ನವದೆಹಲಿ,ಮೇ 13- ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಳೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಕಾಲ ಭೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ ಮತ್ತು ನಂತರ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದು, ಪ್ರಧಾನಿ ಮೋದಿಯವರ ರೋಡ್ ಶೋ ಮತ್ತು ನಾಮನಿರ್ದೇಶನ ಪ್ರಕ್ರಿಯೆಯ ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ ಗೃಹ ಸಚಿವ ಅಮಿತ್ ಶಾ ವಾರಣಾಸಿಯಲ್ಲಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಸುನಿಲ್ ಬನ್ಸಾಲ್ ಕೂಡ ವಾರಣಾಸಿಯಲ್ಲಿ ಹಲವು ದಿನಗಳಿಂದ ಬೀಡು ಬಿಟ್ಟಿದ್ದಾರೆ. ವಾರಣಾಸಿಗೆ ಎರಡು ದಿನಗಳ ಭೇಟಿಯ ವೇಳೆ ಪ್ರಧಾನಿಗಳು ಕಾಶಿ ವಿಶ್ವನಾಥ ದೇವಾಲಯ ಮತ್ತು ಕಾಲ ಭೈರವ ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಮೋದಿಯವರನ್ನು ಸ್ವಾಗತಿಸಲು ಗುಜರಾತಿ, ಮರಾಠಿ, ತಮಿಳು, ಬೆಂಗಾಲಿ, ಪಂಜಾಬಿ ಮತ್ತು ಇತರ ಸಮುದಾಯಗಳ ಜನರು ಪ್ರಧಾನಿಯವರ ರೋಡ್ ಶೋ ಮಾರ್ಗದಲ್ಲಿ ಭಾರತದ ವೈವಿಧ್ಯತೆಯನ್ನು ವಿವಿಧ ಹಂತಗಳಲ್ಲಿ ಪ್ರದರ್ಶಿಸಲಾಗುತ್ತದೆ. ರೋಡ್ ಶೋ ಸಮಯದಲ್ಲಿ, ಪ್ರಧಾನಿಯವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್ಯು) ಗೇಟಿನಿಂದ ಕಾಶಿ ವಿಶ್ವನಾಥ ಕಾರಿಡಾರ್‌ವರೆಗಿನ ಐದು ಕಿಲೋಮೀಟರ್ ವ್ಯಾಪ್ತಿಯನ್ನು ಸರಿಸುಮಾರು ನಾಲ್ಕು ಗಂಟೆಗಳಲ್ಲಿ ಕ್ರಮಿಸಲಿದ್ದಾರೆ.
ರೋಡ್ ಶೋದಲ್ಲಿ ವಿವಿಧ ಕಲಾವಿದರು ಡಮರುಗ ಮತ್ತು ಶಂಖಗಳನ್ನು ನುಡಿಸಲಾಗುತ್ತದೆ. ಈ ರೋಡ್ ಶೋ ಕಾರ್ಯಕ್ರಮಕ್ಕಾಗಿ ಬಿಜೆಪಿ ಕ್ವಿಂಟಾಲ್‌ಗಟ್ಟಲೆ ಹೂವಿನ ದಳಗಳನ್ನು ಬಳಕೆ ಮಾಡಲಾಗಿದೆ. ಪ್ರಧಾನಿ ನಾಮನಿರ್ದೇಶನಕ್ಕೆ ಸಂಭಾವ್ಯ ಪ್ರಸ್ತಾಪಕರ ಪಟ್ಟಿಯನ್ನು ರಚಿಸಲಾಗಿದೆ ಮತ್ತು ಅದರಲ್ಲಿ ನಾಲ್ಕು ಹೆಸರುಗಳನ್ನು ಅಂತಿಮಗೊಳಿಸಲಾಗುತ್ತದೆ.
ಮೋದಿ ಅವರು 2014 ಮತ್ತು 2019ರಲ್ಲಿ ವಾರಣಾಸಿಯಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಸತತ 3ನೇ ಅವಧಿ ಗೆ ವಾರಣಾಸಿಯಿಂದಲೇ ಸ್ಪರ್ಧಿಸುತ್ತಿರುವ ಮೋದಿ ಹ್ಯಾಟ್ರಿಕ್ ಗೆಲುವಿನೊಂದಿಗೆ 3ನೇ ಬಾರಿಗೆ ಪ್ರಧಾನಿಯಾಗುವ ನಿರೀಕ್ಷೆಯಲ್ಲಿದ್ದಾರೆ.