Thursday, December 5, 2024
Homeಕ್ರೀಡಾ ಸುದ್ದಿ | Sportsಕೆ.ಎಲ್‌.ರಾಹುಲ್‌ ಔಟಾ? ನಾಟ್‌ ಔಟಾ? : ಅಂಪೈರ್‌ ತೀರ್ಪು ವಿರುದ್ಧ ಮಾಜಿ ಕ್ರಿಕೆಟಿಗರ ಆಕ್ರೋಶ

ಕೆ.ಎಲ್‌.ರಾಹುಲ್‌ ಔಟಾ? ನಾಟ್‌ ಔಟಾ? : ಅಂಪೈರ್‌ ತೀರ್ಪು ವಿರುದ್ಧ ಮಾಜಿ ಕ್ರಿಕೆಟಿಗರ ಆಕ್ರೋಶ

KL Rahul laughs at umpire's decision,

ಪತ್‌ ರ್, ನ. 22- ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ ನ ಪ್ರಥಮ ಇನ್ನಿಂಗ್ಸ್ ನಲ್ಲಿ ಕನ್ನಡಿಗ ಕೆ.ಎಲ್‌. ರಾಹುಲ್‌ ವಿವಾದಾತ್ಮಕ ತೀರ್ಪಿನಿಂದ ವಿಕೆಟ್‌ ಒಪ್ಪಿಸಿದ್ದು, ಭಾರತದ ಮಾಜಿ ಕ್ರಿಕೆಟಿಗರು ಮೂರನೇ ಅಂಪೈರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧ ನಡೆದಿದ್ದ ಟೆಸ್ಟ್‌ ಸರಣಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ರಾಹುಲ್‌, ಆಸ್ಟ್ರೇಲಿಯಾದ ಬೌನ್ಸಿ ಹಾಗೂ ವೇಗದ ಪಿಚ್‌ ನಲ್ಲಿ ತಾಳೆಯುತ ಬ್ಯಾಟಿಂಗ್‌ ನಡೆಸಿ ಬೃಹತ್‌ ಮೊತ್ತ ಕಲೆ ಹಾಕುವ ಸೂಚನೆ ನೀಡಿದ್ದರು. ಆದರೆ 26ನೇ ಓವರ್‌ ನಲ್ಲಿ ಮೂರನೇ ಅಂಪೈರ್‌ ನೀಡಿದ್ದ ವಿವಾದಾತಕ ತೀರ್ಪಿನಿಂದ ರಾಹುಲ್‌ ಬೇಸರದಿಂದಲೇ ಮೈದಾನ ತೊರೆದಿದ್ದರು.

ಆರಂಭಿಕ ಆಘಾತ ಅನುಭವಿಸಿದ್ದ ಟೀಮ್‌ ಇಂಡಿಯಾ ಆಗಾಗಲೇ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ನಡುವೆ ರಾಹುಲ್‌ ಸಂಶಯಪಡುವಂತಹ ತೀರ್ಪಿಗೆ ವಿಕೆಟ್‌ ಒಪ್ಪಿಸಿದ್ದು ಮಾಜಿ ಕ್ರಿಕೆಟಿಗರು ಮೂರನೇ ಅಂಪೈರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸೀಸ್‌‍ ವೇಗಿ ಮಿಚೆಲ್‌ ಸ್ಟ್ರಾಕ್‌ ಅವರ ಓವರ್‌ ನಲ್ಲಿ ಚೆಂಡು ಬ್ಯಾಟ್‌ಗೆ ತಗುಲಿದಂತೆ ಭಾಸವಾಗಿ ವಿಕೆಟ್‌ ಕೀಪರ್‌ ಅಲೆಕ್ಸ್ ಕೇರಿ ಕೈಗಳಲ್ಲಿ ಸೆರೆಯಾಯಿತು. ಈ ವೇಳೆ ಆನ್‌ ಫೀಲ್ಡ್ ಅಂಪೈರ್‌ ನಾಟೌಟ್‌ ತೀರ್ಪು ನೀಡಿದ್ದರು. ನಂತರ ಮೂರನೇ ಅಂಪೈರ್‌ ಬಳಿ ರಿವ್ಯೂ ಕೇಳಿದಾಗ ಚೆಂಡು ಮೊದಲಿಗೆ ಪ್ಯಾಡ್‌ ಅಥವಾ ಬ್ಯಾಟ್‌ಗೆ ಬಡಿದಿದೆಯೋ ಎಂಬ ಅನುಮಾನ ಮೂಡಿಸಿತ್ತು. ಆದರೆ ಮೂರನೇ ಅಂಪೈರ್‌ ರಾಹುಲ್‌ (26 ರನ್‌) ಔಟ್‌ ಎಂಬ ತೀರ್ಪು ನೀಡಿ ವಿವಾದ ಮೂಡಿಸಿದರು.

ಪರ್ತ್‌ ಟೆಸ್ಟ್‌ ನಲ್ಲಿ ಕೆ.ಎಲ್‌. ರಾಹುಲ್‌ ರಿಗೆ ಔಟ್‌ ತೀರ್ಪು ನೀಡಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ ಎಂದು ಕನ್ನಡಿಗ ರಾಬಿನ್‌ ಉತ್ತಪ್ಪ ತಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರನೇ ಅಂಪೈರ್‌ ವೇಗಿ ಮಿಚೆಲ್‌ ಸ್ಟ್ರಾಕ್‌ ಮಾಡಿದ ಬೌಲಿಂಗ್‌ ಅನ್ನು ಹಲವು ಕೋನಗಳಿಂದ ಪರಿಶೀಲಿಸಿದ್ದಾರೆ, ಆದರೆ ರಾಹುಲ್‌ ಅವರು ಬ್ಯಾಟ್‌ ಮಾಡಿದ ದೃಶ್ಯವನ್ನು ಸರಿಯಾಗಿ ಗಮನಿಸದೆ ಔಟ್‌ ಎಂಬ ತೀರ್ಪು ನೀಡಿದ್ದಾರೆ ಎಂದು ವರುಣ್‌ ಆರೋನ್‌ ತಿಳಿಸಿದ್ದಾರೆ.

ಅದೇ ರೀತಿ ಮಾಜಿ ಕ್ರಿಕೆಟಿಗರು ಹಾಗೂ ಖ್ಯಾತ ಕ್ರಿಕೆಟ್‌ ವಿಶ್ಲೇಷಕರಾದ ಮುರಳಿ ಕಾರ್ತಿಕ್‌, ವಾಸಿಂ ಜಾಫರ್‌ , ಆಕಾಶ್‌ ಚೋಪ್ರಾ ಕೂಡ ಮೂರನೇ ಅಂಪೈರ್‌ ನೀಡಿದ ತೀರ್ಪನ್ನು ಖಂಡಿಸಿದ್ದಾರೆ.

RELATED ARTICLES

Latest News