Wednesday, December 6, 2023
Homeರಾಜ್ಯಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ, ಹೊತ್ತಿ ಉರಿದ ನಾಲ್ಕು ಅಂತಸ್ತಿನ ಕಟ್ಟಡ

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ, ಹೊತ್ತಿ ಉರಿದ ನಾಲ್ಕು ಅಂತಸ್ತಿನ ಕಟ್ಟಡ

ಬೆಂಗಳೂರು, ನ.13- ರಾಜಧಾನಿಯಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಫರ್ನಿಚರ್ ಶೋರೂಂ ಸುಟ್ಟು ಕರಕಲಾಗಿರುವ ಘಟನೆ ಹೊರಮಾವು ಬಳಿಯ ಔಟರ್ ರಿಂಗ್ ರೋಡ್‍ನಲ್ಲಿ ತಡರಾತ್ರಿ ನಡೆದಿದೆ. ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೆಲ ಹಾಗೂ ಮೊದಲನೇ ಮಹಡಿಯಲ್ಲಿದ್ದ ಪಿಠೋಪಕರಣದ ಅಂಗಡಿಗೆ ಬೆಂಕಿಯ ಜ್ವಾಲೆ ವ್ಯಾಪಿಸಿ ಲಕ್ಷಾಂತರ ರೂ. ಮೌಲ್ಯದ ಪಿಠೋಪಕರಣಗಳು ಹಾಗೂ ದಾಖಲೆಗಳು ಸುಟ್ಟು ಕರಕಲಾಗಿವೆ.

ಶಂಕರ್ ಎಂಬುವವರಿಗೆ ಸೇರಿದ್ದ ನಾಲ್ಕು ಅಂತಸ್ತಿನ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಕೋಚಿಂಗ್ ಸೆಂಟರ್ ಹಾಗೂ 3 ಮತ್ತು 4ನೇ ಅಂತಸ್ತಿನಲ್ಲಿ ಐಟಿ ಕಂಪನಿ ಇದ್ದು, ಅಲ್ಲಿಗೂ ಸಹ ಬೆಂಕಿ ಆವರಿಸಿ ಅಲ್ಲಿದ್ದ ಪಿಠೋಪಕರಣಗಳು, ದಾಖಲೆಗಳು ಸುಟ್ಟು ಬೆಂಕಿಗಾಹುತಿಯಾಗಿದೆ.

ದೀಪಾವಳಿ ‘ಗಿಫ್ಟ್’ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಾಸೆ

ಕೂಡಲೇ ಎಚ್ಚೆತ್ತ ಸೆಕ್ಯೂರಿಟಿ ಗಾರ್ಡ್‍ಗಳು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಐದು ವಾಹನಗಳಲ್ಲಿ ಬಂದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ಭದ್ರತಾ ಸಿಬ್ಬಂದಿಗಳನ್ನು ರಕ್ಷಿಸಿದ್ದಾರೆ. ಶೋರೂಂನಲ್ಲಿ ಮರದ ಪಿಠೋಪಕರಣಗಳು ಹೆಚ್ಚಾಗಿದ್ದರಿಂದ ಬೆಂಕಿಯ ಜ್ವಾಲೆ ಹೆಚ್ಚಾಗಿದ್ದು, ಉಳಿದ ಮೇಲಂತಸ್ತಿನ ಕಟ್ಟಡಗಳಿಗೂ ಬೆಂಕಿ ವ್ಯಾಪಿಸುವಷ್ಟರಲ್ಲಿ ಸಿಬ್ಬಂದಿಗಳು ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ತಹಬದಿಗೆ ತಂದು ಸಂಭವಿಸಬಹುದಾದ ಬಾರಿ ಅನಾಹುತವನ್ನು ತಪ್ಪಿಸಿದ್ದಾರೆ.

ಫರ್ನಿಚರ್ ಶೋರೂಂನಲ್ಲಿ ಶಾರ್ಕ್‍ಸಕ್ಯೂರ್ಟ್‍ನಿಂದಾಗಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಈ ಸಂಬಂಧ ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ನಗರದ ವೀರಭದ್ರ ನಗರದಲ್ಲಿ ಬಸ್ ಗ್ಯಾರೇಜ್‍ನಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ 18 ಖಾಸಗಿ ಬಸ್‍ಗಳು ಸುಟ್ಟು ಕರಕಲಾಗಿದ್ದವು.

ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದ್ದು ಅದೃಷ್ಟ ವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಿಲಿಕಾನ್ ಸಿಟಿಯಲ್ಲಿ ಮೇಲಿಂದ ಮೇಲೆ ಬೆಂಕಿ ಅವಘಡಗಳು ಸಂಭವಿಸುತ್ತಲೇ ಇದ್ದು, ಕಾರ್ಖಾನೆ, ಶೋರೂಂ, ಕಚೇರಿ, ಅಂಗಡಿ ಮಾಲೀಕರು ಎಚ್ಚರದಿಂದ ಇರಬೇಕಾಗುವುದರ ಜೊತೆಗೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ಹೆಚ್ಚಿನ ಅನಾಹುತವನ್ನು ನಿಯಂತ್ರಿಸಬಹುದಾಗಿದೆಯೆಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮನವಿ ಮಾಡಿದ್ದಾರೆ.

RELATED ARTICLES

Latest News