Monday, June 17, 2024
Homeರಾಜಕೀಯಕರ್ನಾಟಕ ಬಿಜೆಪಿ ದೇಶದಲ್ಲೇ ಕಡುಭ್ರಷ್ಟರು : ಡಿಕೆಶಿ

ಕರ್ನಾಟಕ ಬಿಜೆಪಿ ದೇಶದಲ್ಲೇ ಕಡುಭ್ರಷ್ಟರು : ಡಿಕೆಶಿ

ಬೆಂಗಳೂರು,ಜೂ.1-ಕರ್ನಾಟಕ ಬಿಜೆಪಿ ದೇಶದಲ್ಲೇ ಅತ್ಯಂತ ಭ್ರಷ್ಟವಾಗಿದ್ದು, ನಾವು ಹೋಗಲಿ ಎಂದು ಸುಮನಿದ್ದರೂ ಅವರು ನಮನ್ನು ಬಯಲು ಮಾಡಿ ಎಂದು ಪದೇಪದೇ ಕೆಣಕುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಿಡಿಕಾರಿದ್ದಾರೆ.ಮಾನನಷ್ಟ ಮೊಕದ್ದಮೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಸಿಟಿ ಸಿವಿಲ್‌ ಕೋರ್ಟ್‌ಗೆ ಹಾಜರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಕೆಂಡ ಕಾರಿದರು.

ಈ ಹಿಂದೆ ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ.ಗಳ ಲಂಚ ಕೇಳಿದ್ದರು ಎಂದು ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪ ಮಾಡಿದ್ದರು. ಅಧಿಕಾರಿಗಳ ವರ್ಗಾವಣೆಗೆ ನಿಗದಿಯಾಗಿದ್ದ ದರದ ಪಟ್ಟಿ ಸಿಐಡಿ ವರದಿ ಆಧರಿಸಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.ಕಾಂಗ್ರೆಸ್‌‍ ಪಕ್ಷ ಅದನ್ನೇ ಆಧಾರವಾಗಿಟ್ಟುಕೊಂಡು ಜಾಹೀರಾತು ನೀಡಿದೆ. ಯಾವ ಯಾವ ಪತ್ರಿಕೆಗಳಲ್ಲಿ ದರಪಟ್ಟಿ ಪ್ರಕಟವಾಗಿದೆ ಎಂಬುದನ್ನೂ ನಾವು ತಿಳಿಸಿದ್ದೇವೆ ಎಂದರು.

ಬಿಜೆಪಿಯವರು ಸಿದ್ದರಾಮಯ್ಯ ಹಾಗೂ ನನ್ನ ಮೇಲೆ ಕೇಸು ದಾಖಲಿಸಿದರೆ ನಮ ಅಭ್ಯಂತರವಿಲ್ಲ. ಆದರೆ ತಾವು ದೊಡ್ಡವರು ಎನ್ನಿಸಿಕೊಳ್ಳಬೇಕು ಎಂಬ ಕಾರಣಕ್ಕೆ ರಾಹುಲ್‌ಗಾಂಧಿಯವರ ಮೇಲೂ ಪ್ರಕರಣ ದಾಖಲಿಸಿದ್ದಾರೆ. ರಾಹುಲ್‌ಗಾಂಧಿ ಕಾನೂನಿಗೆ ಗೌರವ ನೀಡಲಿದ್ದು, ನ್ಯಾಯಾಲಯಕ್ಕೆ ಹಾಜರಾಗುತ್ತಾರೆ. ಬಿಜೆಪಿಯವರು ಸವಾಲು ಹಾಕಿದಂತೆ ನಾವು ಮಾಡಿದ ಆರೋಪಗಳನ್ನು ಸಾಬೀತುಪಡಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ವಾಲೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಉದ್ದೇಶ ಇಲ್ಲ. ಈಗಾಗಲೇ ಎಸ್‌‍ಐಟಿ ರಚನೆಯಾಗಿದೆ. ಹಣ ಎಲ್ಲೆಲ್ಲಿ ಹೋಗಿದೆ ಎಂದು ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ. ಎಲ್ಲವೂ ತಿಳಿಯಲು 2-3 ದಿನಗಳ ಸಮಯಾವಕಾಶ ಬೇಕಿದೆ. ಅನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಿಜೆಪಿಯವರು ಏನಾದರೂ ಹೇಳಿಕೊಳ್ಳಲಿ, ಅವರ ಸರ್ಕಾರ ಇದ್ದಾಗಲೂ ಇಂತಹ ಹಲವು ಪ್ರಕರಣಗಳು ನಡೆದಿವೆ. ಬಸವರಾಜ ಬೊಮಾಯಿ ಅವರಿಗೆ ಇದು ಗೊತ್ತಿದೆ. ಬಿಜೆಪಿಯವರು ಪದೇಪದೇ ನಮನ್ನು ಕೆಣಕಿ ತನಿಖೆ ಆಗುವಂತೆ ಮಾಡುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಹಗರಣದಲ್ಲಿ ಡಿ.ಕೆ.ಶಿವಕುಮಾರ್‌ ಕೂಡ ಪಾಲುದಾರರು ಎಂದು ಅವನ್ಯಾರೋ ರವಿ ಹೇಳಿದ್ದಾನೆ. ಹೌದು, ನನ್ನದೂ ಪಾಲುದಾರಿಕೆ ಇದೆ. ನಾನು ಮತ್ತು ರವಿ ಇಬ್ಬರೂ ಪಾಲುದಾರರು. ಇಬ್ಬರೂ ಸೇರಿ ಹಂಚಿಕೊಂಡಿದ್ದೇವೆ ಎಂದು ವ್ಯಂಗ್ಯವಾಡಿದರು.100 ಕೋಟಿ ರೂ.ಗಳ ಮೇಲ್ಪಟ್ಟ ಹಣಕಾಸಿನ ವಹಿವಾಟು ನಡೆದಿದ್ದರೆ ಅದು ಸಹಜವಾಗಿಯೇ ಸಿಬಿಐ ತನಿಖೆಗೆ ಒಳಪಡುತ್ತದೆ. ಇಲ್ಲಿ ಸರ್ಕಾರ ತನಿಖೆಗೆ ಹಸ್ತಾಂತರಿಸಬೇಕು ಎಂಬ ಪ್ರಮೇಯ ಉದ್ಭವಿಸುವುದಿಲ್ಲ. ನಮ ಸರ್ಕಾರ ಸಿಬಿಐ ತನಿಖೆಗೆ ಅಗತ್ಯ ಸಹಕಾರ ನೀಡಲು ಸಿದ್ಧವಿದೆ.

ಆದರೆ ಅವರು ರಾಜಕೀಯ ಮಾಡದೇ ನಿಷ್ಪಕ್ಷಪಾತ ತನಿಖೆ ಮಾಡಲಿ ಎಂದು ಹೇಳಿದರು. ಈಶ್ವರಪ್ಪ ಅವರ ಪ್ರಕರಣದಲ್ಲಿ ನೇರವಾಗಿ ಹೆಸರು ಉಲ್ಲೇಖಿಸಲಾಗಿತ್ತು. ಈ ಪ್ರಕರಣದಲ್ಲಿ ಚಂದ್ರಶೇಖರನ್‌ ಅವರ ಮರಣಪತ್ರದಲ್ಲಿ ಸಚಿವರು ಮೌಖಿಕ ಆದೇಶ ನೀಡಿದ್ದಾರೆ ಎಂದು ಅಧಿಕಾರಿ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ. ಸಾಕ್ಷ್ಯ ದೊರೆತರೆ ನಾವು ಯಾರನ್ನೂ ರಕ್ಷಿಸುವುದಿಲ್ಲ. ನಮ ಸರ್ಕಾರ ಪಾರದರ್ಶಕವಾಗಿರಲಿದೆ. ನಮ ಮೊದಲ ಆದ್ಯತೆ ಹಣ ರಕ್ಷಣೆ ಮಾಡುವುದಾಗಿದೆ. ಸಚಿವರು ಈ ಬಗ್ಗೆ ತಮ ಬಳಿ ಬಂದು ಚರ್ಚೆ ನಡೆಸಿದ್ದಾರೆ ಎಂದರು.

RELATED ARTICLES

Latest News