Homeರಾಷ್ಟ್ರೀಯE-20 ಪೆಟ್ರೋಲ್ ಗೊಂದಲ : ಸುಪ್ರೀಂ ಕೋರ್ಟ್‌ಗೆ ಮಹತ್ವದ ಮಾಹಿತಿ ನೀಡಿದ ಕೇಂದ್ರ ಸರ್ಕಾರ

E-20 ಪೆಟ್ರೋಲ್ ಗೊಂದಲ : ಸುಪ್ರೀಂ ಕೋರ್ಟ್‌ಗೆ ಮಹತ್ವದ ಮಾಹಿತಿ ನೀಡಿದ ಕೇಂದ್ರ ಸರ್ಕಾರ

E-20 petrol confusion: Central government gives important information to Supreme Court

ನವದೆಹಲಿ, ಜೂ.30- ದೇಶಾದ್ಯಂತ ಪೆಟ್ರೋಲ್‌ನಲ್ಲಿ ಶೇ. 20ರಷ್ಟು ಎಥೆನಾಲ್‌ ಮಿಶ್ರಣ ಮಾಡುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಮತ್ತು ವಾಹನ ಮಾಲೀಕರಲ್ಲಿ ಉಂಟಾಗಿರುವ ಗೊಂದಲಗಳ ನಡುವೆಯೇ, ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮಹತ್ವದ ಮಾಹಿತಿ ನೀಡಿದೆ.

ಈ ಎಥೆನಾಲ್‌ ಮಿಶ್ರಣ ಕಾರ್ಯಕ್ರಮವು ಸದ್ಯಕ್ಕೆ ಒಂದು ೞಪ್ರಯೋಗೞವಾಗಿದ್ದು, ಇದರ ನೈಜ ಪರಿಣಾಮ ಮತ್ತು ಫಲಿತಾಂಶಗಳು ಮುಂದಿನ ವರ್ಷದ ವೇಳೆಗೆ ಸ್ಪಷ್ಟವಾಗಲಿವೆ ಎಂದು ಕೇಂದ್ರವು ತಿಳಿಸಿದೆ.

ಇ 20 ಇಂಧನ ಬಳಕೆಯು ವಾಹನಗಳ ಎಂಜಿನ್‌ ಮೇಲೆ ಬೀರುವ ಪರಿಣಾಮ ಹಾಗೂ ಇಂಧನ ದಕ್ಷತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವ ಆತಂಕಗಳ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಚರ್ಚೆ ನಡೆಯುತ್ತಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಇಂಧನ ಮಿಶ್ರಣದ ನೀತಿಯು ದೇಶದ ಇಂಧನ ಭದ್ರತೆ, ಪರಿಸರ ಸಂರಕ್ಷಣೆ ಮತ್ತು ರೈತರ ಆದಾಯ ಹೆಚ್ಚಳಕ್ಕೆ ಪೂರಕವಾಗಿದೆ ಎಂದು ಸಮರ್ಥಿಸಿಕೊಂಡಿದೆ. ಜತೆಗೆ, ಈ ಇಡೀ ಪ್ರಕ್ರಿಯೆಯು ಪ್ರಾಯೋಗಿಕ ಹಂತದಲ್ಲಿದ್ದು, ಇದರ ನಿಖರವಾದ ಸಾಧಕ-ಬಾಧಕಗಳು ಮತ್ತು ಪರಿಣಾಮಗಳನ್ನು ಮುಂದಿನ ವರ್ಷದೊಳಗೆ ಮೌಲ್ಯಮಾಪನ ಮಾಡಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

ಇ 20 ಇಂಧನ ಬಳಕೆ ಕೇವಲ ಕಡ್ಡಾಯ ನಿಯಮವಲ್ಲ, ಬದಲಾಗಿ ಪರಿಸರ ಸ್ನೇಹಿ ಇಂಧನ ಗುರಿಯತ್ತ ಕೊಂಡೊಯ್ಯುವ ಒಂದು ಪ್ರಾಯೋಗಿಕ ಪ್ರಯತ್ನವಾಗಿದೆ.
ವಾಹನಗಳ ಮೈಲೇಜ್‌ ಕುಸಿತ ಮತ್ತು ಎಂಜಿನ್‌ ಸವೆತದ ಕುರಿತು ಸಾರ್ವಜನಿಕರು ವ್ಯಕ್ತಪಡಿಸುತ್ತಿರುವ ಆತಂಕಗಳನ್ನು ಸರ್ಕಾರವು ಗಮನಿಸುತ್ತಿದೆ. ಮುಂದಿನ ವರ್ಷದ ವರದಿ ಮತ್ತು ಮೌಲ್ಯಮಾಪನವು ಈ ಬಗ್ಗೆ ಹೆಚ್ಚಿನ ಸ್ಪಷ್ಟತೆಯನ್ನು ನೀಡಲಿದೆ.

ಕಚ್ಚಾ ತೈಲ ಆಮದು ಕಡಿಮೆ ಮಾಡುವುದು ಮತ್ತು ಹಸಿರು ಇಂಧನ ಬಳಕೆಯನ್ನು ಉತ್ತೇಜಿಸುವುದು ಸರ್ಕಾರದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.ಈ ಯೋಜನೆಯು ಬ್ರೆಜಿಲ್‌ನಂತಹ ದೇಶಗಳಲ್ಲಿ ಈಗಾಗಲೇ ಯಶಸ್ವಿಯಾಗಿದೆ ಎಂದು ಸರ್ಕಾರವು ಈ ಹಿಂದೆಯೇ ಉಲ್ಲೇಖಿಸಿದೆ. ವಾಹನ ಮಾಲೀಕರಿಗೆ ಗೊಂದಲವಾಗದಂತೆ ಮತ್ತು ಪಾರದರ್ಶಕವಾಗಿ ಈ ಕಾರ್ಯಕ್ರಮವನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರವು ಭರವಸೆ ನೀಡಿದೆ.

RELATED ARTICLES

Latest News