Homeರಾಷ್ಟ್ರೀಯಹೆಣ್ಣು ಹುಲಿ ಇಂದಿರಾ ಗಾಂಧಿ ಅಂಥವರು ಮತ್ತೆ ಹುಟ್ಟುವುದಿಲ್ಲ ; ಪ್ರಿಯಾಂಕಾ ವಾದ್ರಾ

ಹೆಣ್ಣು ಹುಲಿ ಇಂದಿರಾ ಗಾಂಧಿ ಅಂಥವರು ಮತ್ತೆ ಹುಟ್ಟುವುದಿಲ್ಲ ; ಪ್ರಿಯಾಂಕಾ ವಾದ್ರಾ

ನವದೆಹಲಿ, ನ. 19 (ಪಿಟಿಐ): ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಪ್ರಿಯಾಂಕಾ ಗಾಂಧಿ ಅವರು ಹೆಣ್ಣು ಹುಲಿ ಎಂದು ಬಣ್ಣಿಸಿದ್ದಾರೆ.ಇಂದಿರಾ ಗಾಂಧಿ ಅವರ 109ನೇ ಜನ್ಮದಿನದಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅವರನ್ನು ಹೆಣ್ಣು ಹುಲಿ ಎಂದು ಬಣ್ಣಿಸಿ ಗೌರವ ಸಲ್ಲಿಸಿದ್ದಾರೆ. ಅಲ್ಲದೆ, ಅವರಂತಹ ವ್ಯಕ್ತಿ ಮತ್ತೆಂದೂ ಹುಟ್ಟಿಬರಲಾರರು ಎಂದು ಹೇಳಿದ್ದಾರೆ.

ಇಂದಿರಾ ಗಾಂಧಿ ಅವರು 1917ರ ನವೆಂಬರ್ 19ರಂದು ಪ್ರಯಾಗ್‌ರಾಜ್‌ನಲ್ಲಿ ಜನಿಸಿದರು. 1984ರ ಅಕ್ಟೋಬರ್ 31ರಂದು ನವದೆಹಲಿಯಲ್ಲಿ ಅವರನ್ನು ಹತ್ಯೆ ಮಾಡಲಾಯಿತು.

ಎಕ್ಸ್‌ನಲ್ಲಿ ಅವರು, “ಹೆಣ್ಣು ಹುಲಿಯಂತಿದ್ದ ನಿಮ್ಮಂತಹವರು ಮತ್ತೆಂದೂ ಹುಟ್ಟಿಬರಲಾರರು” ಎಂದು ಬರೆದುಕೊಂಡಿದ್ದಾರೆ. ಇಂದಿರಾ ಗಾಂಧಿ ಅವರು 1966ರಿಂದ 1977ರವರೆಗೆ ಮತ್ತು ನಂತರ 1980ರಿಂದ 1984ರಲ್ಲಿ ತಮ್ಮ ಹತ್ಯೆಯಾಗುವವರೆಗೂ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು.

ಇದಕ್ಕೂ ಮುನ್ನ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ಶಕ್ತಿ ಸ್ಥಳದಲ್ಲಿ ಇಂದಿರಾ ಗಾಂಧಿ ಅವರಿಗೆ ಪುಷ್ಪನಮನ ಸಲ್ಲಿಸಿದರು.

RELATED ARTICLES

Latest News