Sunday, December 1, 2024
Homeರಾಜ್ಯರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಶಂಕಿತನೊಬ್ಬನನ್ನು ವಶಕ್ಕೆ ಪಡೆದ ಎನ್‍ಐಎ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಶಂಕಿತನೊಬ್ಬನನ್ನು ವಶಕ್ಕೆ ಪಡೆದ ಎನ್‍ಐಎ

ಬೆಂಗಳೂರು, ಮಾ.13- ರಾಮೇಶ್ವರಂ ಕೆಫೆಯ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಫೋಟದ ಬಗ್ಗೆ ಮಾಹಿತಿ ತಿಳಿದವನು ಎಂದು ಭಾವಿಸಲಾದ ಬಳ್ಳಾರಿ ಕೌಲ್‍ಬಜಾರ್ ಪ್ರದೇಶದ ವಾಸಿ ಶಬ್ಬಿರ್ ಎಂಬಾತನನ್ನು ಆತನ ಪ್ರವಾಸದ ಇತಿಹಾಸದ ಆಧಾರದ ಮೇಲೆ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎನ್‍ಐಎ ಅಧಿಕಾರಿಗಳು ಕಳೆದ ವಾರ ಸೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಂಕಿತ ಆರೋಪಿಯ ಭಾವಚಿತ್ರಗಳನ್ನು ಬಹಿರಂಗಪಡಿಸಿದರು. ಆತ ಎಲ್ಲೆಲ್ಲಿ ಸಂಚರಿಸಿದ್ದಾನೆ ಎಂಬ ಮಾಹಿತಿಗಳನ್ನು ಬೆನ್ನತ್ತಿದ್ದ ಎನ್‍ಐಎ ಅಧಿಕಾರಿಗಳು ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆಗೊಳಪಡಿಸಿದ್ದಾರೆ.

ಬಸ್ ನಿಲ್ದಾಣ ಹಾಗೂ ಆರೋಪಿ ಸಂಚರಿಸಿರುವ ರಸ್ತೆಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಆತ ಬೆಂಗಳೂರು, ತುಮಕೂರು, ಬಳ್ಳಾರಿ, ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಂಚರಿಸಿರುವ ಕುರುಹುಗಳು ದೊರೆತಿವೆ. ಮುಖ್ಯ ಆರೋಪಿಯ ಈ ಪ್ರವಾಸದ ಇತಿಹಾಸವನ್ನು ತಪಾಸಣೆಗೊಳಪಡಿಸುವಾಗ ಶಬ್ಬಿರ್ ಎಂಬಾತನ ಮೇಲೆ ಶಂಕೆ ವ್ಯಕ್ತವಾಗಿದೆ. ಈತನಿಗೆ ಬೆಂಗಳೂರು ಸೋಟದ ಬಗ್ಗೆ ಮಾಹಿತಿ ಇತ್ತು ಎಂಬ ಅಂಶಗಳು ಬಹಿರಂಗಗೊಂಡಿವೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಎನ್‍ಐಎ ಅಧಿಕಾರಿಗಳು ಶಂಕಿತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅದರ ಹೊರತಾಗಿಯೂ ಮುಖ್ಯ ಆರೋಪಿಯ ಬೆನ್ನತ್ತಿರುವ ತನಿಖಾಕಾರಿಗಳು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಸೋಟದ ಪ್ರಮುಖ ಆರೋಪಿಯ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಲಾಗಿದೆ. ಮಾ.1ರಂದು ಬೆಂಗಳೂರಿನ ಕುಂದಲಹಳ್ಳಿಯಲ್ಲಿನ ರಾಮೇಶ್ವರಂ ಕೆಫೆಯಲ್ಲಿ ಸುಧಾರಿತ ಬಾಂಬ್ ಸೋಟಿಸಲಾಗಿತ್ತು. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದರು. ಇದು ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ಆರಂಭದಲ್ಲಿ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದರು. ಆದರೆ ಸೋಟದಲ್ಲಿ ಭಾಗಿಯಾಗಿರುವ ದುಷ್ಕರ್ಮಿ ಯಾವುದೇ ಸುಳಿವು ದೊರೆಯದಂತೆ ಪೂರ್ವಯೋಜಿತ ಹುನ್ನಾರ ನಡೆಸಿರುವುದು ಕಂಡುಬಂದಿದೆ. ಹೀಗಾಗಿ ಘಟನೆ ನಡೆದು 13 ದಿನಗಳು ಕಳೆದರೂ ಪ್ರಮುಖ ಆರೋಪಿಯನ್ನು ಬಂಸಲು ಸಾಧ್ಯವಾಗಿಲ್ಲ. ಸಿಸಿಬಿ ಮತ್ತು ಎನ್‍ಐಎ ಅಧಿಕಾರಿಗಳು ಹಲವಾರು ತಂಡಗಳನ್ನು ರಚಿಸಿಕೊಂಡು ದುಷ್ಕರ್ಮಿಯನ್ನು ಎಡೆಮುರಿ ಕಟ್ಟಲು ಹಗಲಿರುಳು ಶ್ರಮಿಸುತ್ತಿದ್ದಾರೆ.

RELATED ARTICLES

Latest News