Saturday, April 18, 2026
Homeರಾಷ್ಟ್ರೀಯಚಂಡೀಗಢ : ಇಬ್ಬರು ಐಎಎಸ್‌‍ ಅಧಿಕಾರಿಗಳ ಅಮಾನತು

ಚಂಡೀಗಢ : ಇಬ್ಬರು ಐಎಎಸ್‌‍ ಅಧಿಕಾರಿಗಳ ಅಮಾನತು

Two IAS officers suspended in Punjab

ಚಂಡೀಗಢ,ಫೆ.7- ಅಂಗನವಾಡಿ ಕಾರ್ಯಕರ್ತೆಯರಿಗೆ ಸಾರ್ಟ್‌ಫೋನ್‌ಗಳನ್ನು ಒದಗಿಸಲು ಹಣ ಬಿಡುಗಡೆಗೆ ವಿಳಂಬ ಮಾಡಿದ ಆರೋಪದ ಮೇಲೆ ಪಂಜಾಬ್‌ ಸರ್ಕಾರವು ಇಬ್ಬರು ಹಿರಿಯ ಐಎಎಸ್‌‍ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.ಅಧಿಕೃತ ಆದೇಶಗಳ ಪ್ರಕಾರ, ಅಧಿಕಾರಿಗಳಾದ ಕಮಲ್‌ ಕಿಶೋರ್‌ ಯಾದವ್‌ ಮತ್ತು ಜಸ್ಪ್ರೀತ್‌ ಸಿಂಗ್‌ ಅವರನ್ನು ಅಮಾನತುಗೊಳಿಸಲಾಗಿದೆ.

ಅವರ ಅಮಾನತುಗೆ ಕಾರಣಗಳನ್ನು ಆದೇಶಗಳಲ್ಲಿ ನಿರ್ದಿಷ್ಟಪಡಿಸಲಾಗಿಲ್ಲವಾದರೂ, ಕೇಂದ್ರ ಸರ್ಕಾರದ ಮಿಷನ್‌ ಸಕ್ಷಮ್‌ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಾರ್ಟ್‌ಫೋನ್‌ಗಳನ್ನು ಖರೀದಿಸಲು ಸುಮಾರು ಆರು ವರ್ಷಗಳಿಂದ ಹಣ ಬಿಡುಗಡೆ ಮಾಡದೆ ವಿಳಂಬ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ಸ್ಮಾಟ್‌ ರ್ಫೋನ್‌ಗಳನ್ನು ಒದಗಿಸಲು ಸರ್ಕಾರ ಟೆಂಡರ್‌ ನೀಡಿದ್ದ ಮಾರಾಟಗಾರ ವಿಳಂಬಕ್ಕಾಗಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು ಎಂದು ಅವರು ಹೇಳಿದರು.ಸಾಮಾಜಿಕ ಭದ್ರತೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ವಿಕಾಸ್‌‍ ಪ್ರತಾಪ್‌ ಸೇರಿದಂತೆ ಇಬ್ಬರು ಹೆಚ್ಚುವರಿ ಐಎಎಸ್‌‍ ಅಧಿಕಾರಿಗಳನ್ನು ಮೊದಲು ವರ್ಗಾಯಿಸಲಾಗಿತ್ತು.ಈಗ ಅಮಾನತು ಮಾಡಲಾಗಿದೆ.

2003 ರ ಬ್ಯಾಚ್‌ನ ಐಎಎಸ್‌‍ ಅಧಿಕಾರಿ ಯಾದವ್‌, ಕೈಗಾರಿಕೆಗಳು ಮತ್ತು ವಾಣಿಜ್ಯ, ಹೂಡಿಕೆ ಪ್ರಚಾರ ಮತ್ತು ಮಾಹಿತಿ ತಂತ್ರಜ್ಞಾನ ಪ್ರಚಾರ ಇಲಾಖೆಯ ಆಡಳಿತ ಕಾರ್ಯದರ್ಶಿಯಾಗಿದ್ದರು.
2014 ರ ಬ್ಯಾಚ್‌ನ ಐಎಎಸ್‌‍ ಅಧಿಕಾರಿ ಜಸ್ಪ್ರೀತ್‌ ಸಿಂಗ್‌‍, ಪಂಜಾಬ್‌ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ನಿಗಮ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಏತನ್ಮಧ್ಯೆ, ಐಎಎಸ್‌‍ ಅಧಿಕಾರಿ ಗುರುಕಿರತ್‌ ಕಿರ್ಪಾಲ್‌ ಸಿಂಗ್‌ ಅವರಿಗೆ ಕೈಗಾರಿಕೆಗಳು, ಹೂಡಿಕೆ ಪ್ರಚಾರ ಮತ್ತು ಸಾಮಾಜಿಕ ಭದ್ರತೆಯ ಜವಾಬ್ದಾರಿಗಳನ್ನು ವಹಿಸಲಾಗಿದೆ. ಸಿಂಗ್‌ ಕಳೆದ 11 ತಿಂಗಳುಗಳಿಂದ ಯಾವುದೇ ಹುದ್ದೆಯಿಲ್ಲದೆ ಇದ್ದರು.

RELATED ARTICLES

Latest News