Homeರಾಷ್ಟ್ರೀಯಪಂಜಾಬ್‌ನಲ್ಲಿ ಗುಂಡಿಕ್ಕಿ ಎಎಪಿ ನಾಯಕ ಹತ್ಯೆ

ಪಂಜಾಬ್‌ನಲ್ಲಿ ಗುಂಡಿಕ್ಕಿ ಎಎಪಿ ನಾಯಕ ಹತ್ಯೆ

Punjab AAP Leader Lucky Oberoi Shot Dead In His Car In Jalandhar

ಚಂಡೀಗಢ, ಫೆ. 6 (ಪಿಟಿಐ) ಪಂಜಾಬ್‌ನ ಆಮ್‌ ಆದ್ಮಿ ಪಕ್ಷದ ನಾಯಕ ಲಕ್ಕಿ ಒಬೆರಾಯ್‌ ಅವರನ್ನು ಇಂದು ಗುಂಡಿಕ್ಕಿ ಕೊಲೆ ಮಾಡಲಾಗಿದೆ.ಜಲಂಧರ್‌ನ ಮಾಡೆಲ್‌ ಟೌನ್‌ನಲ್ಲಿರುವ ಗುರುದ್ವಾರದ ಹೊರಗೆ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಬೆರಾಯ್‌ ತಮ್ಮ ಥಾರ್‌ ವಾಹನದಲ್ಲಿ ಗುರುದ್ವಾರಕ್ಕೆ ಆಗಮಿಸಿದಾಗ ದ್ವಿಚಕ್ರ ವಾಹನದಲ್ಲಿದ್ದ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದರು ಎಂದು ಜಲಂಧರ್‌ನ ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ದೂರವಾಣಿ ಮೂಲಕ ತಿಳಿಸಿದ್ದಾರೆ.

ತಕ್ಷಣ ಅವರನ್ನು ಜಲಂಧರ್‌ನ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಗಾಯಗಳಿಂದ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

RELATED ARTICLES
spot_img

Latest News