Sunday, May 5, 2024
Homeರಾಜ್ಯರಾಜ್ಯದಲ್ಲಿ ನಾಮಪತ್ರ ವಾಪಸ್ ಪಡೆಯಲು ಇಂದು ಕೊನೇ ದಿನ

ರಾಜ್ಯದಲ್ಲಿ ನಾಮಪತ್ರ ವಾಪಸ್ ಪಡೆಯಲು ಇಂದು ಕೊನೇ ದಿನ

ಬೆಂಗಳೂರು,ಏ.8- ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ನಾಮಪತ್ರ ವಾಪಸ್ ಪಡೆಯುವ ಅವಧಿ ಇಂದು ಮುಕ್ತಾಯಗೊಂಡಿದ್ದು, ಸಂಜೆ ವೇಳೆಗೆ ಚುನಾವಣಾ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಪ್ರಕಟವಾಗಲಿದೆ. ಆಯಾ ಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಗಳಲ್ಲಿ ಪಟ್ಟಿ ಪ್ರಕಟಿಸಲಾಗುತ್ತದೆ. ಹೀಗಾಗಿ ಇಂದಿನಿಂದಲೇ ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗಲಿದೆ.

ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ನಡುವೆ ಆರೋಪ, ಪ್ರತ್ಯಾರೋಪ ತಾರಕಕ್ಕೇರಲಿದ್ದು, ರೋಡ್ ಶೋ, ಬಹಿರಂಗ ಸಮಾವೇಶದ ಮೂಲಕ ಮತದಾರರ ಮನ ಗೆಲ್ಲಲು ಪ್ರಯತ್ನಿಸಲಾಗುತ್ತಿದೆ. ಮೊದಲ ಹಂತದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಚಾರದ ಅಬ್ಬರದಲ್ಲಿ ಮುಂದಿವೆ. ಪಕ್ಷೇತರರು ಸೇರಿದಂತೆ ಉಳಿದ ಪಕ್ಷಗಳ ಅಭ್ಯರ್ಥಿಗಳು ಕೂಡ ಪ್ರಚಾರದಲ್ಲಿ ನಿರತರಾಗಿದ್ದಾರೆ.

14 ಲೋಕಸಭಾ ಕ್ಷೇತ್ರಗಳಲ್ಲಿ 300 ಅಭ್ಯರ್ಥಿಗಳ 419 ನಾಮಪತ್ರಗಳು ಮಾನ್ಯವಾಗಿದ್ದು, 74 ನಾಮಪತ್ರಗಳು ತಿರಸ್ಕøತಗೊಂಡಿವೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಸ್ರ್ಪಧಿಸಿದ್ದರೆ, ಬಿಜೆಪಿ 11 ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಬಿಎಸ್‍ಪಿ -5 , ನೋಂದಾಯಿತ ಹಾಗೂ ಮಾನ್ಯತೆ ಪಡೆಯದ ಪಕ್ಷಗಳಿಂದ 71, ಹಾಗೂ 102 ಪಕ್ಷೇತರರು ನಾಮಪತ್ರ ಸಲ್ಲಿಸಿದ್ದರು.

ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ವಿವರ:
ಉಡುಪಿ-ಚಿಕ್ಕಮಗಳೂರು:
ಕೋಟಾ ಶ್ರೀನಿವಾಸಪೂಜಾರಿ(ಬಿಜೆಪಿ) ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್)
ಹಾಸನ: ಪ್ರಜ್ವಲ್ ರೇವಣ್ಣ (ಜೆಡಿಎಸ್), ಶ್ರೇಯಸ್ ಪಟೇಲ್ ಗೌಡ(ಕಾಂಗ್ರೆಸ್)
ದಕ್ಷಿಣ ಕನ್ನಡ: ಬ್ರಿಜೇಶ್ ಚೌಟ(ಬಿಜೆಪಿ), ಪದ್ಮರಾಜ್(ಕಾಂಗ್ರೆಸ್)
ಚಿತ್ರದುರ್ಗ: ಗೋವಿಂದ ಕಾರಜೋಳ(ಬಿಜೆಪಿ), ಬಿ.ಎನ್.ಚಂದ್ರಪ್ಪ(ಕಾಂಗ್ರೆಸ್)
ತುಮಕೂರು: ವಿ.ಸೋಮಣ್ಣ (ಬಿಜೆಪಿ), ಎಸ್.ಪಿ.ಮುದ್ದಹನುಮೇಗೌಡ(ಕಾಂಗ್ರೆಸ್)
ಮಂಡ್ಯ: ಎಚ್.ಡಿ.ಕುಮಾರಸ್ವಾಮಿ( ಜೆಡಿಎಸ್), ವೆಂಕಟರಮಣೇ ಗೌಡ(ಕಾಂಗ್ರೆಸ್)
ಮೈಸೂರು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ಬಿಜೆಪಿ), ಎಂ.ಲಕ್ಷ್ಮಣ್(ಕಾಂಗ್ರೆಸ್)
ಚಾಮರಾಜನಗರ: ಎಸ್.ಬಾಲರಾಜ್(ಬಿಜೆಪಿ), ಸುನೀಲ್ ಬೋಸ್(ಕಾಂಗ್ರೆಸ್)
ಬೆಂಗಳೂರು ಗ್ರಾಮಾಂತರ: ಡಾ.ಸಿ.ಎನ್.ಮಂಜುನಾಥ್ (ಬಿಜೆಪಿ), ಡಿ.ಕೆ.ಸುರೇಶ್(ಕಾಂಗ್ರೆಸ್)
ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ(ಬಿಜೆಪಿ), ರಾಜೀವ್ ಗೌಡ (ಕಾಂಗ್ರೆಸ್)
ಬೆಂಗಳೂರು ಕೇಂದ್ರ: ಪಿ.ಸಿ.ಮೋಹನ್(ಬಿಜೆಪಿ), ಮನ್ಸೂರ್ ಆಲಿಖಾನ್(ಕಾಂಗ್ರೆಸ್)
ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ(ಬಿಜೆಪಿ), ಸೌಮ್ಯ ರೆಡ್ಡಿ(ಕಾಂಗ್ರೆಸ್)
ಚಿಕ್ಕಬಳ್ಳಾಪುರ: ಡಾ.ಕೆ.ಸುಧಾಕರ್ (ಬಿಜೆಪಿ), ರಕ್ಷಾ ರಾಮಯ್ಯ(ಕಾಂಗ್ರೆಸ್)
ಕೋಲಾರ: ಎಂ.ಮಲ್ಲೇಶ್ ಬಾಬು( ಜೆಡಿಎಸ್), ಕೆ.ವಿ.ಗೌತಮ್(ಕಾಂಗ್ರೆಸ್)

RELATED ARTICLES

Latest News