Homeರಾಷ್ಟ್ರೀಯಆಕಸ್ಮಿಕವಾಗಿ ಗ್ರೆನೇಡ್‌ ಸ್ಫೋಟಗೊಂಡು ಇಬ್ಬರು ಯೋಧರ ದುರ್ಮರಣ

ಆಕಸ್ಮಿಕವಾಗಿ ಗ್ರೆನೇಡ್‌ ಸ್ಫೋಟಗೊಂಡು ಇಬ್ಬರು ಯೋಧರ ದುರ್ಮರಣ

Two soldiers killed in accidental grenade blast in Uri

ಶ್ರೀನಗರ,ಜೂ.9- ಜಮು- ಕಾಶೀರದ ಬಾರಾಮುಲ್ಲಾ ಜಿಲ್ಲೆಯ ಉರಿ ವಲಯದಲ್ಲಿ ಆಕಸಿಕವಾಗಿ ಗ್ರೆನೇಡ್‌ ಸ್ಫೋಟಗೊಂಡು ಇಬ್ಬರು ಯೋಧರು ಮೃತಪಟ್ಟಿದ್ದಾರೆ. ಉರಿಯ ಕಮಲ್ಕೋಟ್‌ ಪ್ರದೇಶದಲ್ಲಿರುವ ಸೇನಾ ಶಿಬಿರದಲ್ಲಿ ನಿಯಮಿತವಾಗಿ ಉಪಕರಣಗಳನ್ನು ಹಸ್ತಾಂತರಿಸುವ ವೇಳೆ ಕೈಗ್ರೆನೇಡ್‌ ಆಕಸಿಕವಾಗಿ ಸ್ಫೋಟಗೊಂಡಿದೆ.

ಈ ವೇಳೆ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ, ತಕ್ಷಣಅವರನ್ನು ಸೇನೆಯ 92 ಬೇಸ್‌‍ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಕಾನೂನು ಪ್ರಕಾರ ಅಗತ್ಯವಿರುವ ತನಿಖಾ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶ್ರೀನಗರ ಮೂಲದ ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಅವರು ಘಟನೆಗೆ ಸಂಬಂಧಿತ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದ ಬಳಿಕವೇ ಅಧಿಕೃತ ಹೇಳಿಕೆ ನೀಡುವುದಾಗಿ ತಿಳಿಸಿದ್ದಾರೆ.

RELATED ARTICLES

Latest News