Homeರಾಷ್ಟ್ರೀಯಖರ್ಗೆ ಕುಟುಂಬದ ವಿರುದ್ಧ ಬಿಜೆಪಿಯಿಂದ ಭೂಹಗರಣ ಆರೋಪ

ಖರ್ಗೆ ಕುಟುಂಬದ ವಿರುದ್ಧ ಬಿಜೆಪಿಯಿಂದ ಭೂಹಗರಣ ಆರೋಪ

BJP alleges land scam against Kharge family

ನವದೆಹಲಿ,ಜೂ.25- ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಸದಸ್ಯರು ಸದಸ್ಯರಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್‌ ಮೂಲಕ ಕರ್ನಾಟಕದಲ್ಲಿ ಭೂ ಹಗರಣ ನಡೆಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

2024ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಿಂದ ಬೆಂಗಳೂರಿನಲ್ಲಿ 5 ಎಕರೆ ಜಮೀನನ್ನು ಈ ಟ್ರಸ್ಟ್‌ಗೆ ಮಂಜೂರು ಮಾಡಲಾಗಿದೆ. ಏರೋಸ್ಪೇಸ್‌‍ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ನಡೆಸುವ ಉದ್ದೇಶದಿಂದ ಈ ಜಮೀನು ನೀಡಲಾಗಿದೆ.
ಆದರೆ, ಈ ಟ್ರಸ್ಟ್‌ಗೆ ಆ ಕ್ಷೇತ್ರದಲ್ಲಿ ಯಾವುದೇ ಅನುಭವವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್‌ ಭಂಡಾರಿ ಆಪಾದಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು, ಈ 5 ಎಕರೆ ಜಮೀನಿನ ಮಾರುಕಟ್ಟೆ ಮೌಲ್ಯ ಸುಮಾರು 100 ಕೋಟಿ ರೂಪಾಯಿ . 2016ರಲ್ಲಿ ಕಲಬುರಗಿಯಲ್ಲಿಯೂ ಇದೇ ಟ್ರಸ್ಟ್‌ಗೆ 19 ಎಕರೆ ಜಮೀನನ್ನು ಪಾಲೀ ಭಾಷೆಯ ಸಂಶೋಧನೆಗಾಗಿ ನೀಡಲಾಗಿತ್ತು, ನಂತರ ಅದನ್ನು ಶಾಶ್ವತ ಗುತ್ತಿಗೆಗೆ ಪರಿವರ್ತಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಈ ಆರೋಪಗಳಿಗೆ 24 ಗಂಟೆಯೊಳಗೆ ಉತ್ತರಿಸಬೇಕೆಂದು ಆಗ್ರಹಿಸಿದ್ದಾರೆ.

ಸಿದ್ಧಾರ್ಥ ವಿಹಾರ ಟ್ರಸ್ಟ್‌ ಅನ್ನು ಖರ್ಗೆ ಕುಟುಂಬಸ್ಥರು ನಿಯಂತ್ರಿಸುತ್ತಿದ್ದಾರೆ ಮತ್ತು ರಾಜಕೀಯ ಪ್ರಭಾವದ ಮೂಲಕ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಳಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ, ಅವರ ಪುತ್ರ ಪ್ರಿಯಾಂಕ್‌ ಖರ್ಗೆ, ಅಳಿಯ ಮತ್ತು ಮಗಳು ಸಿದ್ಧಾರ್ಥ ವಿಹಾರ ಟ್ರಸ್ಟ್‌ನ ಸದಸ್ಯರಾಗಿದ್ದಾರೆ. ಈ ಟ್ರಸ್ಟ್‌ ವಿರುದ್ಧ ಒಂದಲ್ಲ ಹಲವು ಭ್ರಷ್ಟಾಚಾರ ಪ್ರಕರಣ ಗಳಿವೆ.

ಮಲ್ಲಿಕಾರ್ಜುನ ಖರ್ಗೆ ಈ ಟ್ರಸ್ಟ್‌ ಮೂಲಕ ವಿವಿಧ ಭೂಮಿಯನ್ನು ಹೇಗೆ ಆಕ್ರಮಿಸಿಕೊಂಡರು, ಬಡವರ ಭೂಮಿಯನ್ನು ಹೇಗೆ ಕಬಳಿಸಲು ತಮ ಅಧಿಕಾರ ಮತ್ತು ಪ್ರಭಾವವನ್ನು ಬಳಸಿದರು ಎಂಬುದನ್ನು ವಿವರಿಸುತ್ತಾ, ನಾನು ಒಂದಲ್ಲ, ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ನಿಮ ಮುಂದೆ ಇಡುತ್ತೇನೆ ಎಂದು ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರದಲ್ಲಿದ್ದಾಗ ಕೆಐಎಡಿಬಿ 5 ಎಕರೆ ಭೂಮಿ ಮಂಜೂರು ಮಾಡಿತ್ತು. ಈ 5ಎಕರೆ ಜಮೀನಿನ ಮಾರುಕಟ್ಟೆ ದರ ಈಗ 100 ಕೋಟಿ ರೂ.ಆಗಿದೆ. ಇದನ್ನು ಕೈಗಾರಿಕಾ ಅಥವಾ ಏರೋಸ್ಪೇಸ್‌‍ ಟ್ರಸ್ಟ್‌ಗೆ ನೀಡಬೇಕಾಗಿತ್ತು . ರಾಹುಲ್‌ ಗಾಂಧಿ, ಅವರ ಸೋದರ ಮಾವ ರಾಬರ್ಟ್‌ ವಾದ್ರಾ ಸೇರಿ ಇಡೀ ಗಾಂಧಿ-ವಾದ್ರಾ ಕುಟುಂಬವು ವಿವಿಧ ಪ್ರದೇಶಗಳಲ್ಲಿ ಇದೇ ರೀತಿಯ ಆರೋಪಗಳನ್ನು ಎದುರಿಸುತ್ತಿದೆ. ಮಲ್ಲಿಕಾರ್ಜುನ ಖರ್ಗೆ, ಸಿದ್ಧಾರ್ಥ ವಿಹಾರ್‌ ಟ್ರಸ್ಟ್‌ ಮೂಲಕ ಗಾಂಧಿ-ವಾದ್ರಾ ಕುಟುಂಬದ ವಿಧಾನವನ್ನು ಅಳವಡಿಸಿಕೊಂಡರು. ಇದು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ 131 ಎ ಮತ್ತು ಸೆಕ್ಷನ್‌ 131 ಬಿ ಅಡಿಯಲ್ಲಿ ಅಪರಾಧವಾಗಿದೆ ಎಂದರು.

ಕಲಬುರಗಿ ಭೂಮಿಯನ್ನು ವರ್ಗಾವಣೆ ಮಾಡುವುದನ್ನು ಸರ್ಕಾರಕ್ಕಿಂತ ಟ್ರಸ್ಟ್‌ಗೆ ಅನುಚಿತ ಮತ್ತು ಪ್ರಯೋಜನಕಾರಿ ಎಂದು ಫ್ಲ್ಯಾಗ್‌ ಮಾಡಿದ 2018 ರ ಕಂಟ್ರೋಲರ್‌ ಮತ್ತು ಆಡಿಟರ್‌ ಜನರಲ್‌ (ಸಿಎಜಿ) ವರದಿಯನ್ನು ಅವರು ಉಲ್ಲೇಖಿಸಿದ್ದಾರೆ.

ಸಿದ್ಧಾರ್ಥ ವಿಹಾರ್‌ ಸುತ್ತ ಈ ಆರೋಪಗಳು ಕೇಂದ್ರೀಕೃತವಾಗಿವೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ಭೂಮಿ ಹಂಚಿಕೆಯಿಂದ ಸಿದ್ಧಾರ್ಥ ವಿಹಾರ ಟ್ರಸ್ಟ್‌ ಪ್ರಯೋಜನ ಪಡೆದಿದೆ. ಕಾಂಗ್ರೆಸ್‌‍ ಪಕ್ಷವು ಅಧಿಕಾರದಲ್ಲಿದ್ದ ಅವಧಿಯಲ್ಲಿ, ಹಂಚಿಕೆಯಲ್ಲಿ ಅಕ್ರಮಗಳು ನಡೆದಿವೆ. ಏರೋಸ್ಪೇಸ್‌‍ ಮತ್ತು ರಕ್ಷಣಾ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಮೀಸಲಿಟ್ಟ ಐದು ಎಕರೆ ಜಮೀನನ್ನು ಕೈಗಾರಿಕಾ ಅಥವಾ ಏರೋಸ್ಪೇಸ್‌‍ ಸಂಸ್ಥೆಯಲ್ಲದಿದ್ದರೂ ಟ್ರಸ್ಟ್‌ಗೆ ನೀಡಲಾಗಿದೆ ಎಂದು ದೂರಿದರು.

RELATED ARTICLES

Latest News