Homeರಾಷ್ಟ್ರೀಯವಿದೇಶಿ ನೇರ ಹೂಡಿಕೆಯಲ್ಲಿ ಭಾರಿ ಏರಿಕೆ ; ಪಿಯೂಷ್‌ ಗೋಯಲ್‌

ವಿದೇಶಿ ನೇರ ಹೂಡಿಕೆಯಲ್ಲಿ ಭಾರಿ ಏರಿಕೆ ; ಪಿಯೂಷ್‌ ಗೋಯಲ್‌

ನವದೆಹಲಿ, ಸೆ. 25 (ಪಿಟಿಐ): ಭಾರತದಲ್ಲಿನ ವಿದೇಶಿ ನೇರ ಹೂಡಿಕೆಯು 2025-26ನೇ ಸಾಲಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 94.53 ಶತಕೋಟಿ ಅಮೆರಿಕನ್‌ ಡಾಲರ್‌ಗೆ ತಲುಪಿದೆ ಮತ್ತು 2014-26ರ ಅವಧಿಯಲ್ಲಿ ಒಟ್ಟು ಎಫ್‌ಡಿಐ ಒಳಹರಿವು 843 ಶತಕೋಟಿ ಡಾಲರ್‌ಗೆ ಏರಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ.

ಮಾರ್ಚ್‌ 31ರ ವೇಳೆಗೆ, ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಗಳು 2.40 ಲಕ್ಷ ಕೋಟಿ ರೂ.ಗಳಷ್ಟು ವಾಸ್ತವಿಕ ಹೂಡಿಕೆ, 23.8 ಲಕ್ಷ ಕೋಟಿ ರೂ.ಗಳ ಉತ್ಪಾದನೆ/ಮಾರಾಟ ಮತ್ತು 15.2 ಲಕ್ಷ ಕೋಟಿ ರೂ.ಗಳ ರಫ್ತಿಗೆ ಕಾರಣವಾಗಿವೆ; ಜೊತೆಗೆ 14.6 ಲಕ್ಷಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ಅವರು ಹೇಳಿದರು.

ಎಲೆಕ್ಟ್ರಾನಿಕ್‌್ಸ ಮತ್ತು ಟೆಲಿಕಾಂ, ಔಷಧೀಯ ಉತ್ಪನ್ನಗಳು, ವೈದ್ಯಕೀಯ ಉಪಕರಣಗಳು, ವಾಹನಗಳು, ಐಟಿ ಹಾರ್ಡ್‌ವೇರ್‌ ಮತ್ತು ವಿಶೇಷ ಉಕ್ಕು ಮುಂತಾದ ವಲಯಗಳು ಪಿಎಲ್‌ಐ ಯೋಜನೆಗಳಿಂದ ಗಮನಾರ್ಹ ಪ್ರಯೋಜನ ಪಡೆದಿವೆ ಎಂದು ಸಚಿವರು ತಿಳಿಸಿದರು.

ಈ ಅಂಕಿಅಂಶಗಳು ಆಶಾದಾಯಕ ಚಿತ್ರಣವನ್ನು ನೀಡುತ್ತವೆ. 2025-26ನೇ ಆರ್ಥಿಕ ವರ್ಷದಲ್ಲಿ ಭಾರತವು 94.53 ಶತಕೋಟಿ ಡಾಲರ್‌ನಷ್ಟು ಗರಿಷ್ಠ ವಾರ್ಷಿಕ ಎಫ್‌ಡಿಐ ಒಳಹರಿವನ್ನು ದಾಖಲಿಸಿದೆ ಮತ್ತು 2014-15ರಿಂದ 2025-26ರ ಅವಧಿಯಲ್ಲಿ ಒಟ್ಟು ಎಫ್‌ಡಿಐ ಒಳಹರಿವು 843 ಶತಕೋಟಿ ಡಾಲರ್‌ಗೆ ತಲುಪಿದೆ, ಎಂದು ಮೇಕ್‌ ಇನ್‌ ಇಂಡಿಯಾ ಅಭಿಯಾನದ 12ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಉತ್ಪಾದನೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ನಿರ್ಮಿಸಲು, ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿ ಕಾರ್ಯಕ್ರಮೞದ ಅಡಿಯಲ್ಲಿ ದೇಶಾದ್ಯಂತ ಗ್ರೀನ್‌ಫೀಲ್ಡ್‌‍ ಕೈಗಾರಿಕಾ ಸ್ಮಾರ್ಟ್‌ ನಗರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸುಲಭವಾಗಿ ವ್ಯಾಪಾರ ನಡೆಸುವಿಕೆಗೆ ಸಂಬಂಧಿಸಿದ ಸುಧಾರಣೆಗಳು ನಿಯಮಾವಳಿಗಳನ್ನು ಸರಳೀಕರಿಸಿವೆ ಮತ್ತು ಅನುಸರಣೆಯ ಹೊರೆಯನ್ನು ಕಡಿಮೆ ಮಾಡಿವೆ; ಅದೇ ಸಮಯದಲ್ಲಿ ಪ್ರಮುಖ ವಲಯಗಳಲ್ಲಿನ ಸುಧಾರಣೆಗಳು ಹೂಡಿಕೆ ಮತ್ತು ಉತ್ಪಾದನೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಿವೆ, ಎಂದು ಹೇಳಿದ ಅವರು, ಓಪನ್‌ ನೆಟ್‌ವರ್ಕ್‌ ಫಾರ್‌ ಡಿಜಿಟಲ್‌ ಕಾಮರ್ಸ್‌ ಮೂಲಕ 470 ಕೋಟಿಗೂ ಹೆಚ್ಚು ಆರ್ಡರ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

RELATED ARTICLES
spot_img

Latest News