ನವದೆಹಲಿ, ಜು.4- ಇದೇ ತಿಂಗಳ 21 ರಿಂದ ಆಗಸ್ಟ್ 21 ರ ವರೆಗೆ ನಡೆಯಲಿರುವ ಮಳೆಗಾಲದ ಸಂಸತ್ ಅಧಿವೇಶನದವರೆಗೂ ಕೇಂದ್ರ ಸಂಪುಟ ಪುನಾರಚನೆಯಾಗುವ ಸಾಧ್ಯತೆಗಳಿಲ್ಲ.
ಆಗಷ್‌್ಟ ಅಂತ್ಯದ ವರೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಸಂಪುಟ ಪುನಾರಚನೆ ಅಸಾಧ್ಯ ಎಂದು ಉನ್ನತ ಮೂಲಗಳನ್ನಾಧರಿಸಿ ಮಾಧ್ಯಮಗಳು ವರದಿ ಮಾಡಿವೆ. ಸಂಪುಟ ಪುನಾರಚನೆ ಸೇರಿದಂತೆ ಯಾವುದೇ ಕೆಲಸಗಳಿದ್ದರೂ, ಅದು ಅಧಿವೇಶನ ಮುಗಿದ ನಂತರ ಕೈಗೊಳ್ಳಲು ಪಕ್ಷ ನಿರ್ಧರಿಸಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಮುಂದಿನವಾರದಲ್ಲಿ ಪ್ರಧಾನಿ ಮೋದಿ ಒಂದು ವಾರಗಳ ಕಾಲ ವಿದೇಶಿ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಇದಾದ ಒಂದು ವಾರದ ಬಳಿಕ (ಜುಲೈ 20 ರಿಂದ) ಸಂಸತ್ತಿನ ಮಳೆಗಾಲದ ಅಧಿವೇಶನ ಶುರುವಾಗಲಿದೆ. ಹಾಗಾಗಿ ಸದ್ಯಕ್ಕೆ ಸರ್ಕಾರದ ಆದ್ಯತೆ ಈ ಅಧಿವೇಶನದಲ್ಲಿ ಕೆಲ ನಿರ್ಣಾಯಕ ಶಾಸನಗಳನ್ನ ಮಂಡಿಸುವುದಾಗಿದೆ. ಆದ್ದರಿಂದ ಮಳೆಗಾಲದ ಅಧಿವೇಶನ ಮುಗಿದ ಬಳಿಕ, ಕೆಲದಿನಗಳ ಕಾಲ ಸಮಯ ತೆಗೆದುಕೊಂಡು ಸಂಪುಟ ಪುನಾರಚನೆ ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.
