Homeರಾಷ್ಟ್ರೀಯರಾಜ್ಯ ಸಭೆಯಲ್ಲಿ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ಪ್ರಸ್ತಾಪಿಸಿದ ಖರ್ಗೆ, ಕಲಾಪ ಮುಂದೂಡಿಕೆ

ರಾಜ್ಯ ಸಭೆಯಲ್ಲಿ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ಪ್ರಸ್ತಾಪಿಸಿದ ಖರ್ಗೆ, ಕಲಾಪ ಮುಂದೂಡಿಕೆ

Rajya Sabha adjourned till noon amid Opposition uproar over CJP protest, NEET paper leak

ಬೆಂಗಳೂರು, ಜು.20- ಯುವ ಜನರ ಆಶೋತ್ತರಗಳಿಗೆ ಕಿವಿ ಕೊಡುವ ಬದಲಾಗಿ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮೌನಕ್ಕೆ ಶರಣಾಗಿದೆ ಎಂದು ಕಾಂಗ್ರೆಸ್‌‍ ಟೀಕಿಸಿದೆ. ರಾಜ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಆ ಸಂದರ್ಭದಲ್ಲಿ ಅಯೋಧ್ಯೆಯಲ್ಲಿನ ಲೂಟಿ ಹಗರಣವನ್ನು ಪ್ರಸ್ತಾಪಿಸುವಂತೆ ಕೆಲವರು ಒತ್ತಾಯಿಸಿದಾಗ ಚಂದಾಚೋರಿಯನ್ನು ಅನಂತರ ಚರ್ಚೆ ಮಾಡುತ್ತೇವೆ. ಸಾವಿರಾರು ಮಕ್ಕಳು ಜಂತರ್‌ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ. ಅವರ ಮೇಲೆ ಲಾಟಿ ಚಾರ್ಜ್‌ ನಡೆಸಲಾಗಿದೆ ಎಂದು ಹೇಳುತ್ತಿದ್ದಂತೆ ಆಡಳಿತರೂಢ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಗದ್ದಲ ಎಬ್ಬಿಸಿವೆ.

ತಕ್ಷಣವೇ ರಾಜ್ಯ ಸಭೆಯ ಅಧ್ಯಕ್ಷರು ಕಲಾಪವನ್ನು ಮುಂದೂಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್‌‍ ಪಕ್ಷ ಜಂತರ್‌ಮಂತರ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಅವರ ಮೇಲೆ ಲಾಟಿ ಚಾರ್ಜ್‌ ನಡೆಸಲಾಗಿದೆ ಎಂದು ಕಾಂಗ್ರೆಸ್‌‍ ಆಕ್ಷೇಪಿಸಿದೆ.ಯುವ ಜನರ ಬೇಡಿಕೆಗಳಿಗೆ ಸ್ಪಂದಿಸುವ ಬದಲಾಗಿ ಧ್ವನಿಯನ್ನು ಅಡಗಿಸಿರುವುದು ಸರಿಯಲ್ಲ ಎಂದು ಟೀಕಿಸಲಾಗಿದೆ.

RELATED ARTICLES

Latest News