ಚಂಡೀಗಢ, ಮಾ. 23 (ಪಿಟಿಐ) ಅಮೃತಸರದಲ್ಲಿರುವ ಪಂಜಾಬ್ ಪೊಲೀಸರ ಕೌಂಟರ್-ಇಂಟೆಲಿಜೆನ್ಸ್ ಘಟಕವು ಪಾಕ್ ಮೂಲದ ಇಬ್ಬರು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದೆ.
ಮಾದಕವಸ್ತು ಕಳ್ಳಸಾಗಣೆ ಮಾಡುವುದನ್ನು ಭೇದಿಸಿ 5 ಕೆಜಿ ಹೆರಾಯಿನ್ ಹೊಂದಿರುವ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನ ಮೂಲದ ಕಳ್ಳಸಾಗಣೆದಾರ ಮತ್ತು ಗಡಿಯಾಚೆಗಿನ ಸರಕುಗಳನ್ನು ಸಂಘಟಿಸುವ ವಿದೇಶಿ ಮೂಲದ ಹ್ಯಾಂಡ್ಲರ್ ಜೊತೆಗಿನ ಸಂಪರ್ಕವು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ ಎಂದು ಡಿಜಿಪಿ ಗೌರವ್ ಯಾದವ್ ಎಕ್ಸ್ ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಅಮೃತಸರದಲ್ಲಿರುವ ರಾಜ್ಯ ವಿಶೇಷ ಕಾರ್ಯಾಚರಣೆ ಕೋಶ ಪೊಲೀಸ್ ಠಾಣೆಯಲ್ಲಿ ಎಫ್‌ಐಆ್ಟ್ಛ್ಛ ದಾಖಲಾಗಿದ್ದು, ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
