Monday, April 13, 2026
Homeರಾಷ್ಟ್ರೀಯಕಾಣೆಯಾಗಿದ್ದ 8 ವರ್ಷದ ಬಾಲಕಿ ಹಿಟ್ಟಿನ ಡಬ್ಬಿಯಲ್ಲಿ ಶವವಾಗಿ ಪತ್ತೆ

ಕಾಣೆಯಾಗಿದ್ದ 8 ವರ್ಷದ ಬಾಲಕಿ ಹಿಟ್ಟಿನ ಡಬ್ಬಿಯಲ್ಲಿ ಶವವಾಗಿ ಪತ್ತೆ

Missing 8-year-old girl found dead inside flour container in Agra, accused at large

ಆಗ್ರಾ,ಮಾ. 26: ಕಳೆದ ಮೂರು ದಿನದ ಹಿಂದೆ ಕಾಣೆಯಾಗಿದ್ದ 8ವರ್ಷದ ಬಾಲಕಿಯ ಶವವು ೆ ಕೋಣೆಯೊಂದರ ಹಿಟ್ಟಿನ ಡಬ್ಬಿಯೊಳಗೆ ಪತ್ತೆಯಾಗಿರುವ ಘಟನೆ ಆಗ್ರಾ ಜಿಲ್ಲೆಯ ತಾಜ್‌ಗಂಜ್‌‍ ಪ್ರದೇಶದ ಸಿದ್ಧಾಂತ್‌ ನಗರದಲ್ಲಿ ನಡೆದಿದೆ.

ಬಾಲಕಿ ಮಾ.24ರಂದು ಸಂಜೆ ಸುಮಾರು 4 ಗಂಟೆ ಸುಮಾರಿನಲ್ಲಿ ಕಾಣೆಯಾಗಿದ್ದಳು. ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು.

ಱಱಮಗುವನ್ನು ಪತ್ತೆಹಚ್ಚಲು ಎಂಟು ತಂಡಗಳನ್ನು ನಿಯೋಜಿಸಲಾಗಿತ್ತು. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅದೇ ಪ್ರದೇಶದಲ್ಲಿ ಅವರ ಮನೆಯ ಬಳಿ ಬಾಲಕಿ ಕಂಡುಬಂದರೂ, ನಂತರದ ಯಾವುದೇ ದೃಶ್ಯಗಳಲ್ಲಿ ಕಂಡುಬಂದಿಲ್ಲ ಎಂದು ನಗರ ಉಪ ಪೊಲೀಸ್‌‍ ಆಯುಕ್ತ ಅಲಿ ಅಬ್ಬಾಸ್‌‍ ತಿಳಿಸಿದ್ದರೆ.

ಶಂಕೆ ಆಧರಿಸಿ, ಅದೇ ಮನೆಯಲ್ಲಿ ವಾಸಿಸುತ್ತಿದ್ದ ಸುನೀಲ್‌ ಎಂಬ ವ್ಯಕ್ತಿ ಬಾಡಿಗೆಗೆ ಪಡೆದಿದ್ದ ಕೋಣೆಯ ಬಾಗಿಲು ಮುರಿದು ಪೊಲೀಸರು ಶೋಧ ನಡೆಸಿದರು. ಈ ವೇಳೆ ಕೋಣೆಯೊಳಗಿನ ಹಿಟ್ಟಿನ ಡಬ್ಬಿಯಲ್ಲಿ ಬಾಲಕಿಯ ಶವ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಸುನೀಲ್‌ ಪರಾರಿಯಾಗಿದ್ದು, ಅವನನ್ನು ಬಂಧಿಸಲು ಹಲವು ಪೊಲೀಸ್‌‍ ತಂಡಗಳನ್ನು ರಚಿಸಲಾಗಿದೆ.

.ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಪ್ರತಿಭಟನೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.

ನೆರೆಹೊರೆಯವರ ಪ್ರಕಾರ, ಸುನೀಲ್‌ ಸುಮಾರು ಒಂದು ವರ್ಷದಿಂದ ಅದೇ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುತ್ತಿದ್ದು, ಬಾಲಕಿಯ ಕುಟುಂಬದ ಪಾದರಕ್ಷೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಬಾಲಕಿ ಕಾಣೆಯಾಗಿದ್ದಾಗ ಹುಡುಕಾಟದಲ್ಲಿ ಭಾಗವಹಿಸಿದ್ದ ಆತ ನಂತರ ತನ್ನ ಕೋಣೆಯನ್ನು ಲಾಕ್‌ ಮಾಡಿ ಪರಾರಿಯಾದುದು ಅನುಮಾನಕ್ಕೆ ಕಾರಣವಾಯಿತು.

RELATED ARTICLES

Latest News