ಇಂದೋರ್, ಮಾ.18- ಮನೆಯ ಹೊರಗೆ ಇವಿ ಕಾರನ್ನು ಚಾರ್ಜಿಂಗ್ ಮಾಡುವಾಗ ಸ್ಫೋಟ ಸಂಭವಿಸಿ ನಂತರ ಬೆಂಕಿ ಕಾಣಿಸಿಕೊಂಡು 8 ಜನರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಇಲ್ಲಿನ ಬ್ರಜೇಶ್ವರಿ ಅನೆಕ್‌್ಸ ಕಾಲೋನಿಯಲ್ಲಿ ನಡೆದಿದೆ.
ಬೆಳಗಿನ ಜಾವ 3.30 ರಿಂದ 4ರ ನಡುವೆ ಈ ಘಟನೆ ನಡೆದಿದ್ದು,ಬೆಂಕಿಯ ತೀವ್ರತೆಗೆ ಮನೆಯೊಳಗಿನ ಕೆಲವು ಅಡುಗೆ ಅನಿಲ ಸಿಲಿಂಡರ್‌ಗಳು ಸಹ ಸ್ಫೋಟಗೊಂಡಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಕುಂದನ್ ಮಾಂಡ್ಲೋಯಿ ತಿಳಿಸಿದ್ದಾರೆ.
ಮೃತರನ್ನು ತನಯ್ (6), ರಾಶಿ ಸೇಥಿಯಾ (12), ಸಿಮ್ರಾನ್ (30), ಟಿನು (35), ಸುಮನ್ ಸೇಥಿಯಾ (60), ವಿಜಯ್ ಸೇಥಿಯಾ (65), ಛೋಟು ಸೇಥಿಯಾ (22) ಮತ್ತು ಮನೋಜ್ (65) ಎಂದು ಗುರುತಿಸಲಾಗಿದೆ.
ಘಟನೆಯ ನಂತರ ಒಂದು ಮಗು ಕಾಣೆಯಾಗಿದ್ದು, ಹುಡುಕಲಾಗುತ್ತಿದೆ ಎಂದು ಎಸಿಪಿ ತಿಳಿಸಿದ್ದಾರೆ ಮತ್ತು ಘಟನೆ ಕುರಿತ್ತು ಸಂಪೂರ್ಣ ತನಿಖೆಗೆ ಆದೇಶಿಸಲಾಗಿದೆ ಎಂದರು. ಮೂರು ಅಂತಸ್ತಿನ ಮನೆಯ ಹೊರಗೆ ಕಾರನ್ನು ಚಾರ್ಜ್ ಮಾಡಲಾಗುತ್ತಿತ್ತು ಅಜಾನಕ್ಕಾಗಿ ಸ್ಫೋಟ ಸಂಭವಿಸಿದೆ, ಮತ್ತು ನಂತರದ ಬೆಂಕಿ ಮನೆಯನ್ನು ಆವರಿಸಿದೆ ಎಂದು ಅವರು ಹೇಳಿದರು.
ಮನೆಯ ಬಾಗಿಲುಗಳಿಗೆ ಎಲೆಕ್ಟ್ರಾನಿಕ್ ಬೀಗಗಳನ್ನು ಅಳವಡಿಸಲಾಗಿದ್ದು, ಪೊಲೀಸರಿಗೆ ಒಳಗೆ ಪ್ರವೇಶಿಸಲು ಕಷ್ಟವಾಗುತ್ತಿದೆ .ಮನೆಯೊಳಗಿನ ಅಡುಗೆ ಸಿಲಿಂಡರ್‌ಗಳಿಂದ ಅನಿಲ ಸೋರಿಕೆಯಾಗಿ ಸ್ಫೋಟಗೊಂಡಿದ್ದು, ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬೆಂಕಿಯ ಸಮಯದಲ್ಲಿ ಸುಮಾರು 10 ಜನರು ಮನೆಯೊಳಗೆ ಇದ್ದರು ಎಂದು ವರದಿಯಾಗಿದೆ ಅದರಲ್ಲಿ ಮೂವರನ್ನು ರಕ್ಷಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಮರೇಂದ್ರ ಸಿಂಗ್ ತಿಳಿಸಿದ್ದಾರೆ.
ಬೆಂಕಿಯಲ್ಲಿ ಸಾವನ್ನಪ್ಪಿದ ಏಳು ಜನರ ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ ಎಂದು ಸರ್ಕಾರಿ ಮಹಾತ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನ ಡೀನ್ ಡಾ. ಅರವಿಂದ್ ಘಂಘೋರಿಯಾ ತಿಳಿಸಿದ್ದಾರೆ.
ಗಾಯಗೊಂಡ ಇಬ್ಬರು ಪ್ರಥಮ ಚಿಕಿತ್ಸೆ ನೀಡಿದ ನಂತರ, ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದರು ಮತ್ತು ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಅವರು ಹೇಳಿದರು.
