Wednesday, May 1, 2024
Homeರಾಜ್ಯ2023ನೇ ಸಾಲಿನ ಕೆ-ಟಿಇಟಿ ಫಲಿತಾಂಶ ಪ್ರಕಟ

2023ನೇ ಸಾಲಿನ ಕೆ-ಟಿಇಟಿ ಫಲಿತಾಂಶ ಪ್ರಕಟ

ಬೆಂಗಳೂರು,ನ.25- ಶಾಲಾ ಶಿಕ್ಷಣ ಇಲಾಖೆಯು 2023ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷಾ (ಕೆ-ಟಿಇಟಿ) ಫಲಿತಾಂಶವನ್ನು ಪ್ರಕಟಿಸಿದೆ. ಪತ್ರಿಕೆ 1 ಮತ್ತು 2ರಿಂದ ಒಟ್ಟಾರೆ 64,830 ಮಂದಿ ಅಭ್ಯರ್ಥಿಗಳು ಶಿಕ್ಷಕರಾಗಲು ಅರ್ಹತೆ ಪಡೆದಿದ್ದು, ಇವರೆಲ್ಲರೂ ಸರ್ಕಾರಿ ಶಾಲಾ ಶಿಕ್ಷಕ ಹುದ್ದೆಗಳ ಭರ್ತಿಗೆ ಸರ್ಕಾರ ನಡೆಸುವ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

1 ರಿಂದ 5ನೇ ತರಗತಿವರೆಗೆ ಬೋಧನಾ ಅರ್ಹತೆಗೆ ನಡೆಸಲಾದ ಪತ್ರಿಕೆ 1ರ ಪರೀಕ್ಷೆಗೆ ಹಾಜರಾಗಿದ್ದ 1,27,131 ಮಂದಿಯಲ್ಲಿ 14,922 (ಶೇ.11.74) ಮಂದಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 4139 ಪುರುಷರು , 10,783 ಮಹಿಳಾಯರಿದ್ದಾರೆ.

ಇನ್ನು 6ರಿಂದ 8ನೇ ತರಗತಿ ವರೆಗಿನ ಬೋಧನಾ ಅರ್ಹತೆಗೆ ನಡೆಸಲಾಗಿದ್ದ ಪತ್ರಿಕೆ- 2 ಪರೀಕ್ಷೆ ಬರೆದಿದ್ದ 3,01,962 ಮಂದಿಯಲ್ಲಿ 64,830 ಮಂದಿ (ಶೇ.28.54) ಶಿಕ್ಷಕರಾಗಲು ಅರ್ಹತೆ ಪಡೆದಿದ್ದಾರೆ. ಇದರಲ್ಲಿ ಪುರುಷರ ಸಂಖ್ಯೆ 16,268 ಆದರೆ ಮಹಿಳಾ ಅಭ್ಯರ್ಥಿಗಳು 33,634 ಅರ್ಹರಾಗಿದ್ದಾರೆ. ಈ ಪೈಕಿ 187 ಮಂದಿ ಶೇ.80ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿದ್ದಾರೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಬರ ಅಧ್ಯಯನ ವರದಿ ರಾಜ್ಯಪಾಲರಿಗೆ ಸಲ್ಲಸಲು ಜೆಡಿಎಸ್ ಸಿದ್ದತೆ

ಇನ್ನು ಪತ್ರಿಕೆ 2ನಲ್ಲಿ ಉತ್ತೀರ್ಣರಾದವರ ಪೈಕಿ ಸಮಾಜ ವಿಜ್ಞಾನ ವಿಷಯ ಬೋಧನೆಗೆ 35,349 ಮಂದಿ ಮತ್ತು ಗಣಿತ ಮತ್ತು ವಿಜ್ಞಾನ ವಿಷಯ ಬೋಧನೆಗೆ 14,559 ಮಂದಿ ಅರ್ಹರಾಗಿದ್ದಾರೆ. ಕೆ- ಟಿಇಟಿ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಇಲಾಖೆಯ ವೆಬ್ ಸೈಟ್ https://schooleducation.Karnataka.gov.in / schooleducation.kar.nic.in ನಲ್ಲಿ ಲಭ್ಯವಿರುವ ಲಿಂಕ್ ಮೂಲಕ ವೀಕ್ಷಿಸಬಹುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಡಿ.31ಕ್ಕೆ ಕೆಸೆಟ್ ಪರೀಕ್ಷೆ: ಈ ಮಧ್ಯೆ, ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ 1208 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಇದೇ ನವೆಂಬರ್ 26ರಂದು ನಡೆಸಲು ಉದ್ದೇಶಿಸಿದ್ದ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) 2023ನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದೂಡಿದ್ದು ನವೆಂಬರ್ 26ರ ಬದಲು ಪರೀಕ್ಷೆಯನ್ನು ಡಿ.31ರಂದು ನಡೆಸಲು ಪ್ರಾಕಾರ ತಾತ್ಕಾಲಿಕ ದಿನಾಂಕ ನಿಗದಿ ಮಾಡಿದೆ. ಇದೇ ದಿನಾಂಕವೇ ಅಂತಿಮ ದಿನಾಂಕ ಆಗಬಹುದು ಅಥವಾ ಬದಲಾವಣೆಯೂ ಆಗಬಹುದು ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಕೆ- ಸೆಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರಿಗೆ ಪ್ರಶ್ನೆ ಪತ್ರಿಕೆ -1 ಸಾಮಾನ್ಯವಾಗಿರಲಿದೆ. ಅಭ್ಯರ್ಥಿಗಳು ಪರಿಮಾಣಾತ್ಮಕ ತರಬೇತಿಗಿಂತ ಗುಣಾತ್ಮಕ ತರಬೇತಿಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ. ಪ್ರಶ್ನೆ ಪತ್ರಿಕೆ-1 ರ ಪಠ್ಯಕ್ರಮದ ಜೊತೆ ಅದರಲ್ಲಿರುವ ವಿವಿಧ ಮಾದರಿಯ ಪ್ರಶ್ನೆಗಳ ಬಗ್ಗೆ ಜ್ಞಾನ ಹೊಂದಿರಬೇಕು.

RELATED ARTICLES

Latest News