Homeರಾಷ್ಟ್ರೀಯನಡವಳಿಕೆ ಮೂಲಕ ಸೇವೆ ತೋರಿಸಲು ಪ್ರಧಾನಿ ಮೋದಿ ಸಲಹೆ

ನಡವಳಿಕೆ ಮೂಲಕ ಸೇವೆ ತೋರಿಸಲು ಪ್ರಧಾನಿ ಮೋದಿ ಸಲಹೆ

ವಡ್ನಗರ, ಸೆ. 24- ಕೇವಲ ಬಾಯಿ ಮಾತಿನಲ್ಲಿ ಉಪದೇಶ ಮಾಡುವ ಬದಲು, ನಮ್ಮ ನಿತ್ಯದ ಕೆಲಸ-ಕಾರ್ಯಗಳಲ್ಲಿ ಮತ್ತು ನಡವಳಿಕೆಯಲ್ಲಿ ಸೇವೆಯನ್ನು ತೋರಿಸಿ ಕೊಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಸೇವಾ ಯಾತ್ರೆಯ ಅಂಗವಾಗಿ ದೇಶಾದ್ಯಂತ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿ ರುವ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್‌್ಸ ಮೂಲಕ ನೇರ ಸಂವಾದ ನಡೆಸಿದರು. ಸೇವೆಯಲ್ಲಿ ತೊಡಗಿಸಿಕೊಳ್ಳುವ ಪ್ರತಿಯೊಬ್ಬ ಕಾರ್ಯಕರ್ತರು ಮೊದಲು ತಮ್ಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ಆರಂಭದಲ್ಲೇ ಪ್ರೀತಿಯ ಸಲಹೆ ನೀಡಿದರು.

ಸೇವೆ ಮಾಡುವುದೇ ನಮ್ಮ ಪ್ರಮುಖ ಧ್ಯೇಯವಾಗಬೇಕು. ಸಾರ್ವಜನಿಕರಿಗೆ ಸೇವೆಯ ಮಹತ್ವವನ್ನು ಬರೀ ಭಾಷಣ ಅಥವಾ ಬೋಧನೆಗಳ ಮೂಲಕ ತಿಳಿಸುವುದಲ್ಲ, ಬದಲಾಗಿ ನಮ್ಮ ನಿಸ್ವಾರ್ಥ ನಡವಳಿಕೆ ಮತ್ತು ಕೃತಿಯ ಮೂಲಕವೇ ಸಮಾಜಕ್ಕೆ ತೋರಿಸಿಕೊಡಬೇಕು ಎಂದು ಮೋದಿ ಒತ್ತಿ ಹೇಳಿದರು.

ಪ್ರಜಾಪ್ರಭುತ್ವದಲ್ಲಿ ನಾವು ಎಷ್ಟೇ ಉನ್ನತ ರಾಜಕೀಯ ಅಧಿಕಾರ ಪಡೆದರೂ, ಎಷ್ಟೇ ದೊಡ್ಡ ಸ್ಥಾನ-ಮಾನ ತಲುಪಿದರೂ ನಮ್ಮ ಮೂಲ ಹಾದಿ ಮಾತ್ರ ಜನರ ಸೇವೆಯಾಗಿರಬೇಕು. ಯಾವುದೇ ಕಾರಣಕ್ಕೂ ನಾವು ಆ ಮಾರ್ಗದಿಂದ ವಿಮುಖರಾಗುವುದಿಲ್ಲ ಎಂಬುದನ್ನು ನಮ್ಮ ನಡತೆ ಸಾರಬೇಕು ಎಂದು ತಿಳಿಸಿದರು.

RELATED ARTICLES
spot_img

Latest News