Saturday, July 27, 2024
Homeರಾಜ್ಯಲವ್‌ ಜಿಹಾದ್‌ ವಿರುದ್ಧ ಶ್ರೀರಾಮ ಸೇನೆ ಸಹಾಯವಾಣಿಗೆ 400ಕ್ಕೂ ಹೆಚ್ಚು ಕರೆ

ಲವ್‌ ಜಿಹಾದ್‌ ವಿರುದ್ಧ ಶ್ರೀರಾಮ ಸೇನೆ ಸಹಾಯವಾಣಿಗೆ 400ಕ್ಕೂ ಹೆಚ್ಚು ಕರೆ

ಹುಬ್ಬಳಿ, ಜೂ.2- ಅಂಜಲಿ ಅಂಬೀಗೇರ ಹಾಗೂ ನೇಹಾ ಹಿರೇಮಠ ಕೊಲೆ ನಂತರ ಸಾಕಷ್ಟು ಆತಂಕದಲ್ಲಿ ಇದ್ದ ಹಿಂದು ಹೆಣ್ಣು ಮಕ್ಕಳ, ಯುವತಿಯರ ಸಹಾಯಕ್ಕಾಗಿ ಶ್ರೀ ರಾಮ ಸೇನೆ ಸ್ಥಾಪಿಸಿದ್ದ ಸಹಾಯವಾಣಿಗೆ ಕೇವಲ ಮೂರು ದಿನಗಳಲ್ಲಿ 400 ಕ್ಕೂ ಹೆಚ್ಚು ಕರೆಗಳು ಬಂದಿವೆ.

ವಿಶೇಷವಾಗಿ ಲವ್‌ ಜಿಹಾದ್‌ ವಿರುದ್ಧ ಸಮರ ಸಾರಿರುವ ಶ್ರೀ ರಾಮ ಸೇನೆ ಯಾವುದೇ ಕ್ರೌರಕ್ಕೆ ಹೆಣ್ಣು ಮಕ್ಕಳು, ಯುವತಿಯರು ಅಮಾಯಕರು ಬಲಿ ಆಗಬಾರದು ಮತ್ತು ಪೊಲೀಸ್‌‍ ನೈತಿಕಗಿರಿ ವಿರುದ್ಧ ಸೆಡ್ಡು ಹೊಡೆದಿರುವ ಶ್ರೀ ರಾಮ ಸೇನೆ ಕಾರ್ಯಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಂತಾಗಿದೆ.

ಹುಬ್ಬಳ್ಳಿಯಲ್ಲಿ ಶ್ರೀ ರಾಮ ಸೇನೆ ಆರಂಭಿಸಿದ್ದ ಸಹಾಯವಾಣಿಯಲ್ಲಿ ನುರಿತ ಕಾನೂನು ತಜ್ಞರು, ವಿವಿಧ ಕ್ಷೇತ್ರಗಳಲ್ಲಿನ ಪರಿಣಿತರು ಹಾಗೂ ಶ್ರೀ ರಾಮಸೇನೆ ಪ್ರಮುಖರು ಕಾರ್ಯಕರ್ತರು ಪ್ರತಿದಿನ ಸಹಾಯವಾಣಿಗೆ ಬಂದ ಕರೆಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಸಾಧ್ಯವಾದ ಮಟ್ಟಿಗೆ ಪರಿಹರಿಸಲು ಮುಂದಾಗಿದ್ದಾರೆ. ಈಗ ಬಂದ ಕರೆಗಳಲ್ಲಿ ಲವ್‌ ಜಿಹಾದ್‌ ವಿರುದ್ಧ ನಲುಗಿದ ಮಹಿಳೆಯರ ಯುವತಿಯರ ಕರೆ ಆಗಿವೆ. ಮಹಿಳೆಯರ ರಕ್ಷಣೆಗಾಗಿ ಸ್ಥಾಪಿಸಿದ ಸಹಾಯವಾಣಿಗೆ ಬಂದ ಕರೆಗಳು ಸಹ ದಾಖಲಾಗಿತ್ತಿವೆ.

400 ಕ್ಕೂ ಹೆಚ್ಚು ಕರೆಗಳು ಸಹಾಯವಾಣಿಗೆ ಬಂದ ಕರೆಗಳಲ್ಲಿ ಹುಬ್ಬಳ್ಳಿ ಧಾರವಾಡ, ನವಲಗುಂದ ನರಗುಂದ, ಕೊಪ್ಪಳ ಹಾಗೂ ಗದಗ ಜಿಲ್ಲೆಯಿಂದಲೂ ಬಂದಿವೆ.ಲವ್‌ ಜಿಹಾದ್‌ ಹೆಸರಲ್ಲಿ ಯಾರು ಆತಹತ್ಯೆ ಮಾಡಿಕೊಳ್ಳಬೇಡಿ ಎಂಬ ಸಂದೇಶ ರವಾನೆ ಮಾಡಿದ್ದು ನೈತಿಕ ಬೆಂಬಲ ನೀಡಲಾಗುತ್ತಿದ್ದು, ಪ್ರೀತಿ ಪ್ರೇಮದ ಹೆಸರಲ್ಲಿ ಹಿಂದೂ ಹೆಣ್ಣು ಮಕ್ಕಳ ಮತಾಂತರ ಆಗುವ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಾ ಇದೆ. ದಿನದ 24 ಗಂಟೆಯಲ್ಲಿ ಯಾವದೇ ಸಮಯದಲ್ಲಿ ನೀವು ಕರೆ ಮಾಡಲು ಅವಕಾಶ ನೀಡಲಾಗಿದೆ.

ಇನ್ನು ಇದೇ ಸಮಯದಲ್ಲಿ ಶ್ರೀ ರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ಇಷ್ಟೊಂದು ಬೇಗನೆ ಈ ರೀತಿಯಲ್ಲಿ ಕರೆಗಳು ಬರುತ್ತೇವೆ ಎಂದು ಊಹೆ ಮಾಡರಲಿಲ್ಲ. ಮೇ 29 ರಂದು ಆರಂಭ ಮಾಡಿದ್ದ ಸಹಾಯವಾಣಿಗೆ ಇದುವರೆಗೆ 400 ಕ್ಕೂ ಹೆಚ್ಚು ಕರೆಗಳು ಬಂದಿವೆ. ನಮ ಸಹಾಯವಾಣಿ ಕರೆಗೆ ಪ್ರಶಂಸೆ ಸಹ ಮಾಡಿದ್ದಾರೆ.

ಉದ್ಯೋಗದಲ್ಲಿ ಇದ್ದ ಮಹಿಳೆಯರು ಯುವತಿಯರು ಕುಟುಂಬ ಕಲಹ, ಪ್ರೀತಿ ಪ್ರೇಮ ವೈಫಲ್ಯ, ನಿರಾಕರಣೆ, ಹಿಂಸೆ ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನ ಹೊತ್ತುಕೊಂಡು ಕರೆ ಮಾಡಲಾಗಿದೆ. ಇದರಲ್ಲಿ ಸಾಕಷ್ಟು ಈಗಾಗಲೇ ಬಗೆಹರಿಸಲಾಗಿದೆ ಎಂದರು.

ಇನ್ನು ಕೆಲವರು ನಮ ಸಹಾಯವಾಣಿ ಕೆಲಸಕ್ಕೆ ಸಹಿಸದ ಕೆಲವರು ಅಪಪ್ರಚಾರ ಮಾಡುತಿದ್ದು, ನಮ ನಂಬರ್‌ ಬ್ಲಾಕ್‌ ಸಹ ಮಾಡಲಾಗುತ್ತದೆ. ಆದರೆ ಇದಕ್ಕೆ ಯಾವುದಕ್ಕೂ ಹೆದರುವುದಿಲ್ಲ ಎಂದರು.

RELATED ARTICLES

Latest News