ನವದೆಹಲಿ, ನ. 19 (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು.
ದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು; ಇವರು 1984ರಲ್ಲಿ ಹತ್ಯೆಗೀಡಾಗಿದ್ದರು.
ಇಂದಿರಾ ಗಾಂಧಿ ಅವರು 1917ರ ನವೆಂಬರ್ 19ರಂದು ಪ್ರಯಾಗರಾಜ್ನಲ್ಲಿ ಜನಿಸಿದರು ಮತ್ತು 1984ರ ಅಕ್ಟೋಬರ್ 31ರಂದು ನವದೆಹಲಿಯಲ್ಲಿ ಹತ್ಯೆಗೀಡಾದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜಿ ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು, ಎಂದು ಮೋದಿ ಅವರು ಎಕ್್ಸನಲ್ಲಿ ಪೋಸ್ಟ್ ಮಾಡಿದ್ದಾರೆ.
ಗಾಂಧಿ ಅವರು 1966ರಿಂದ 1977ರವರೆಗೆ ಮತ್ತು ನಂತರ 1980ರಿಂದ 1984ರಲ್ಲಿ ತಮ್ಮ ಹತ್ಯೆಯಾಗುವವರೆಗೂ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು.
