Saturday, May 4, 2024
Homeರಾಜ್ಯಮಂಗನ ಕಾಯಿಲೆ ತಡೆಗೆ ಶೀಘ್ರ ಹೊಸ ಲಸಿಕೆ : ದಿನೇಶ್ ಗುಂಡೂರಾವ್

ಮಂಗನ ಕಾಯಿಲೆ ತಡೆಗೆ ಶೀಘ್ರ ಹೊಸ ಲಸಿಕೆ : ದಿನೇಶ್ ಗುಂಡೂರಾವ್

ಬೆಳಗಾವಿ, ಡಿ.11- ಮಂಗನ ಕಾಯಿಲೆ ತಡೆಗೆ ಶೀಘ್ರದಲ್ಲೇ ಹೊಸ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನ ಪರಿಷತ್ತಿಗೆ ತಿಳಿಸಿದರು.

ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ಬಿ.ಎಸ್.ಅರುಣ್ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಮಲೆನಾಡಿಗರನ್ನು ಬಿಟ್ಟು ಬಿಡದೆ ಕಾಡುತ್ತಿರುವ ಕೆಎಫ್ ಡಿ ಸಮಸ್ಯೆಯನ್ನು ಸರ್ಕಾರ ಗಂಭೀರ ಪರಿಗಣಿಸಿದೆ. ಹಾಗಾಗಿ, ಐಸಿಎಂಆರ್ ನೊಂದಿಗೆ ಚರ್ಚೆ ನಡೆಸಿದ್ದು, ಹೊಸ ಲಸಿಕೆ ಸಂಶೋಧನೆ ನಡೆಸಲಾಗುತ್ತಿದೆ ಎಂದರು.

ಸ್ಪೀಕರ್ ಸ್ಥಾನದ ಕುರಿತು ಹೇಳಿಕೆ, ಜಮೀರ್ ವಜಾಕ್ಕೆ ಪಟ್ಟು, ವಿಧಾನಸಭೆಯಲ್ಲಿ ವಾಕ್ಸಮರ

ಮಂಗನ ಕಾಯಿಲೆ ತಡೆಗೆ ನೀಡುತ್ತಿದ್ದ ಲಸಿಕೆ ವಿತರಣೆಯನ್ನು ಸ್ಥಗಿತ ಮಾಡಲಾಗಿದೆ. ಏಕೆಂದರೆ ಈ ಲಸಿಕೆ ಯಾವುದೇ ರೀತಿಯ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಹೀಗಾಗಿ, ಖಾಸಗಿ ಕಂಪನಿಯ ಸಹಯೋಗದೊಂದಿಗೆ ಸಂಶೋಧನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಮಂಗನ ಕಾಯಿಲೆ ಅತೀ ಕಡಿಮೆ ಜನರಿಗೆ ಬಾಸುತ್ತಿರುವ ಕಾರಣದಿಂದಲೇ ಇತರೆ ಕಂಪನಿಗಳು ಈ ಲಸಿಕೆ ಕಂಡು ಹಿಡಿಯಲು ಮುಂದಾಗುತ್ತಿಲ್ಲ.ಆದರೂ, ಸರ್ಕಾರ ಸಂಶೋಧನೆ ಗೆ ಧನ ಸಹಾಯ ನೀಡುವುದಾಗಿಯೂ ತಿಳಿಸಿದ್ದು, ಶೀಘ್ರವಾಗಿ ಹೊಸ ಲಸಿಕೆಯನ್ನು ರೋಗಿಗಳಿಗೆ ನೀಡಲಾಗುವುದು ಎಂದೂ ಸಚಿವರು ತಿಳಿಸಿದರು.

RELATED ARTICLES

Latest News