ನವದೆಹಲಿ,ಫೆ.1- ಬೆಲೆ ಏರಿಕೆಯಿಂದ ಬಳಲಿದ್ದ ದೇಶದ ಜನತೆಗೆ ಯಾವುದೇ ಹೊಸ ತೆರಿಗೆಯನ್ನು ವಿಧಿಸದೆ, ಮದ್ಯಪಾನ, ಸಿಗರೇಟ್, ಪಾನ್‌ಮಸಾಲ ದರ ಹೆಚ್ಚಿಸಿ, ಪಾದರಕ್ಷೆ, ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ ಮಾಡಿ ಅನ್ನದಾತರ ಆದಾಯ ದ್ವಿಗುಣಕ್ಕೆ ಒತ್ತು ಕೊಟ್ಟು ಎಲ್ಲರನ್ನೊಳಗೊಂಡ ಸಮತೋಲನದ 2026-27ನೇ ಸಾಲಿನ ಬಜೆಟ್ ಮಂಡನೆಯಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಈ ಬಾರಿಯೂ ತೆರಿಗೆಯನ್ನು ಹೆಚ್ಚಿಸದೆ ದೇಶವಾಸಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ. 1 ಗಂಟೆ 26 ನಿಮಿಷಗಳ ಕಾಲ ಇತಿಹಾಸದಲ್ಲೇ 2ನೇ ಬಾರಿಗೆ ಭಾನುವಾರದಂದು ಬಜೆಟ್ ಮಂಡಿಸಿದ ಅವರು, ಕಳೆದ 12 ವರ್ಷಗಳಿಂದ ಶಿಸ್ತುಬದ್ಧ ಆರ್ಥಿಕ ನಿರ್ವಹಣೆ ಕಾರಣ ಭಾರತ ವಿಶ್ವದಲ್ಲೇ ಪ್ರಗತಿಯ ಪಥದಲ್ಲಿದೆ ಎಂದು ಕೊಂಡಾಡಿದರು.
ಹಳೆ ತೆರಿಗೆ ಪದ್ಧತಿಯನ್ನೇ ಮುಂದುವರೆಸಿರುವ ಅವರು, ವೈಯಕ್ತಿಕ ಆದಾಯ ತೆರಿಗೆ ಪದ್ಧತಿಯನ್ನು ಯಥಾಸ್ಥಿತಿಯಲ್ಲೇ ಇಟ್ಟಿದ್ದಾರೆ. ಕ್ಯಾನ್ಸರ್ ಸಂಬಂಧಿತ 17 ವಿಧದ ಕಾಯಿಲೆಗಳಿಗೆ ಬಳಸುವ ಔಷಧಿಗಳು ಮತ್ತು 7 ಅಪರೂಪದ ಕಾಯಿಲೆಗಳಿಗೂ ಬಳಲುವ ಔಷಧಗಳ ಬೆಲೆಯನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡುವುದಾಗಿ ಘೋಷಿಸಿದ್ದಾರೆ.
ಸದ್ಯದಲ್ಲೇ ನಡೆಯಲಿರುವ 5 ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡು, ಪುದುಚ್ಚೇರಿ, ಅಸ್ಸಾಂ, ಕೇರಳ, ಪ.ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಜೆಟ್‌ನಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.ದೇಶದಲ್ಲಿ 7 ಹೊಸ ಹೈಸ್ಪೀಡ್ ರೈಲ್ವೆ ಯೋಜನೆಗಳನ್ನು ಘೋಷಿಸಲಾಗಿದ್ದು, ಇದರಲ್ಲಿ 2 ಯೋಜನೆಗಳು ಕರ್ನಾಟಕಕ್ಕೆ ಸಿಕ್ಕಿದೆ.
ಮಹಿಳಾ ಮತದಾರರಿಗೂ ಬಂಪರ್ ಕೊಡುಗೆ ನೀಡಿರುವ ನಿರ್ಮಲಾ ಸೀತಾರಾಮನ್ ಅವರು ಮಹಿಳಾ ಉದ್ಯಮಿಗಳಿಗೆ ಸಹಾಯ ಮಾಡಲು ಸಮುದಾಯ ಸ್ವಾಮ್ಯದ ಚಿಲ್ಲರೆ ಅಂಗಡಿಗಳಿಗೆ ಸ್ವಯಂ ಸಹಾಯ ಉದ್ಯಮಿ ಮಾರ್ಕ್‌್ಸ ಅನ್ನು ಸ್ಥಾಪನೆ ಮಾಡುವುದಾಗಿ ಪ್ರಕಟಿಸಿದ್ದಾರೆ.
ಕರ್ನಾಟಕ, ಕೇರಳದ ಕರಾವಳಿಯಲ್ಲಿ ಟ್ರೆಕ್ಕಿಂಗ್ ಮಾರ್ಗ ಅಭಿವೃದ್ದಿಗೆ ಯೋಜನೆ. ಕ್ರೀಡಾ ಕ್ಷೇತ್ರದ ಅಭಿವೃದ್ದಿಗಾಗಿ ಖೇಲೋ ಇಂಡಿಯಾ ಮಿಷನ್ ಆರಂಭ. ಕ್ರೀಡಾ ಸಂಸ್ಕೃತಿ ಬೆಳೆಸಲು ಹೊಸ ಕ್ರೀಡಾ ಸಂಕೀರ್ಣ ಆರಂಭಿಸಲಾಗುತ್ತದೆ.
ಇನ್ನು ಮಹಿಳೆಯರಿಗಾಗಿ ಶಿ -ಮಾರ್ಚ್ ಯೋಜನೆ ಮೂಲಕ ಉದ್ಯಮಿಗಳಾಗಲು ಪ್ರೋತ್ಸಾಹ, ಮಹಿಳೆಯರಿಗಾಗಿ ಲಕ್‌ಪತಿ ಯೋಜನೆಗೆ ಇನ್ನಷ್ಟು ಆದ್ಯತೆ. ದಿನಸಿ ಅಂಗಡಿ ಆರಂಭಿಸುವ ಮಹಿಳೆಯರಿಗಾಗಿ ವಿಶೇಷ ಸಹಾಯಧನ ನೀಡಲಾಗುತ್ತದೆ.
ಹೈ ವ್ಯಾಲ್ಯು ಕ್ರಾಪ್‌ಗಳಾದ ಗೋಡಂಬಿ ಬೆಳೆ, ಕೋಕೋ, ತೆಂಗಿನ ಕಾಯಿ ಬೆಳೆಗೆ ಉತ್ತೇಜನ. ಹೊಸ ತೆಂಗು ಸಸಿ ನೆಡಲು ಕ್ರಮ, ಕರಾವಳಿ ಜಿಲ್ಲೆಗಳಿಗೆ ಇದು ಸಹಕಾರಿ, ರೈತರ ಆದಾಯ ದ್ವಿಗುಣಕ್ಕೆ, ಯುವಕರಿಗೆ ಉದ್ಯೋಗಕ್ಕೆ ಉತ್ತೇಜನ ಕೊಡಲಾಗಿದೆ.
ಎಲ್ಲಾ ರಾಜ್ಯಗಳಿಗೆ 5 ಯುನಿವರ್ಸಿಟಿ ಟೌನ್ಶಿಪ್ ನಿರ್ಮಾಣ, ಎಲ್ಲಾ ಜಿಲ್ಲೆಗೂ ವಿದ್ಯಾರ್ಥಿನಿ ನಿಲಯದ ಸ್ಥಾಪನೆ. ಯೂನಿವರ್ಸಿಟಿ, ಸ್ಕಿಲ್ ಸೆಂಟರ್‌ಗಳ ನಿರ್ಮಾಣಕ್ಕೆ ಕೇಂದ್ರದ ಸಹಕಾರ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ, ಎಲ್ಲಾ ಜಿಲ್ಲೆಗಳಲ್ಲಿ ವಿದ್ಯಾರ್ಥಿನಿ ನಿಲಯದ ನಿರ್ಮಾಣ. ಈಶಾನ್ಯ ಭಾರತದಲ್ಲಿ ಏಮ್ಸೌಆಸ್ಪತ್ರೆ ನಿರ್ಮಾಣದ ಘೋಷಣೆ. ಪ್ರತೀ ಜಿಲ್ಲೆಗೊಂದು ಬಾಲಕಿಯರ ಹಾಸ್ಟೆಲ್ ನಿರ್ಮಾಣ ಮಾಡುವುದಾಗಿ ಅವರು ಪ್ರಕಟಿಸಿದರು.
ಆಯುರ್ವೇದಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, 3 ಸಂಸ್ಥೆಗಳ ನಿರ್ಮಾಣ, ಆಯುಷ್ ಫಾರ್ಮಸಿಗಳ ಅಭಿವೃದ್ಧಿ, ಮೆಸಿನ್ ಸೆಂಟರ್ -ರಿಸರ್ಚ್ ಸೆಂಟರ್‌ಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.
ಕೈಗಾರಿಕೆಗಳ ಕ್ಲಸ್ಟರ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಸಣ್ಣ-ಮಧ್ಯಮ ವರ್ಗದ ಕೈಗಾರಿಕೆಗಳಿಗೆ 10 ಸಾವಿರ ಕೋಟಿ ರೂಪಾಯಿ ಮೀಸಲು ಕೊಡಲಾಗ್ತಿದೆ, ದೇಶಾದ್ಯಂತ ರೇರ್ ಅರ್ಥ್ ಗಣಿಗಾರಿಕೆಗೆ ಕೇಂದ್ರದ ವಿಶೇಷ ಆದ್ಯತೆ ಕೊಡಲಾಗಿದೆ.
ಸಣ್ಣ ಮತ್ತು ಅತಿಸಣ್ಣ ಖಾದಿ, ಗ್ರಾಮೋದ್ಯೋಗ, ಕರಕುಶಲಕ್ಕೆ ಹೆಚ್ಚು ಒತ್ತು. ಟೆಕ್ಸಟೈಲ್ ಕ್ಷೇತ್ರದ ಅಭಿವೃದ್ದಿಗಾಗಿ ರಾಷ್ಟ್ರೀಯ ನೀತಿ ಘೋಷಣೆ. ಜವಳಿ ಉದ್ಯಮದ ಅಭಿವೃದ್ದಿಗೆ ಕೇಂದ್ರ ಸರ್ಕಾರ ಹಲವಾರು ಕ್ರಮ ತೆಗೆದುಕೊಳ್ಳಲಾಗಿದೆ. ಖಾದಿ ಉದ್ಯಮದ ಅಭಿವೃದ್ದಿಗೆ ಹೊಸ ಯೋಜನೆ. ಕಂಟೈನರ್ ಅಭಿವೃದ್ದಿ ಯೋಜನೆಗಾಗಿ ಹತ್ತು ಸಾವಿರ ಕೋಟಿ ರೂ. ಮೀಸಲಿಡಲಾಗಿದೆ.
