Saturday, July 27, 2024
Homeರಾಷ್ಟ್ರೀಯಅನಿರೀಕ್ಷಿತ ಸೋಲಿನ ನಂತರ ನವೀನ್‌ ಪಟ್ನಾಯಕ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ

ಅನಿರೀಕ್ಷಿತ ಸೋಲಿನ ನಂತರ ನವೀನ್‌ ಪಟ್ನಾಯಕ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ

ಭುವನೇಶ್ವರ,ಜೂ.5- ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜು ಜನತಾದಳದ ಅನಿರೀಕ್ಷಿತ ಸೋಲಿನ ನಂತರ ಪಕ್ಷದ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ.

ನವೀನ್‌ ಪಟ್ನಾಯಕ್‌ ಅವರು ಭುವನೇಶ್ವರದ ರಾಜಭವನಕ್ಕೆ ತೆರಳಿ ರಾಜ್ಯಪಾಲ ರಘುಬರ್‌ ದಾಸ್‌‍ ಅವರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಇದರೊಂದಿಗೆ 24 ವರ್ಷಗಳ ಪಟ್ನಾಯಕ್‌ ಅವರ ಸುದೀರ್ಘ ಆಳ್ವಿಕೆ ಕೊನೆಗೊಂಡಿದೆ.ಒಡಿಶಾದಲ್ಲಿ ಆಡಳಿತ ವಿರೋಧಿ ಅಲೆಗೆ ಸಿಕ್ಕ ಆಡಳಿತರೂಢ ಬಿಜೆಡಿ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಸರಳ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

147 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ 80 ಸ್ಥಾನ ಗೆದ್ದುಕೊಂಡಿದ್ದು, ಸರಳ ಬಹುಮತ ಪಡೆದಿದೆ. ಅಧಿಕಾರ ಕಳೆದುಕೊಂಡರೂ ಬಿಜೆಡಿ 49 ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಗೌರವವನ್ನು ಉಳಿಸಿಕೊಂಡಿದೆ. ಆದರೆ ಬಿಜೆಡಿ ಸರ್ಕಾರದ ಕನಿಷ್ಠ ಎಂಟು ಸಚಿವರು ಆಡಳಿತ ವಿರೋಧಿ ಅಲೆಗೆ ಸಿಕ್ಕು ಪರಾಭವಗೊಂಡಿದ್ದಾರೆ.

ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರೇ 2 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದರು. ಈ ಪೈಕಿ ಬೊಲಾಂಗೀರ್‌ ಜಿಲ್ಲೆಯ ಕಾಂತಾಬಂಜಿ ಕ್ಷೇತ್ರದಲ್ಲಿ ಬಿಜೆಪಿಯ ಲಕ್ಷ್ಮಣ್‌ಬಾಗ್‌ ಅವರ ವಿರುದ್ಧ ಸೋತಿದ್ದಾರೆ. ಆದರೆ ಕಣಕ್ಕಿಳಿದಿದ್ದ ಮತ್ತೊಂದು ಕ್ಷೇತ್ರ ಗಂಜಾಂ ಜಿಲ್ಲೆಯ ಹಿಂಜಿಲಿಯಲ್ಲಿ ಬಿಜೆಪಿ ಅಭ್ಯರ್ಥಿ ಸಿಸಿರ್‌ ಕುಮಾರ್‌ ಮಿಶ್ರಾ ವಿರುದ್ಧ ಜಯ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES

Latest News