Sunday, May 5, 2024
Homeಅಂತಾರಾಷ್ಟ್ರೀಯಚೀನಾದ ರೆಸ್ಟೋರೆಂಟ್‌ನಲ್ಲಿ ಸ್ಫೋಟ ಒಬ್ಬ ಸಾವು, 22 ಮಂದಿ ಗಾಯ

ಚೀನಾದ ರೆಸ್ಟೋರೆಂಟ್‌ನಲ್ಲಿ ಸ್ಫೋಟ ಒಬ್ಬ ಸಾವು, 22 ಮಂದಿ ಗಾಯ

ಬೀಜಿಂಗ್, ಮಾ.13 : ಚೀನಾದ ಉತ್ತರದಲ್ಲಿರುವ ಹೆಬೈ ಪ್ರಾಂತ್ಯದಲ್ಲಿನ ರೆಸ್ಟೊರೆಂಟ್ನಲ್ಲಿ ಅನಿಲ ಸೋಟ ಸಂಭವಿಸಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 22 ಮಂದಿ ಗಾಯಗೊಂಡಿದ್ದು, ಸ್ಪೋಟದಿಂದ ಕಟ್ಟಡ ಮತ್ತು ಹಲವು ವಾಹನಗಳಿಗೆ ಹಾನಿಯಾಗಿದೆ.ಯಾಂಜಿಯಾವೊ ಟೌನ್ಶಿಪ್ನಲ್ಲಿರುವ ಫ್ರೈಡ್ ಚಿಕನ್ ಅಂಗಡಿಯಲ್ಲಿ ಅನಿಲ ಸೋರಿಕೆಯಿಂದ ಸೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ ಎಂದು ಸರ್ಕಾರಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಯಾಂಜಿಯಾವೊ ಟೌನ್ಶಿಪ್ ಬೀಜಿಂಗ್ನ ಹೊರವಲಯದಲ್ಲಿದೆ.ಸಾನ್ಹೆಯ ಯಾಂಜಿಯಾವೊ ಪಟ್ಟಣದಲ್ಲಿ ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ (ಸ್ಥಳೀಯ ಕಾಲಮಾನ) ಕಟ್ಟಡದಲ್ಲಿ ಸೋಟ ಸಂಭವಿಸಿದೆ.

ಈ ಸ್ಥಳದ ವೀಡಿಯೊ ತುಣುಕನ್ನು ಬಿಡುಗಡೆ ಮಾಡಿಲಾಗಿದ್ದು ಅದರಲ್ಲಿ ಕೆಂಪು ಜ್ವಾಲೆ ಮತ್ತು ಹೊಗೆಯ ಗರಿಗಳನ್ನು ತೋರಿಸಿದೆ, ಅಗ್ನಿಶಾಮಕ ದಳದವರು ಪ್ರಸ್ತುತ ಸ್ಥಳದಲ್ಲಿ ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

RELATED ARTICLES

Latest News