Thursday, December 12, 2024
Homeರಾಜ್ಯಸಿಎಂ ಮನೆ ಮುಂದೆ ಆಮರಣಾಂತ ಉಪವಾಸ : ನಾರಾಯಣಗೌಡರ ತಾಯಿ ಎಚ್ಚರಿಕೆ

ಸಿಎಂ ಮನೆ ಮುಂದೆ ಆಮರಣಾಂತ ಉಪವಾಸ : ನಾರಾಯಣಗೌಡರ ತಾಯಿ ಎಚ್ಚರಿಕೆ

ಬೆಂಗಳೂರು,ಡಿ.29- ನನ್ನ ಮಗ ಕನ್ನಡ ನಾಡು-ನುಡಿಗಾಗಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರನ್ನು ತಕ್ಷಣ ಬಿಡುಗಡೆ ಮಾಡದೇ ಇದ್ದರೆ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮನೆ ಮುಂದೆ ಅನ್ನ, ನೀರು ತ್ಯಜಿಸಿ ಆಮರಣಾಂತ ಸತ್ಯಾಗ್ರಹ ನಡೆಸುವುದಾಗಿ ನಾರಾಯಣಗೌಡ ಅವರ ತಾಯಿ ಗೌರಮ್ಮ ಎಚ್ಚರಿಕೆ ನೀಡಿದ್ದಾರೆ.

ನಾಮಫಲಕಗಳಲ್ಲಿ ಕನ್ನಡ ಬಳಕೆಗೆ ಆಗ್ರಹಿಸಿ ಹೋರಾಟ ನಡೆಸಿದ್ದ ನಾರಾಯಣಗೌಡರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಹಿನ್ನೆಲೆಯಲ್ಲಿ ಗೌರಮ್ಮ ಅವರು ತಮ್ಮ ಅಳಲು ತೋಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನನ್ನ ಮಗ ಏನು ತಪ್ಪು ಮಾಡಿದ್ದ ಎಂದು ಜೈಲಿಗೆ ಹಾಕಿದ್ದೀರ ಎಂದು ಸರ್ಕಾರವನ್ನು ಗೌರಮ್ಮ ಪ್ರಶ್ನಿಸಿದ್ದಾರೆ. ನನ್ನ ಮಗನ ಆರೋಗ್ಯ ಸರಿಯಿಲ್ಲ. ಮಾತನಾಡಲೂ ತ್ರಾಣವಿಲ್ಲದಷ್ಟು ಸುಸ್ತಾಗಿದ್ದರು. ಆದರೂ ಕನ್ನಡಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಅದೇ ತಪ್ಪೇ? ದರೋಡೆ, ಕಳ್ಳತನ ಮಾಡಿದ್ದಾರೆಯೇ, ಯಾವ ಕಾರಣಕ್ಕೆ ಜೈಲಿನಟ್ಟಿದ್ದೀರ ಎಂದು ಕಿಡಿಕಾರಿದ್ದಾರೆ.

‘ಮೋದಿ ಮತ್ತೆ ಬರಲಿದ್ದಾರೆ’ ಎಂಬ ಘೋಷ ವಾಕ್ಯದೊಂದಿಗೆ ಅಖಾಡಕ್ಕೆ ಧುಮುಕಿದ ಬಿಜೆಪಿ

ನಿನ್ನೆ ಕುಟುಂಬದ ಸದಸ್ಯರು ನಾರಾಯಣಗೌಡರಿಗೆ ಕೊಡಲು ಊಟ ಮತ್ತು ಮಾತ್ರೆಯನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಜೈಲಿನ ಅಧಿಕಾರಿಗಳು ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ನನ್ನ ಮಗ ಊಟ ಇಲ್ಲದೆ, ಜೈಲಿನಲ್ಲಿರಬೇಕಾದರೆ ಹೆತ್ತ ಕರಳು ಎಷ್ಟು ಸಂಕಟ ಪಡುತ್ತದೆ ಎಂದು ನಿಮಗೆ ಗೊತ್ತಾಗುತ್ತದೆಯೇ ಎಂದು ಅಳಲು ತೋಡಿಕೊಂಡಿದ್ದಾರೆ.

ನನ್ನ ಮಗ ಕನ್ನಡಕ್ಕಾಗಿ ಹೋರಾಟ ನಡೆಸಿದ್ದಾನೆ. ಮಾಡಬಾರದ ತಪ್ಪೇನೂ ಮಾಡಿಲ್ಲ, ಕೂಡಲೇ ಜೈಲಿನಿಂದ ಬಿಡುಗಡೆ ಮಾಡುವಂತೆ ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರ ಮನೆ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಎಚ್ಚರಿಸಿದ್ದಾರೆ.

RELATED ARTICLES

Latest News