Homeರಾಷ್ಟ್ರೀಯಅಧಿವೇಶನ ನಡೆಯುತ್ತಿರುವಾಗಲೇ ಗುಜರಾತ್‌ ವಿಧಾನಸಭೆ ಸ್ಫೋಟಿಸುವ ಬೆದರಿಕೆ

ಅಧಿವೇಶನ ನಡೆಯುತ್ತಿರುವಾಗಲೇ ಗುಜರಾತ್‌ ವಿಧಾನಸಭೆ ಸ್ಫೋಟಿಸುವ ಬೆದರಿಕೆ

Gujarat assembly complex gets bomb threat during ongoing budget session; search on

ಗಾಂಧಿನಗರ, ಮಾ. 18 (ಪಿಟಿಐ) ಅಧಿವೇಶನ ನಡೆಯುತ್ತಿರುವಾಗಲೆ ಗುಜರಾತ್‌ ವಿಧಾನಸಭೆಯನ್ನು ಸ್ಫೋಟಿಸುವುದಾಗಿ ಬಾಂಬ್‌ ಬೆದರಿಕೆ ಕರೆ ಬಂದಿದೆ.ಬಜೆಟ್‌ ಅಧಿವೇಶನ ನಡೆಯುತ್ತಿರುವಾಗಲೇ ಸದನದ ಕಲಾಪ ಆರಂಭವಾಗಲು ಕೆಲವೇ ನಿಮಿಷಗಳ ಮೊದಲು, ಗುಜರಾತ್‌ ವಿಧಾನಸಭೆ ಸಂಕೀರ್ಣಕ್ಕೆ ಇಂದು ಬೆಳಿಗ್ಗೆ ಇಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಧಾನಸಭಾ ಸಂಕೀರ್ಣದಲ್ಲಿ ಬಾಂಬ್‌ ಇಡಲಾಗಿದೆ ಎಂದು ಇಮೇಲ್‌ನಲ್ಲಿ ಹೇಳಲಾಗಿದ್ದು, ಅದರ ನಂತರ ಎಲ್ಲಾ ಸಿಬ್ಬಂದಿ ಮತ್ತು ಶಾಸಕರನ್ನು ಆವರಣದಿಂದ ಖಾಲಿ ಮಾಡುವಂತೆ ಕೇಳಲಾಗಿದೆ ಎಂದು ಪೊಲೀಸ್‌‍ ಉಪ ವರಿಷ್ಠಾಧಿಕಾರಿ ಪಿಯೂಷ್‌ ವಂಡಾ ತಿಳಿಸಿದ್ದಾರೆ.

ಬಜೆಟ್‌ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದನ ಬೆಳಿಗ್ಗೆ 9 ಗಂಟೆಗೆ ಆರಂಭವಾಗಬೇಕಿತ್ತು, ಆದರೆ ಅಧಿಕಾರಿಗಳಿಗೆ ಬೆಳಿಗ್ಗೆ 8.45 ಕ್ಕೆ ಬೆದರಿಕೆ ಬಗ್ಗೆ ಮಾಹಿತಿ ಸಿಕ್ಕಿತು ಎಂದು ಅವರು ಹೇಳಿದರು.

ಇಮೇಲ್‌ ಮೂಲಕ ಬಂದ ಬಾಂಬ್‌ ಬೆದರಿಕೆ ಬಗ್ಗೆ ತಿಳಿದ ನಂತರ, ಸ್ಥಳೀಯ ಪೊಲೀಸರು ಆವರಣಕ್ಕೆ ತಲುಪಿ ಸ್ಫೋಟಕಗಳಿಗಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಎಂದು ವಂಡಾ ಹೇಳಿದರು, ಇದುವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಹೇಳಿದರು.

RELATED ARTICLES
spot_img

Latest News