Thursday, April 16, 2026
Homeರಾಷ್ಟ್ರೀಯಲೋಕಸಭೆ ಕಲಾಪ ಆರಂಭವಾದ ಆರೇ ನಿಮಿಷಕ್ಕೆ ಮುಂದೂಡಿಕೆ

ಲೋಕಸಭೆ ಕಲಾಪ ಆರಂಭವಾದ ಆರೇ ನಿಮಿಷಕ್ಕೆ ಮುಂದೂಡಿಕೆ

Lok Sabha adjourned as Opposition insists Rahul Gandhi should be allowed to speak first

ನವದೆಹಲಿ, ಫೆ.9- ಪ್ರಶ್ನೋತ್ತರ ಅವಧಿಯಲ್ಲಿ ವಿರೋಧ ಪಕ್ಷದ ಸದಸ್ಯರ ಪ್ರತಿಭಟನೆಯಿಂದಾಗಿ ಲೋಕಸಭಾ ಕಲಾಪವನ್ನುಮುಂದೂಡಲಾಯಿತು. ಸದನವು ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ, ವಿರೋಧ ಪಕ್ಷದ ಸದಸ್ಯರು ಹಲವು ವಿಷಯ ಪ್ರಸ್ತಾಪಿಸಲು ಪ್ರಾರಂಭಿಸಿದರು.

ಬಜೆಟ್‌ ಮೇಲಿನ ಚರ್ಚೆಯ ಸಮಯದಲ್ಲಿ ಈ ಸಮಸ್ಯೆಗಳನ್ನು ಎತ್ತಬಹುದು ಎಂದು ಸ್ಪೀಕರ್‌ ಬಿರ್ಲಾ ಹೇಳಿದರು ಆದರೆ ವಿರೋಧ ಪಕ್ಷದ ಸದಸ್ಯರು ಅಡ್ಡಿಪಡಿಸುತ್ತಲೇ ಇದ್ದಾಗ, ಇದು ಯೋಜಿತ ಅಡ್ಡಿ ಎಂದು ಸದಸ್ಯರ ವರ್ತನೆಯನ್ನು ಟೀಕಿಸಿದರು ಮತ್ತು ನಿಯಮಗಳ ಪ್ರಕಾರ ಸದನವನ್ನು ನಡೆಸಲು ಬಿಡುವಂತೆ ಕೇಳಿಕೊಂಡರು.

ಪ್ರಶ್ನೋತ್ತರ ಅವಧಿಯಲ್ಲಿ, ಪ್ರಶ್ನೆಗಳನ್ನು ಮಾತ್ರ ಎತ್ತಲಾಗುತ್ತದೆ…. ನೀವು ಯಾವುದೇ ವಿಷಯವನ್ನು ಚರ್ಚಿಸಲು ಬಯಸಿದರೆ, ನಾವು ಶೂನ್ಯ ವೇಳೆಯಲ್ಲಿ ಅಥವಾ ಕೇಂದ್ರ ಬಜೆಟ್‌ ಮೇಲಿನ ಚರ್ಚೆಗಳ ಸಮಯದಲ್ಲಿ ಚರ್ಚಿಸೋಣ ಸದನವು ಯೋಜಿತ ಅಡ್ಡಿ ಮತ್ತು ಘೋಷಣೆಗಳಿಗೆ ಸ್ಥಳವಲ್ಲ ಎಂದು ಬಿರ್ಲಾ ಪ್ರತಿಭಟನಾ ನಿರತ ವಿರೋಧ ಪಕ್ಷದ ಸದಸ್ಯರಿಗೆ ತಿಳಿಸಿದರು.

ವಿವಿಧ ವಿಷಯಗಳ ಕುರಿತು ಪ್ರತಿಭಟನೆಗಳು ಮುಂದುವರಿದಂತೆ, ಬಿರ್ಲಾ ಸದನದ ಕಲಾಪವನ್ನು ಮುಂದೂಡಿದರು.ಮಾಜಿ ಸೇನಾ ಮುಖ್ಯಸ್ಥ ಎಂ ಎಂ ನರವಾಣೆ ಅವರ ಅಪ್ರಕಟಿತ ಆತಚರಿತ್ರೆಯ ಆಯ್ದ ಭಾಗಗಳನ್ನು ಆಧರಿಸಿದ ಲೇಖನವನ್ನು ಉಲ್ಲೇಖಿಸಲು ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ಅಧ್ಯಕ್ಷರು ನಿರಾಕರಿಸಿದ ನಂತರ ಫೆಬ್ರವರಿ 3 ರಿಂದ ಲೋಕಸಭೆಯಲ್ಲಿ ಗದ್ದಲ ನಡೆಯುತ್ತಿದೆ. ಅದರಲ್ಲಿ ಅವರು 2020 ರ ಭಾರತ-ಚೀನಾ ಸಂಘರ್ಷವನ್ನು ಉಲ್ಲೇಖಿಸಿದ್ದಾರೆ. ಲೋಕಸಭೆ ಇಂದು ಸಭೆ ಸೇರಿದಾಗ, ಇಂಗ್ಲೆಂಡ್‌ ಅನ್ನು ಸೋಲಿಸುವ ಮೂಲಕ ಕಿರಿಯರ ವಿಶ್ವಕಪ್‌ ಗೆದ್ದ ಭಾರತದ ಕ್ರಿಕೆಟ್‌ ತಂಡವನ್ನು ಬಿರ್ಲಾ ಅಭಿನಂದಿಸಿದರು.

RELATED ARTICLES

Latest News