Thursday, April 16, 2026
Homeರಾಷ್ಟ್ರೀಯಕೇರಳ : ಶಾಲಾ ಬಸ್‌‍ಗಳು ಬೆಂಕಿಗೆ ಆಹುತಿ, ವಿಧ್ವಂಸಕ ಕೃತ್ಯದ ಶಂಕೆ

ಕೇರಳ : ಶಾಲಾ ಬಸ್‌‍ಗಳು ಬೆಂಕಿಗೆ ಆಹುತಿ, ವಿಧ್ವಂಸಕ ಕೃತ್ಯದ ಶಂಕೆ

Fire breaks out in school, three parked buses gutted in fire

ತಿರುವನಂತಪುರಂ,ಫೆ.23-ಶಾಲಾ ಮೈದಾನದಲ್ಲಿ ನಿಲ್ಲಿಸಿದ್ದ ಮೂರು ಶಾಲಾ ಬಸ್‌‍ಗಳು ಬೆಂಕಿ ತಗುಲಿ ಸುಟ್ಟುಹೋಗಿವೆ.ಕಜಕೂಟಂ ಪೊಲೀಸ್‌‍ ಠಾಣೆ ವ್ಯಾಪ್ತಿಯ ತುಂಡತಿಲ್‌ನಲ್ಲಿರುವ ಪ್ರೌಡಶಾಲೆಯ ಮೈದಾನದಲ್ಲಿ ಬೆಳಗಿನ ಜಾವ 2.45 ರ ಸುಮಾರಿಗೆ ಈ ಘಟನೆ ಸಂಭವಿಸಿದೆ.

ಬೆಂಕಿಯಲ್ಲಿ ಮೂರು ಶಾಲಾ ಬಸ್‌‍ಗಳು ಸಂಪೂರ್ಣವಾಗಿ ಸುಟ್ಟು ಭಸವಾಗಿದ್ದರೆ, ಇನ್ನೊಂದು ಬಸ್‌‍ ಭಾಗಶಃ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸುಮಾರು 30 ನಿಮಿಷಗಳ ಕಾಲ ನಡೆದ ಕಾರ್ಯಾಚರಣೆಯ ನಂತರ ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ.

ಬಸ್‌‍ಗಳ ಬಳಿ ಟೆಂಪೋ ಟ್ರಾವೆಲರ್‌ ಪತ್ತೆಯಾಗಿದ್ದು, ಇದು ಹಲವು ಅನುಮಾನವನ್ನು ಹುಟ್ಟುಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆದರೆ, ವಾಹನವನ್ನು ಯಾರು ಓಡಿಸಿದರು ಅಥವಾ ಬಸ್‌‍ಗಳು ನಿಲ್ಲಿಸಿದ್ದ ಪ್ರದೇಶಕ್ಕೆ ಅದು ಹೇಗೆ ತಲುಪಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಶಾಲಾ ಅಧಿಕಾರಿಗಳು ಮತ್ತು ಸ್ಥಳೀಯರು ಇದನ್ನು ವಿಧ್ವಂಸಕ ಕೃತ್ಯಎಂದು ಶಂಕೆ ವ್ಯಕ್ತಪಡಿಸಿದ್ದಾರೆ.ನಿಖರವಾದ ಕಾರಣವನ್ನು ಕಂಡುಹಿಡಿಯಲು ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News