Saturday, May 4, 2024
Homeರಾಷ್ಟ್ರೀಯಒಡಿಶಾದಲ್ಲಿ ಬಿಜೆಪಿ-ಬಿಜೆಡಿ ನಡುವೆ ಮೈತ್ರಿ.. ?

ಒಡಿಶಾದಲ್ಲಿ ಬಿಜೆಪಿ-ಬಿಜೆಡಿ ನಡುವೆ ಮೈತ್ರಿ.. ?

ಭುವನೇಶ್ವರ್, ಮಾ.13 (ಪಿಟಿಐ) : ಒಡಿಶಾದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯು ಬಿಜೆಡಿಯೊಂದಿಗೆ ಮತ್ತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ.ಈ ಕುರಿತು ತನ್ನ ನಿರ್ಧಾರವನ್ನು ಬಿಜೆಪಿ ಇಂದು ಸಂಜೆ ವೇಳೆಗೆ ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ರಾಜ್ಯ ಬಿಜೆಪಿಯ ಪ್ರಮುಖ ನಾಯಕರು ಸರಣಿ ಸಭೆಗಳನ್ನು ನಡೆಸಿದ್ದಾರೆ. ಬಿಜೆಡಿ ತನ್ನ ವಿಚಾರಗಳನ್ನು ಬಹಿರಂಗಪಡಿಸಲು ಸಿದ್ಧವಾಗಿಲ್ಲ, ಆದರೆ ರಾಜ್ಯ ಬಿಜೆಪಿ ನಾಯಕರು, ಅಧ್ಯಕ್ಷ ಮನಮೋಹನ್ ಸಮಾಲï, ಚುನಾವಣಾ ಉಸ್ತುವಾರಿ ವಿಜಯ್ ಪಾಲ್ ಸಿಂಗ್ ತೋಮರ್ ಮತ್ತು ಇತರರು – ರಾಷ್ಟ್ರ ರಾಜಧಾನಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ನಿವಾಸದಲ್ಲಿ ಬಿಜೆಪಿ ರಾಜ್ಯ ನಾಯಕರು ಸರಣಿ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಹಿಂದಿನ ವರ್ಷ ಕಂಧಮಾಲ್ನಲ್ಲಿ ನಡೆದ ಗಲಭೆಯ ತಿಂಗಳ ನಂತರ, 2009 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಕೇಸರಿ ಪಕ್ಷವನ್ನು ತ್ಯಜಿಸಿದ ಬಿಜೆಡಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದನ್ನು ರಾಜ್ಯ ಬಿಜೆಪಿ ನಾಯಕರ ಒಂದು ವಿಭಾಗ ವಿರೋ„ಸಿದೆ ಎಂದು ಅವರು ಹೇಳಿದರು.ಮಾರ್ಚ್ 5 ರಂದು ಪ್ರಧಾನಿ ನರೇಂದ್ರ ಮೋದಿ ಒಡಿಶಾಗೆ ಭೇಟಿ ನೀಡಿದ ನಂತರ ಬಿಜೆಡಿ ಮತ್ತು ಬಿಜೆಪಿ ನಡುವಿನ ಮೈತ್ರಿ ವಿಷಯ ಚರ್ಚೆಗೆ ಬಂದಿತು.

ಮರುದಿನ ಬಿಜೆಡಿ ತನ್ನ ಹಿರಿಯ ನಾಯಕರ ಸಭೆ ನಡೆಸಿತು.ಬಿಜೆಡಿ ಜೊತೆಗಿನ ಮೈತ್ರಿ ಸಾಧ್ಯತೆಯ ಕುರಿತು ಒಡಿಶಾ ಬಿಜೆಪಿ ನಾಯಕರೊಂದಿಗೆ ಮಾತನಾಡಲು ಪ್ರಧಾನ್ ಅವರನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೈತ್ರಿ ಬಗ್ಗೆ ನಮಗೆ ಯಾವುದೇ ಸಂದಿಗ್ಧತೆ ಇಲ್ಲ ಎಂದು ಬಿಜೆಡಿ ನಾಯಕ ಹಾಗೂ ಶಾಸಕ ಪರಶುರಾಮ್ ಧಾಡಾ ಹೇಳಿದ್ದಾರೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ನಿರ್ಧಾರಕ್ಕೆ ಪಕ್ಷದ ವರಿಷ್ಠರು ಬದ್ಧರಾಗಿರುತ್ತಾರೆ. ಮೈತ್ರಿ ಹೊಸದೇನಲ್ಲ, ಇದು ಹಿಂದೆಯೂ ನಡೆದಿದೆ ಮತ್ತು ಈಗ ಆಗಬಹುದು ಎಂದಿದ್ದಾರೆ.

RELATED ARTICLES

Latest News