Homeರಾಷ್ಟ್ರೀಯಭಾರೀ ವಿವಾದಕ್ಕೆ ಕಾರಣವಾಗಿದೆ ಎನ್‌ಸಿಇಆರ್‌ಟಿ ಪಠ್ಯದಲ್ಲಿ ತುರ್ತು ಪರಿಸ್ಥಿತಿ ವಿಷಯ ಸೇರ್ಪಡೆ

ಭಾರೀ ವಿವಾದಕ್ಕೆ ಕಾರಣವಾಗಿದೆ ಎನ್‌ಸಿಇಆರ್‌ಟಿ ಪಠ್ಯದಲ್ಲಿ ತುರ್ತು ಪರಿಸ್ಥಿತಿ ವಿಷಯ ಸೇರ್ಪಡೆ

Emergency chapter introduced in NCERT Class 9 social science textbook

ನವದೆಹಲಿ, ಜೂ.25- ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಲ್ಪಟ್ಟ ಸುಮಾರು ಐದು ದಶಕಗಳ ನಂತರ ಎನ್‌ಸಿಇಆರ್‌ ಟಿ ಮೊದಲ ಬಾರಿಗೆ 9 ನೇ ತರಗತಿಯ ಪಠ್ಯಪುಸ್ತಕದಲ್ಲಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿಯನ್ನು ಮೊದಲ ಬಾರಿಗೆ ಸೇರ್ಪಡೆ ಮಾಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

1975 ರಲ್ಲಿ ಘೋಷಣೆಯಾದ 50 ವರ್ಷಗಳ ನಂತರ,ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿದಾಗ ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ನಿರ್ಬಂಧಿಸಿದಾಗ ಪ್ರಜಾಪ್ರಭುತ್ವಕ್ಕೆ ಎದುರಾದ ಸವಾಲುಗಳ ಬಗ್ಗೆ ಈ ಪುಸ್ತಕ ಬೆಳಕು ಚಲ್ಲುತ್ತದೆ. ಹೆಚ್ಚಿನ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಗಿರುವುದರಿಂದ ಇದನ್ನು ಪ್ರಮುಖ ಸವಾಲುಗಳಲ್ಲಿ ಒಂದು ಎಂದು ಉಲ್ಲೇಖಿಸಲಾಗಿದೆ.

ಹೊಸದಾಗಿ ಅಭಿವೃದ್ಧಿಪಡಿಸಲಾದ ಸಮಾಜ ವಿಜ್ಞಾನ ಪಠ್ಯಪುಸ್ತಕ ಅಂಡರ್‌ಸ್ಟ್ಯಾಂಡಿಂಗ್‌ ಸೊಸೈಟಿ: ಇಂಡಿಯಾ ಅಂಡ್‌ ಬಿಯಾಂಡ್‌ನಲ್ಲಿ ಈ ಉಲ್ಲೇಖ ಕಂಡುಬಂದಿದೆ. ತುರ್ತು ಪರಿಸ್ಥಿತಿಯನ್ನು ಭಾರತೀಯ ಪ್ರಜಾಪ್ರಭುತ್ವದ ಸಾಮರ್ಥ್ಯ ಮತ್ತು ಸವಾಲುಗಳನ್ನು ಪರಿಶೀಲಿಸುವ ಅಧ್ಯಾಯದಲ್ಲಿ ಸೇರಿಸಲಾಗಿದೆ.

9ನೇ ತರಗತಿಯ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ವಿಭಾಗವನ್ನು ಸೇರಿಸಿರುವುದು ಇದೇ ಮೊದಲು ಎಂದು ಎನ್‌‍ಸಿಇಆರ್‌ಟಿ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.1975-77ರಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಎದುರಾದ ಪ್ರಮುಖ ಸವಾಲುಗಳಲ್ಲಿ ಒಂದಾಗಿ ದಾಖಲಾಗಿತ್ತು. 1970 ರ ದಶಕದ ಆರಂಭದಲ್ಲಿ, ಇಂದಿರಾ ಗಾಂಧಿ ನೇತೃತ್ವದ ಸರ್ಕಾರದ ಬಗ್ಗೆ ಸಾರ್ವಜನಿಕರ ಅಸಮಾಧಾನ ಹೆಚ್ಚುತ್ತಿತ್ತು. ಹೆಚ್ಚುತ್ತಿರುವ ನಿರುದ್ಯೋಗ, ಹಣದುಬ್ಬರ ಮತ್ತು ದುರಾಡಳಿತದ ಆರೋಪಗಳು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಯಿತು ಎಂದು ಪುಸ್ತಕ ಹೇಳುತ್ತದೆ.

ಜೂನ್‌ 1975 ರಲ್ಲಿ ಆಂತರಿಕ ಗಲಭೆಯ ಆಧಾರದ ಮೇಲೆ ಸರ್ಕಾರವು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರಿತು. ಈ ಅವಧಿಯಲ್ಲಿ, ಬಹುಪಾಲು ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಯಿತು. ಪತ್ರಿಕಾ ಸೆನ್ಸಾರ್‌ಶಿಪ್‌ ಮಾಡಲಾಯಿತು ಮತ್ತು ಹಲವಾರು ರಾಜಕೀಯ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಯಿತು. ಪ್ರಜಾಪ್ರಭುತ್ವ ಸಂಸ್ಥೆಗಳು ತೀವ್ರ ಒತ್ತಡಕ್ಕೆ ಒಳಗಾದವು ಮತ್ತು ನಾಗರಿಕರ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಯಿತು ಎಂದು ಅದು ಹೇಳಿದೆ.

ತುರ್ತು ಪರಿಸ್ಥಿತಿಯ ವಿರುದ್ಧದ ಚಳವಳಿಯಲ್ಲಿ ಜಯಪ್ರಕಾಶ್‌ ನಾರಾಯಣ್‌ ಅವರ ಪಾತ್ರದ ಬಗ್ಗೆ ಈ ಪುಸ್ತಕವು ಬೆಳಕು ಚಲ್ಲಿದೆ. ರಾಜಕೀಯ ನಾಯಕ ಮತ್ತು ಸಮಾಜವಾದಿ ಚಿಂತಕ, ಲೋಕನಾಯಕ ಎಂದೇ ಜನಪ್ರಿಯರಾದ ಜಯಪ್ರಕಾಶ್‌ ನಾರಾಯಣ್‌ ನೇತೃತ್ವದ ಸಾಮೂಹಿಕ ಚಳವಳಿಗಳು ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು, ವಿಶೇಷವಾಗಿ ಬಿಹಾರ ಮತ್ತು ಗುಜರಾತ್‌ನಲ್ಲಿ ಸಜ್ಜುಗೊಳಿಸಿದವು.

1977 ರಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಲಾಯಿತು ಮತ್ತು ಸಾರ್ವತ್ರಿಕ ಚುನಾವಣೆಗಳು ನಡೆದವು, ಇದರಿಂದಾಗಿ ಜನರು ಮತಪತ್ರದ ಮೂಲಕ ತಮ ಇಚ್ಛೆಯನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟಿತು. ಆಡಳಿತ ಸರ್ಕಾರದ ಸೋಲು ಭಾರತೀಯ ಪ್ರಜಾಪ್ರಭುತ್ವದ ಬಲವನ್ನು ಪ್ರದರ್ಶಿಸಿತು ಮತ್ತು ಪ್ರಜಾಪ್ರಭುತ್ವದ ಮಹತ್ವವನ್ನು ಎತ್ತಿ ತೋರಿಸಿತು ಎಂದು ಪುಸ್ತಕ ತಿಳಿಸುತ್ತದೆ.

RELATED ARTICLES

Latest News