Friday, November 22, 2024
Homeರಾಜ್ಯನ್ಯಾಯಾಂಗ ಆಯೋಗಕ್ಕೆ ಬಿಜೆಪಿ ಸರ್ಕಾರದ 40% ಕಮಿಷನ್ ಕುರಿತ ದಾಖಲೆಗಳ ಸಲ್ಲಿಕೆ : ಕೆಂಪಣ್ಣ

ನ್ಯಾಯಾಂಗ ಆಯೋಗಕ್ಕೆ ಬಿಜೆಪಿ ಸರ್ಕಾರದ 40% ಕಮಿಷನ್ ಕುರಿತ ದಾಖಲೆಗಳ ಸಲ್ಲಿಕೆ : ಕೆಂಪಣ್ಣ

ಬೆಂಗಳೂರು, ನ.28- ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಮಾಡಲಾಗದ ಶೇ.40ರಷ್ಟು ಕಮಿಷನ್ ಆರೋಪವನ್ನು ಸಾಬೀತು ಪಡಿಸುವಂತಹ ದಾಖಲೆಗಳನ್ನು ನ್ಯಾಯಾಂಗ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದ್ದಾರೆ.

ಶೇ.40ರಷ್ಟು ಕಮಿಷನ್ ಹಗರಣದ ತನಿಖೆಗಾಗಿ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚನೆ ಮಾಡಲಾಗಿದೆ. ಇಂದು ಆಯೋಗದ ಮುಂದೆ ಹಾಜರಾದ ಕೆಂಪಣ್ಣ ಸೇರಿದಂತೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ದಾಖಲೆಗಳನ್ನು ಹಾಜರು ಪಡಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಂಪಣ್ಣ, ತಾವು ಹಿಂದೆ ಸರ್ಕಾರದಲ್ಲಿ ನಡೆಯುತ್ತಿರುವ ಶೇ.40ರಷ್ಟು ಕಮಿಷನ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಆರೋಪ ಮಾಡಿದ್ದೇವು. ಇಂದು ಆಯೋಗದ ಮುಂದೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ್ದೇವೆ. ಯಾವೆಲ್ಲಾ ದಾಖಲೆ ನೀಡಿದ್ದೇವೆ, ಎಷ್ಟು ಪ್ರಮಾಣದ ದಾಖಲೆ ನೀಡಿದ್ದೇವೆ ಎಂಬ ಬಗ್ಗೆ ನಾವು ಬಹಿರಂಗ ಪಡಿಸುವುದಿಲ್ಲ. ಈಗಾಗಲೇ ಆಯೋಗಕ್ಕೆ ಸಲ್ಲಿಸಿರುವುದರಿಂದ ಇನ್ನೂ ಮುಂದೆ ನ್ಯಾಯಮೂರ್ತಿಯವರೇ ಮಾಹಿತಿ ನೀಡಬೇಕು ಎಂದರು.

ಚೀನಾ ನ್ಯೂಮೋನಿಯ ಆತಂಕ, ಭಾರತದಲ್ಲಿ ಹೈ ಅಲರ್ಟ್ ಘೋಷಣೆ

ತಮ್ಮ ಬಳಿ ಇನ್ನೂ ಹೆಚ್ಚುವರಿ ದಾಖಲೆಗಳನ್ನು ನೀಡುವಂತೆ ಆಯೋಗ ಕೇಳಿದೆ. ಅವುಗಳನ್ನು 10 ದಿನಗಳ ಒಳಗಾಗಿ ಒದಗಿಸುತ್ತೇವೆ. ಕೆಲವು ಮಾಹಿತಿಗಳಿಗಾಗಿ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಲಾಗಿದೆ. ಅದು ನಮ್ಮ ಕೈ ಸೇರಲು ಕೆಲ ಸಮಯಾವಕಾಶ ಬೇಕಿದೆ. ಅದಕ್ಕಾಗಿ 10 ದಿನಗಳ ಬಳಿಕ ಮತ್ತೆ ಆಯೋಗದ ಮುಂದೆ ಹಾಜರಾಗುತ್ತೇವೆ ಎಂದರು.

ನಾವು ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ನಾವು ಯಾವುದೇ ಪಕ್ಷಕ್ಕೆ ಸೇರಿಲ್ಲ. ಯಾರ ವಿರುದ್ಧವೂ ಇಲ್ಲ. ವ್ಯವಸ್ಥೆ ಕುರಿತು ನಮ್ಮ ಹೋರಾಟ ನಡೆಯುತ್ತಿದೆ. ನಮ್ಮ ಸಂಘಟನೆಯಲ್ಲಿ ಎಲ್ಲಾ ಪಕ್ಷಕ್ಕೆ ಸೇರಿದವರು ಇದ್ದಾರೆ ಎಂದರು.

ಡೀಪ್‍ಫೇಕ್ ವಿಡಿಯೋ ಬಗ್ಗೆ ಮೌನ ಮುರಿದ ರಶ್ಮಿಕಾ

ಇಂದು ಸಲ್ಲಿಸಿರುವ ದಾಖಲೆಗಳಲ್ಲಿ ಲೋಕಪಯೋಗಿ, ಸಣ್ಣ, ಬೃಹತ್ ನೀರಾವರಿ, ಪಂಚಾಯತ್ ರಾಜ್, ಆರೋಗ್ಯ ಸೇರಿ ಎಲ್ಲಾ ಇಲಾಖೆಗಳಿಗೆ ಸೇರಿದ ದಾಖಲೆಗಳನ್ನು ನೀಡಲಾಗಿದೆ ಎಂದು ಹೇಳಿದರು. ಪ್ರಸ್ತುತ ಸರ್ಕಾರಕ್ಕೆ ಸೇರಿದ ಒಂದೆರಡು ಪ್ರಕರಣಗಳ ದಾಖಲೆಗಳನ್ನು ನೀಡಲಾಗಿದೆ ಎಂದರು.

RELATED ARTICLES

Latest News