪಂದಿಸುವಂತೆ ಮಾಡಲು ಈ ಘೋಷಣೆಯು ನಾವೀನ್ಯತೆ, ಸುಸ್ಥಿರತೆ ಹಾಗೂ ಜನರ ನಡುವಿನ ಬಾಂಧವ್ಯಕ್ಕೆ ಆದ್ಯತೆ ನೀಡುತ್ತದೆ ಎಂದು ಒತ್ತಿ ಹೇಳಿದರು.

RELATED ARTICLES
spot_img

Latest News