Friday, May 24, 2024
Homeಜಿಲ್ಲಾ ಸುದ್ದಿಗಳುತುಮಕೂರು ರಸ್ತೆಯ ಅಂಚೆಪಾಳ್ಯ ಬಳಿ ಹೊತ್ತಿಉರಿದ ಚಲಿಸುತ್ತಿದ್ದ ಲಾರಿ

ತುಮಕೂರು ರಸ್ತೆಯ ಅಂಚೆಪಾಳ್ಯ ಬಳಿ ಹೊತ್ತಿಉರಿದ ಚಲಿಸುತ್ತಿದ್ದ ಲಾರಿ

ಬೆಂಗಳೂರು, ಮಾ.15- ಚಲಿಸುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸುಟ್ಟುಹೋದ ಘಟನೆ ತುಮಕೂರು ರಸ್ತೆಯ ಅಂಚೆಪಾಳ್ಯ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲಾರಿ ಎಲೆಕ್ಟ್ರಾನಿಕ್ ವಸ್ತುಗಳನ್ನು ತುಂಬಿಕೊಂಡು ಕನಕಪುರದಿಂದ ವಿಶಾಖಪಟ್ಟಣಕ್ಕೆ ಹೊರಟಿದ್ದಾಗ ಈ ದುರ್ಘಟನೆ ನಡೆದಿದೆ.

ಶಾರ್ಟ್ ಸಕ್ರ್ಯೂಟ್‍ನಿಂದ ಲಾರಿಗೆ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಅದೃಷ್ಟವಶಾತ್ ಬೆಂಕಿ ಕಾಣಿಸಿಕೊಳ್ಳುವಾಗಲೇ ಚಾಲಕ ವಿದ್ಯಾನಂದರಾಮ್ ಹೊರಗೆ ಹಾರಿ ಪಾರಾಗಿದ್ದಾನೆ.

ಪೀಣ್ಯಾ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುತ್ತಿದ್ದಾರೆ ಘಟನೆಯಿಂದ ರಾತ್ರಿಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ ಈ ಹಿನ್ನಲೆ ನೆಲಮಂಗಲ ಸಂಚಾರಿ ಪೊಲೀಸರು ವಾಹನಗಳ ನಿಯಂತ್ರಣ ಮಾಡಲು ಹರಸಾಹಸ ಪಡುತ್ತಿದ್ದಾರೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News