Friday, May 3, 2024
Homeರಾಷ್ಟ್ರೀಯವರದಕ್ಷಿಣೆಯಾಗಿ ಫಾರ್ಚೂನರ್ ಕಾರು ಕೊಡದಿದ್ದಕ್ಕೆ ಪತ್ನಿಯನ್ನು ಕೊಂದ ಪತಿ ಮತ್ತು ಅತ್ತೆಮಾವ

ವರದಕ್ಷಿಣೆಯಾಗಿ ಫಾರ್ಚೂನರ್ ಕಾರು ಕೊಡದಿದ್ದಕ್ಕೆ ಪತ್ನಿಯನ್ನು ಕೊಂದ ಪತಿ ಮತ್ತು ಅತ್ತೆಮಾವ

ನೋಯ್ಡಾ,ಏ.2- ವರದಕ್ಷಿಣೆಯಾಗಿ ಹೆಚ್ಚುವರಿ ಹಣ ಹಾಗೂ ಫಾರ್ಚೂನರ್ ಕಾರು ಕೊಡುವಂತೆ ಪೀಡಿಸಿ ಸೊಸೆಯನ್ನು ಬಡಿದು ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಇದೀಗ ಅತ್ತೆ-ಮಾವ ಹಾಗೂ ಗಂಡನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

ಕರಿಷ್ಮಾ ಕೊಲೆಯಾದ ದುರ್ದೈವಿ. ಕೊಲೆ ಆರೋಪಿಗಳಾದ ಪತಿ ವಿಕಾಸ್ ಭಟ ಅಲಿಯಾಸ್ ಬಿಟ್ಟು, ಈತನ ತಂದೆ ಸೊಂಪಲ್ ಭಟ್ಟಿ, ತಾಯಿ ಬಂತ ಆರೋಪಿಗಳು ಕರಿಷ್ಮಾ 2022 ಡಿಸೆಂಬರ್‍ನಲ್ಲಿ ವಿಕಾಸ್ ಎಂಬಾತನನ್ನು ಮದುವೆಯಾಗಿ ಕೇದಾಚೌಗಂಪುರ್ ಗ್ರಾಮದಲ್ಲಿ ವಾಸವಾಗಿದ್ದರು.

ಕಳೆದ ಮಾ.29ರಂದು ಕರಿಷ್ಮಾಳ ಅತ್ತೆ-ಮಾವ ಇಬ್ಬರೂ ತವರಿನಿಂದ ವರದಕ್ಷಿಣೆಯಾಗಿ ಫಾರ್ಚುನರ್ ಕಾರು ಹಾಗೂ ಒಂದಿಷ್ಟು ಹಣ ತರುವಂತೆ ಪೀಡಿಸಿದ್ದರು. ಅದು ಸಾಧ್ಯವಾಗದಿದ್ದರಿಂದ ಎಲ್ಲರೂ ಸೇರಿ ಆಕೆಗೆ ಕಿರುಕುಳ ನೀಡಿ ಹಲ್ಲೆ ಮಾಡಿರುವುದರಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಮದುವೆ ಅದ್ಧೂರಿಯಾಗೇ ಮಾಡಿಕೊಟ್ಟಿದ್ದೆವು. ಆದಾಗ್ಯೂ ಆಕೆಯ ಗಂಡನ ಮನೆಯಲ್ಲಿ ವರದಕ್ಷಿಣೆ ನೀಡುವಂತೆ ಪೀಡಿಸುತ್ತಿದ್ದರು ಎಂದು ಕೊಲೆಯಾದ ಕರಿಷ್ಮಾಳ ಸಹೋದರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 498ಎ (ವಿವಾಹಿತ ಮಹಿಳೆ ಮೇಲೆ ಕ್ರೌರ್ಯ), 304ಬಿ (ವರದಕ್ಷಿಣೆ ಸಾವು), 323 (ಸ್ವಯಂಪ್ರೇರಿತ ನೋವು ಉಂಟು ಮಾಡಿರುವುದು) ವರದಕ್ಷಿಣೆ ನಿಷೇಧ ಕಾಯಿದೆಯ ನಿಬಂಧನೆಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಇಕೋಟೆಕ್ ಪೊಲೀಸ್ ಠಾಣೆ ಪೊಲೀಸರು, ಇದೀಗ ಪ್ರಕರಣ ಸಂಬಂಧ ಕರಿಷ್ಮಾ ಅವರ ಪತಿ ಮತ್ತು ಆಕೆಯ ಅತ್ತೆಮಾವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಕರಣದ ಇತರ ಆರೋಪಿಗಳನ್ನು ಬಂಸಲು ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

RELATED ARTICLES

Latest News