Homeರಾಷ್ಟ್ರೀಯಜಿರಲೆಗಳ ಮೇಲಿನ ಹಲ್ಲೆ ಬ್ರಿಟಿಷರ ಆಡಳಿತದ ದೌರ್ಜನ್ಯಕ್ಕಿಂತಲೂ ಕ್ರೂರವಾಗಿದೆ : ಕೇಜ್ರಿವಾಲ್‌

ಜಿರಲೆಗಳ ಮೇಲಿನ ಹಲ್ಲೆ ಬ್ರಿಟಿಷರ ಆಡಳಿತದ ದೌರ್ಜನ್ಯಕ್ಕಿಂತಲೂ ಕ್ರೂರವಾಗಿದೆ : ಕೇಜ್ರಿವಾಲ್‌

Delhi police brutality worse than Gen Dyer's: Kejriwal

ನವದೆಹಲಿ, ಜು. 21- ಪ್ರತಿಭಟನಾನಿರತ ಕಾಕ್ರೋಚ್‌ ಜನತಾ ಪಾರ್ಟಿ ಕಾರ್ಯಕರ್ತರ ವಿರುದ್ಧ ಕೇಂದ್ರ ಸರ್ಕಾರ ನಡೆಸಿದ ಪೊಲೀಸ್‌‍ ಕ್ರಮ ಬ್ರಿಟಿಷರ ಆಡಳಿತದ ದೌರ್ಜನ್ಯಕ್ಕಿಂತಲೂ ಕ್ರೂರವಾಗಿದೆ ಎಂದು ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್‌‍, ಪ್ರತಿಭಟನೆಯಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ನೆರವು ಹಾಗೂ ಬಂಧಿತರಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ಕಾನೂನು ನೆರವು ಒದಗಿಸಲು ಪಕ್ಷದ ವತಿಯಿಂದ 8588833548 ಸಹಾಯವಾಣಿಯನ್ನು ಆರಂಭಿಸಲಾಗಿದೆ ಎಂದು ಘೋಷಿಸಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಯುವಕರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್‌ ಅನ್ನು ತೀವ್ರವಾಗಿ ಖಂಡಿಸಿ ಅವರು, ನಾವು ಯುವ ಪ್ರತಿಭಟನಾಕಾರರ ಮೇಲೆ ನಡೆದ ಪೊಲೀಸ್‌‍ ದೌರ್ಜನ್ಯವನ್ನು ಕಂಡು ಆತಂಕಕ್ಕೆ ಒಳಗಾಗಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರ ಮೇಲೂ ಬ್ರಿಟಿಷರು ಮೋದಿ ಸರ್ಕಾರ ನಮ ಮಕ್ಕಳ ಮೇಲೆ ನಡೆಸಿದ ರೀತಿಯ ಹಿಂಸಾಚಾರ ನಡೆಸಿರಲಿಲ್ಲ. ಯಾವುದೇ ಪ್ರಚೋದನೆಯಿಲ್ಲದೆ ವಿದ್ಯಾರ್ಥಿಗಳು ಹಾಗೂ ಯುವತಿಯರ ಮೇಲೆ ಪೊಲೀಸರು ನಿರಂತರವಾಗಿ ಲಾಠಿಚಾರ್ಜ್‌ ನಡೆಸಿರುವುದು ವಿಡಿಯೊಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅವರು ಹೇಳಿದರು.

1919ರ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡದ ವೇಳೆ ಜನರಲ್‌ ಡಯರ್‌ ನಡೆಸಿದ್ದ ಕ್ರೌರ್ಯಕ್ಕೆ ಈ ಘಟನೆಯನ್ನು ಹೋಲಿಸಿದ ಕೇಜ್ರಿವಾಲ್‌‍, ಪ್ರತಿಭಟನಾಕಾರರ ಕುಟುಂಬಗಳೊಂದಿಗೆ ನಾವಿದ್ದೇವೆ. ಪ್ರತಿಭಟನಾಕಾರರ ಪೋಷಕರು ಮತ್ತು ಕುಟುಂಬದವರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.

ಸಹಾಯವಾಣಿ ಸಂಖ್ಯೆಗೆ ಸಂದೇಶ ಕಳುಹಿಸಿ. ನಾವು ಸಂಪರ್ಕಿಸಿ ವೈದ್ಯಕೀಯ ಹಾಗೂ ಕಾನೂನು ನೆರವು ಒದಗಿಸುತ್ತೇವೆ ಎಂದು ಹೇಳಿದರು.ತಾವು ವೈಯಕ್ತಿಕವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ ತಮ ಇಬ್ಬರು ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೆಂದು ಕೇಜ್ರಿವಾಲ್‌ ತಿಳಿಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿ ಜೀ, ದೇಶದ ಅತಿದೊಡ್ಡ ರಾಷ್ಟ್ರವಿರೋಧಿ ನೀವೇ. ವಿದ್ಯಾರ್ಥಿಗಳನ್ನು ರಾಷ್ಟ್ರವಿರೋಧಿಗಳು ಎಂದು ಕರೆಯುತ್ತೀರಿ. ಆದರೆ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ನಿಮಗೆ ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Latest News