Thursday, April 30, 2026
Homeರಾಷ್ಟ್ರೀಯಹರಿಯಾಣ : ಕಟ್ಟಡದ ಗೋಡೆ ಕುಸಿದು ಏಳು ಮಂದಿ ಸಾವು

ಹರಿಯಾಣ : ಕಟ್ಟಡದ ಗೋಡೆ ಕುಸಿದು ಏಳು ಮಂದಿ ಸಾವು

Gurugram wall collapse: 7 workers killed after wall caves in at site horror

ಗುರುಗ್ರಾಮ, ಮಾ.10- ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದು ಏಳು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಹರಿಯಾಣದ ಗುರುಗ್ರಾಮ ಜಿಲ್ಲೆಯ ಸಿಧ್ರಾವಲಿ ಪ್ರದೇಶದಲ್ಲಿ ನಡೆದಿದೆ.
ಸಿಗ್ನೇಚರ್‌ ಗ್ಲೋಬಲ್‌ ಸೊಸೈಟಿಯ ಕಟ್ಟಡ ನಿರ್ಮಾಣದ ವೇಳೆ ಕಳೆದ ರಾತ್ರಿ ಈ ಘಟನೆ ನಡೆದಿದೆ.

ಮೃತರನ್ನು ಸತೀಶ್‌, ಭಾಗೀರಥ, ಮಿಲನ್‌, ಶಿವಶಂಕರ್‌, ಮಂಗಲ್‌ ಮತ್ತು ಪರಮೇಶ್ವರ್‌ ಎಂದು ಗುರುತಿಸಲಾಗಿದೆ ಗೋಡೆ ಕುಸಿದ ನಂತರ ಸುಮಾರು 12 ರಿಂದ 15 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡರು ಎಂದು ಅಽಕಾರಿಗಳು ತಿಳಿಸಿದ್ದಾರೆ.

ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಹಲವು ಗಾಯಾಳುಗಳನ್ನು ರಕ್ಷಸಿ ಭಿವಾಡಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಲಿಸದೆ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಽಕಾರಿಗಳು ತಿಳಿಸಿದ್ದಾರೆ.

ಗಾಯಾಳುಗಳದ ಚೋಟೆಲಾಲ್‌‍, ದೀನದಯಾಳ್‌‍, ಶಿವಕಾಂತ್‌ ಮತ್ತು ಇಂದ್ರಜೀತ್‌ ಎಂಬ ನಾಲ್ವರ ಸ್ಥಿತಿ ಗಂಭೀರ ವಾಗಿದೆ ಎಂದು ಅವರು ಹೇಳಿದರು. ಘಟನೆ ಕುರಿತು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News