Homeರಾಷ್ಟ್ರೀಯತಮಿಳುನಾಡು ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಮಗುವಿಗೆ ಒಂದು ಗ್ರಾಂ ಚಿನ್ನದುಂಗುರ

ತಮಿಳುನಾಡು ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಮಗುವಿಗೆ ಒಂದು ಗ್ರಾಂ ಚಿನ್ನದುಂಗುರ

One-gram gold ring for babies born in T.N. government hospitals

ಚೆನ್ನೈ, ಜೂ.25- ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ತಮಿಳುನಾಡಿನಲ್ಲಿ ದಳಪತಿ ವಿಜಯ್‌ ನೇತೃತ್ವದ ಸರ್ಕಾರವು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿಯೊಂದು ನವಜಾತ ಶಿಶುವಿಗೆ 1 ಗ್ರಾಂ ಚಿನ್ನದ ಉಂಗುರವನ್ನು ಉಚಿತವಾಗಿ ನೀಡುವ ತೈಮಾಮನ್‌ ತಂಗ ಮೋತಿರಾಂ ತಿಟ್ಟಂ ಎಂಬ ಐತಿಹಾಸಿಕ ಯೋಜನೆಯನ್ನು ಪ್ರಕಟಿಸಿದೆ.

ತಮಿಳುನಾಡಿನಲ್ಲಿ ಶಾಶ್ವತವಾಗಿ ವಾಸಿಸುತ್ತಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಎಲ್ಲಾ ಮಕ್ಕಳಿಗೆ ಈ ಯೋಜನೆ ಅನ್ವಯಿಸುತ್ತದೆ. ಮುಖ್ಯಮಂತ್ರಿ ವಿಜಯ್‌ ಅವರ ಜನ್ಮದಿನವಾದ ಜೂನ್‌ 22 ರಿಂದ ಪೂರ್ವಾನ್ವಯವಾಗುವಂತೆ ಈ ಯೋಜನೆ ಜಾರಿಗೆ ಬರಲಿದೆ.

ಮಾಜಿ ಮುಖ್ಯಮಂತ್ರಿ ಸಿ.ಎನ್‌. ಅಣ್ಣಾದುರೈ ಅವರ ಜನ್ಮದಿನವಾದ ಸೆಪ್ಟೆಂಬರ್‌ 15 ರಂದು ಈ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ.ಪ್ರಸ್ತುತ ಮಾರುಕಟ್ಟೆ ದರದ ಪ್ರಕಾರ ಸುಮಾರು 13,600 ರೂ. ಮೌಲ್ಯದ 1 ಗ್ರಾಂ ಚಿನ್ನದ ಉಂಗುರವನ್ನು ಶಿಶುಗಳಿಗೆ ನೀಡಲಾಗುತ್ತದೆ.

ಈ ಯೋಜನೆಗಾಗಿ ಸರ್ಕಾರವು ವಾರ್ಷಿಕವಾಗಿ 755.83 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ.ತಮಿಳುನಾಡಿನಲ್ಲಿ ಮಗು ಜನಿಸಿದಾಗ ಮನೆಗೆ ಬರಮಾಡಿಕೊಳ್ಳಲು ಸೋದರ ಮಾವನ ಕಡೆಯಿಂದ ಚಿನ್ನದ ಉಡುಗೊರೆ ನೀಡುವ (ತೈಮಾಮನ್‌ ಸೀರ್‌) ಪದ್ಧತಿ ಇದೆ. ಈಗ ಸರ್ಕಾರವೇ ಸಾಂಕೇತಿಕವಾಗಿ ಆ ಸೋದರ ಮಾವನ ಜವಾಬ್ದಾರಿಯನ್ನು ಹೊತ್ತು, ಪ್ರತಿ ಮಗುವಿಗೆ ಪ್ರೀತಿ ಈ ಚಿನ್ನದ ಉಂಗುರವನ್ನು ನೀಡಲು ಮುಂದಾಗಿದೆ.

RELATED ARTICLES

Latest News